Monday 20 March 2017

quotes on strength ಶಕ್ತಿ

                                  33. ಶಕ್ತಿ

1.            ಈಗಿನಿಂದಲೇ ಒಬ್ಬನು ತನ್ನ ಚಿತ್ತದ ಅಭಿವೃದ್ಧಿಗಾಗಿ ಶಕ್ತಿಮೀರಿ ಶ್ರಮಿಸಬೇಕು. ಏಕೆಂದರೆ ಮರಣವು ಯಾವಾಗ ಬರುವುದು ತಿಳಿಯದು.                 172

2.            ಯಾರು ಕಠಿಣ ಪರಿಶ್ರಮಿಯೋ ಮತ್ತು ಅಪಾಯ ಸನ್ನಿವೇಶಗಳಲ್ಲಿ ನಿರ್ಭಯನೋ ಅವನಿಗೆ ಯಶಸ್ಸು
ಸಿಗುತ್ತದೆ.                173

3.            ವ್ಯಕ್ತಿಯು ಪರಾಕ್ರಮದಿಂದ ದುಃಖದ ಮುಕ್ತಾಯ
ಮಾಡುತ್ತಾನೆ.         174

4.            ಪದಗಳು ನಾಶಮಾಡುವ ಮತ್ತು ಗುಣಪಡಿಸುವ ಶಕ್ತಿಯನ್ನು ಹೊಂದಿವೆ. ಯಾವಾಗ ಪದಗಳು ಸತ್ಯ ಮತ್ತು ದಯೆಯಿಂದ ಬರುತ್ತದೋ ಆಗ ಅವು ವಿಶ್ವವನ್ನೇ ಬದಲಾಯಿಸ
ಬಲ್ಲದು.   175

5.            ಯಾವ ಭಿಕ್ಷುವು ಉತ್ಸಾಹಿತ ಪರಿಶ್ರಮದಿಂದ ಕೂಡಿರುತ್ತಾನೋ ಅಕುಶಲಗಳನ್ನು ತ್ಯಜಿಸಲು ಸದಾ ಶ್ರಮಪಡುತ್ತಾನೋ, ಕುಶಲಗಳನ್ನು ಪ್ರಾಪ್ತಿಗೊಳಿಸಿರುವನೋ, ಅದನ್ನು ಎಚ್ಚರಿಕೆಯಿಂದ ಕಾಪಾಡುತ್ತಾನೋ ರೀತಿಯಲ್ಲಿ ಆತ ಶಕ್ತಿಯನ್ನು ಗಳಿಸುತ್ತಾನೆ.          176


6.            ಐದು ಬಲಗಳಿವೆ ಅವೆಂದರೆ : ಶದ್ಧಾ ಬಲ, ವೀರ್ಯ ಬಲ, ಸ್ಮೃತಿ ಬಲ, ಸಮಾಧಿ ಬಲ ಮತ್ತು ಪ್ರಜ್ಞಾ ಬಲ.                177

No comments:

Post a Comment