Monday 6 March 2017

quotes on equinimity

24. ಸಮಚಿತ್ತತೆ



1.            ಯಾರ ಮನಸ್ಸು ಲೋಕದ ಏರುಪೆರುಗಳಲ್ಲಿ (ಸುಖ ದುಃಖಗಳಲ್ಲಿ) ಕಂಪಿಸುವುದಿಲ್ಲವೋ, ಶೋಕರಹಿತವೋ, ಕಲ್ಮಶರಹಿತವೋ ಮತ್ತು ಕ್ಷೇಮ (ಶಾಂತ)ವಾಗಿದೆಯೋ ಅದೇ ಮಂಗಳಗಳಲ್ಲಿ ಉತ್ತಮವಾದುದು.          124
2.            ಹೇಗೆ ಹೆಬ್ಬಂಡೆಯು ಬೀಸುವ ಗಾಳಿಗೂ ನಿಶ್ಚಲವಾಗಿದೆಯೋ, ಹಾಗೆಯೇ ಜ್ಞಾನಿಗಳು ಸ್ತುತಿನಿಂದೆಗಳಿಗೆ ವಿಚಲಿತರಾಗುವುದಿಲ್ಲ.
3.            ಸುಖ ಹಾಗು ದುಃಖಗಳನ್ನು ತ್ಯಾಗ ಮಾಡಿ, ಮೊದಲೇ ಸೋಮನಸ್ಸು ಮತ್ತು ದೊಮನಸ್ಸುಗಳನ್ನು ದೂರಮಾಡಿ, ವಿಶುದ್ಧವಾದ ಸಮಚಿತ್ತತೆಯ ಶ್ರೇಷ್ಠ ಸಮಾಧಿಯನ್ನು ಪ್ರಾಪ್ತಿಮಾಡಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.            126
4.            ಯಾರು ಶರೀರ ತ್ಯಾಗದ ಮುಂಚೆಯೇ ತೃಷ್ಣಾರಹಿತನೋ ಮತ್ತು ಭೂತ ಹಾಗು ಭವಿಷ್ಯದ ಆಶ್ರಿತನಲ್ಲವೋ, ಯಾರು ವರ್ತಮಾನದಲ್ಲೂ ಆಶ್ರಿತನಲ್ಲವೋ ಅವನಿಗಾಗಿ ಎಲ್ಲಿಯೂ ಆಸಕ್ತಿಯಿಲ್ಲ.              127
5.            ಯಾರು ಭವಿಷ್ಯದ ವಿಷಯದಲ್ಲಿ ಆಸಕ್ತಿ ಇಡುವುದಿಲ್ಲವೋ ಮತ್ತು ಭೂತಕಾಲದ ಬಗ್ಗೆ ಪಶ್ಚಾತ್ತಾಪ ಪಡುವುದಿಲ್ಲವೋ, ಯಾರು ಸ್ಪರ್ಶಗಳಲ್ಲಿ ವಿವೇಕದಶರ್ಿಯೋ ಆತನು ದೃಷ್ಟಿಗಳ ಜಾಲದಲ್ಲಿ ಬೀಳುವುದಿಲ್ಲ.       128

6.            ಯಾರು ಸಮಭಾವ ಚಿತ್ತನೋ, ಸದಾ ಜಾಗರೂಕನೋ, ಲೋಕದಲ್ಲಿ ಯಾರಿಗೂ ಸಮಾನವಾಗಲಿ, ಶ್ರೇಷ್ಠವೆಂದಾಗಲಿ ಅಳೆಯುವುದಿಲ್ಲವೋ ಆತನಲ್ಲಿ ರಾಗವಿರುವುದಿಲ್ಲ.     129

No comments:

Post a Comment