Monday 6 March 2017

quotes on wisdom ಪ್ರಜ್ಞಾ

21. ಪ್ರಜ್ಞಾ
1.            ಶ್ರೇಷ್ಠ (ಅಲೌಕಿಕ) ವಿಷಯಗಳ ಅರಿವಿಗೆ ಪ್ರಜ್ಞಾ ಎನ್ನುತ್ತಾರೆ. ಮಾನವನ ಲೌಕಿಕ ವ್ಯವಹಾರಗಳ ಅರಿವಿಗೆ ಜ್ಞಾನ
ಎನ್ನುತ್ತಾರೆ.             107
2.            ಮೂರು ಬಗೆಯ ತರಬೇತಿಗಳಿವೆ ಅವೆಂದರೆ : ಶ್ರೇಷ್ಠ ಶೀಲ, ಶ್ರೇಷ್ಠ ಸಮಾಧಿ ಮತ್ತು ಶ್ರೇಷ್ಠ ಪ್ರಜ್ಞಾ.        108
3.            ಯಾರ ಮನಸ್ಸು ಅಸ್ಥಿರವೋ, ಯಾರು ಜ್ಞಾನವನ್ನು ಅರಿಯಲಾರನೋ, ಯಾರ ಶ್ರದ್ಧೆಯು ಅಲುಗಾಡುತ್ತಿದೆಯೋ ಅಂತಹವನ ಪ್ರಜ್ಞೆಯು ಪೂರ್ಣವಾಗಲಾರದು.             109
4.            ಪ್ರಜ್ಞಾ ಜೀವಿಯ ಜೀವನವೇ ಶ್ರೇಷ್ಠ.        110
5.            ನಿಬ್ಬಾಣ ಪ್ರಾಪ್ತಿಗಾಗಿ ಅರಹಂತರ ಧಮ್ಮದಲ್ಲಿ ಶ್ರದ್ಧೆಯಿಟ್ಟು ಅಪ್ರಮಾದಿ ಹಾಗು ಚತುರ ವ್ಯಕ್ತಿ ಶ್ರದ್ಧಾಪೂರ್ವಕವಾಗಿ ಧಮ್ಮವನ್ನು ಕೇಳಿ ಪ್ರಜ್ಞಾ ಗಳಿಸುತ್ತಾನೆ.          111
6.            ಪ್ರಜ್ಞಾವು ಮೂರು ವಿಧ : 1. ಕೇಳಿ ಅಥವಾ ಓದಿ ಪಡೆದ ಜ್ಞಾನ  2. ಚಿಂತನೆಯಿಂದ ಗಳಿಸಿದ ಜ್ಞಾನ  3. ಸಾಕ್ಷಾತ್ಕಾರ.              112


No comments:

Post a Comment