Thursday 3 March 2016

Quotes on truth of suffering

4. ದುಃಖ ಸತ್ಯ

1.            ಜನ್ಮ, ರೋಗ, ಜರಾ, ಮೃತ್ಯು, ಶೋಕ, ನಿರಾಶೆ, ಪ್ರಿಯರ ವಿಯೋಗ, ಅಪ್ರಿಯರ ಸಮಾಗಮ, ಆಸೆಗಳ ಅಪೂರೈಕೆ, ಅಸ್ತಿತ್ವದ ಈ ಎಲ್ಲಾ ಲಕ್ಷಣಗಳು ದುಃಖವನ್ನು ಸೂಚಿಸುತ್ತವೆ.       17


2.            ಹಸುಗಳ ಹಿಂಡನ್ನು ದನಗಾಹಿಯು ದೊಣ್ಣೆಯಿಂದ ಅಟ್ಟುವಂತೆ ಮುಪ್ಪು ಮರಣಗಳು ಜೀವಿಗಳನ್ನು ಓಡಿಸುತ್ತವೆ.    18

3.            ಇಲ್ಲಿ ಮನುಷ್ಯರ ಜೀವನ ಅನಿಮಿತ್ತ ಹಾಗು ಅಜ್ಞಾತವಾಗಿದೆ. ಕಠಿಣ ಹಾಗು ಅಲ್ಪವಾಗಿದೆ ಮತ್ತು ಅದು ಸಹಾ ದುಃಖ ಭರಿತವಾಗಿದೆ.       19


4.            ಯಾರಿಗೆ ನೂರು ಪ್ರಿಯವಾದ ವಿಷಯಗಳಿವೆಯೋ, ಆತನಿಗೆ ನೂರು ಬಗೆಯ ದುಃಖಗಳಿರುತ್ತದೆ. ಯಾರಿಗೆ ಎರಡು ಪ್ರಿಯ ವಿಷಯಗಳಿವೆಯೋ ಅವರಿಗೆ 2 ಬಗೆಯ ದುಃಖ
ಗಳಿರುತ್ತದೆ.





quotes on sangha in kannada

3. ಸಂಘ

1.            ಚಿನ್ನದ ನಾಣ್ಯಗಳ ಮಳೆಗರೆದರೂ ಇಂದ್ರಿಯಸುಖಗಳ ತೃಪ್ತಿ ಆಗುವುದಿಲ್ಲ. ಕಾಮಸುಖಗಳು ಅಲ್ಪಸ್ವಾದ ಹಾಗು ಅಪಾರ ದುಃಖದಿಂದ ಕೂಡಿದೆ. ಇದನ್ನು ಅರಿತು ಪಂಡಿತರು ದಿವ್ಯವಾದ ಸುಖಗಳಲ್ಲೂ ಆನಂದಿಸುವುದಿಲ್ಲ. ಸಮ್ಮಾಸಂಬುದ್ಧರ ಶ್ರಾವಕರು ಸದಾ ತೃಷ್ಣಾಕ್ಷಯದಲ್ಲೇ ನಿರತರಾಗುತ್ತಾರೆ.        12
2.            ಬುದ್ಧ ಭಗವಾನರ ಶಿಷ್ಯರು, ಯಾರು ಹಗಲು-ರಾತ್ರಿ ಧ್ಯಾನದಲ್ಲೇ ಆನಂದಿತರಾಗಿರುವರೋ ಅಂತಹವರು ಸದಾ ಜಾಗ್ರತೆಯಿಂದಿರುತ್ತಾರೆ.            13
3.            ಯಾರು ಪರಮ ಗಂಭೀರ ಪ್ರಜ್ಞಾವಾನ್ ಬುದ್ಧರಿಂದ ಪ್ರಕಾಶಿಸಲ್ಪಟ್ಟ ಆರ್ಯ ಸತ್ಯಗಳನ್ನು ಮನನ ಮಾಡಿದ್ದಾರೋ ಅವರು ತೀರ ಎಚ್ಚರ ತಪ್ಪಿದರೂ ಎಂಟನೆಯ ಜನ್ಮ ಪಡೆಯುವುದಿಲ್ಲ. ಇದು ಸಂಘದ ಉತ್ತಮ ರತ್ನವಾಗಿದೆ.      14
4.            ನಕ್ಷತ್ರಗಳಲ್ಲಿ ಮುಖ್ಯ ಚಂದಿರ. ಬೆಳಗುವುದರಲ್ಲಿ ಪ್ರಧಾನ ಸೂರ್ಯನಾಗಿದ್ದಾನೆ. ಇಚ್ಛಿತರ ಮುಖ್ಯ ಅಭಿಲಾಷೆ ಪುಣ್ಯವಾಗಿದೆ. ಹಾಗೆಯೇ ಪೂಜೆ ಆತಿಥ್ಯಕ್ಕೆ ಮುಖ್ಯವು ಸಂಘವಾಗಿದೆ.         15

5.            ಯಾರು ಪೂಜ್ಯಾರ್ಹರಾದವರನ್ನು, ಬುದ್ಧರನ್ನು ಅಥವಾ ಶ್ರಾವಕರನ್ನು ಪೂಜಿಸುವರೋ, ಪ್ರಪಂಚದ ತಡೆಗಳನ್ನು ದಾಟಿ ಶೋಕ ಸಂಕಟಗಳಿಂದ ಪಾರಾದ, ಮುಕ್ತರಾದ, ಶಾಂತ ಸ್ವರೂಪಿಗಳನ್ನು ಭಯವಿಲ್ಲದವರನ್ನು ಯಾರು ಪೂಜಿಸುವರೋ ಅವರು ಗಳಿಸಿದ ಪುಣ್ಯವನ್ನು ಯಾವುದರಿಂದಲೂ ಅಳಿಯಲು ಸಾಧ್ಯವಿಲ್ಲ.  16

quotes on Dhamma in kannada

2. ಧಮ್ಮ


1.            ಸರ್ವ ಪಾಪವನ್ನು ಮಾಡದಿರುವುದು, ಕುಶಲವನ್ನು (ಒಳ್ಳೆಯತನವನ್ನು) ಸಂಪಾದಿಸುವುದು, ಸ್ವಚಿತ್ತವನ್ನು ಪರಿಶುದ್ಧಿ ಗೊಳಿಸುವುದು - ಇದೇ ಬುದ್ಧರ ಶಾಸನವಾಗಿದೆ.       7
2.            ಕೆಟ್ಟದ್ದನ್ನು ಆಡದಿರುವುದು, ನೋಯಿಸದಿರುವುದು, ಪಾತಿಮೋಕ್ಖ (ಭಿಕ್ಖುನಿಯಮ) ಅನುಸಾರವಾಗಿ ಸಂಯಮದಿಂದಿರುವುದು, ಆಹಾರದಲ್ಲಿ ಮಿತವಾಗಿರುವುದು, ಒಂಟಿಯಾಗಿ ವಾಸಿಸುವುದು, ಮನವನ್ನು ಯಾವಾಗಲೂ ಧ್ಯಾನ ಉನ್ನತಿಯಲ್ಲಿ ನೆಲೆ ಮಾಡುವುದು - ಇದೇ ಬುದ್ಧರ ಶಾಸನವಾಗಿದೆ.      8
3.            ಕಾರಣದಿಂದಾಗುವ ಎಲ್ಲಾ ವಿಷಯಗಳನ್ನು (ಧಮ್ಮವನ್ನು), ಅವುಗಳ ಸ್ಪಷ್ಟ ಕಾರಣಗಳನ್ನು ಮಹಾಸಮಣರು ತಿಳಿಸಿದ್ದಾರೆ ಮತ್ತು ತಥಾಗತರು ಅವುಗಳ ನಿರೋಧವನ್ನು ಹಾಗು ಅದರ ಮಾರ್ಗವನ್ನು ಸಹಾ ತಿಳಿಸಿದ್ದಾರೆ.    9
4.            ಧಮ್ಮದಾನವು ಎಲ್ಲಾ ದಾನಗಳಿಗಿಂತ ಶ್ರೇಷ್ಠ, ಧಮ್ಮರಸವು ಉಳಿದ ರಸಗಳಿಗಿಂತ ಶ್ರೇಷ್ಠ, ಧಮ್ಮಾನಂದವು ಉಳಿದ ಆನಂದಗಳಿಗಿಂತ ಶ್ರೇಷ್ಠ. ಯಾರು ತೃಷ್ಣೆಯನ್ನು ನಾಶಪಡಿಸಿಕೊಂಡಿರುವರೋ ಅವರು ದುಃಖವೆಲ್ಲದರಿಂದ ಮುಕ್ತರಾಗಿದ್ದಾರೆ.   10

5.            ಈ ಧಮ್ಮವು ಬಂದು ಸಾಧಿಸುವವರಿಗೆ ಹೊರತು ಬಂದು ನಂಬುವವರಿಗಲ್ಲ. ಇದು ರಾಗ ದ್ವೇಷ ಮತ್ತು ಮೋಹದಿಂದ ಪೀಡಿತರಾಗಿರುವವರಿಗೆ ಅರಿಯಲಾಗುವುದಿಲ್ಲ. 11