Monday 20 March 2017

quotes on treasure ಐಶ್ವರ್ಯ

                                       37. ಐಶ್ವರ್ಯ


1.            ಆರೋಗ್ಯವು ಪರಮಲಾಭ. ಸಂತೃಪ್ತಿಯೇ ಶ್ರೇಷ್ಠ ಐಶ್ವರ್ಯ. ವಿಶ್ವಾಸಯೋಗ್ಯನೇ ಶ್ರೇಷ್ಠ ಬಂಧು. ನಿಬ್ಬಾಣವೇ ಪರಮ
ಸುಖ.      194

2.            ಗೃಹಸ್ಥನು ತಮ್ಮ ಐಶ್ವರ್ಯವನ್ನು ನಾಲ್ಕು ಭಾಗವಾಗಿ ಹಂಚಿಕೊಳ್ಳುತ್ತಾನೆ : 1. ನಿತ್ಯಬಳಕೆಗೆ  2. ದಾನಕ್ಕೆ  3. ಬಂಡವಾಳಕ್ಕೆ  4. ಆಪತ್ ಸಮಯಕ್ಕೆ.             195

3.            ಒಬ್ಬನು ಪ್ರಜ್ಞಾಪೂರ್ವಕವಾಗಿ ಯೋಚಿಸಿ ಖಚರ್ು ಮಾಡಬೇಕು. ಆತನ ಲಾಭಾಂಶವನ್ನು ಅತಿ ಖಚರ್ು ಮಾಡಬಾರದು, ಅತಿ ಕಡಿಮೆಯು ಕೂಡದು. ಏಕೆಂದರೆ ಹೆಚ್ಚು ಖಚರ್ು ಮಾಡಿದರೆ ಭಿಕಾರಿಯಾಗುತ್ತಾನೆ. ಅತಿ ಕಡಿಮೆ ಖಚರ್ು ಮಾಡಿದರೆ ಲೋಭಿಯಾಗುತ್ತಾನೆ.     196

4.            ಐಶ್ವರ್ಯ ಮುರ್ಖನನ್ನು ಮಾತ್ರ ನಾಶಗೊಳಿಸುತ್ತದೆ, ಆದರೆ ಶ್ರೇಷ್ಠತ್ವದ ಅನ್ವೇಷಣೆಗಾರನಿಗೆ ಅಲ್ಲ. ಐಶ್ವರ್ಯದ ಲೋಭಿಯು ತನ್ನನ್ನು ಮಾತ್ರವಲ್ಲ, ಪರರಿಗೂ ಹಾಳು ಮಾಡುತ್ತಾನೆ.         197

5.            ನನಗೆ ಮಕ್ಕಳುಂಟು, ನನ್ನಲ್ಲಿ ಐಶ್ವರ್ಯವಿದೆ ಎಂದು ಮೂರ್ಖನು ತೊಂದರೆಗೆ ಸಿಲುಕುತ್ತಾನೆ. ಆದರೆ ವಾಸ್ತವವಾಗಿ ಆತನಿಗೆ ಆತನೇ ಇಲ್ಲ. ಇನ್ನು ಎಲ್ಲಿಯ ಮಕ್ಕಳು, ಎಲ್ಲಿಯ ಐಶ್ವರ್ಯ ?!.      198

6.            ಉಚಿತ ಕಾರ್ಯಗಳನ್ನು ಮಾಡುವವನು, ಧೈರ್ಯವಂತನು ಹಾಗು ಪರಿಶ್ರಮವುಳ್ಳವನು ಧನ ಗಳಿಸುತ್ತಾನೆ.           199

7.            ಶ್ರೇಷ್ಠವಾದ ಧನಗಳು ಏಳು ಅವೆಂದರೆ : ಶ್ರದ್ಧೆ, ಶೀಲ, ಹಿರಿ, ಪಾಪಭೀತಿ, ವಿದ್ಯೆ, ತ್ಯಾಗ ಮತ್ತು ಪ್ರಜ್ಞೆ.     200

No comments:

Post a Comment