Saturday, 29 April 2017

QUOTES ON CELIBACY ಬ್ರಹ್ಮಚರ್ಯ

                                 80. ಬ್ರಹ್ಮಚರ್ಯ


1.            ಅತಿ ನಿದ್ರಾವಂತನಾಗದಿರಲಿ, ಪ್ರಯತ್ನಶೀಲನಾಗಲಿ ಹಾಗು ಜಾಗರೂಕನಾಗಲಿ, ತೂಗಾಡಿಕೆ, ಮಾಯಾವಿತನ, ನಗು, ಹಾಸ್ಯ, ಆಟ, ಕ್ರೀಡೆ ಮತ್ತು ಮೈಥುನ ಹಾಗು ಶೃಂಗಾರವನ್ನು
ತ್ಯಜಿಸಲಿ.                400

2.            ಸರ್ಪದ ಹೆಡೆಯಿಂದ ಕಾಲುಗಳನ್ನು ರಕ್ಷಿಸುವ ಹಾಗೇ ಯಾರು ಕಾಮಗಳನ್ನು ತ್ಯಾಗ ಮಾಡುವನೋ ಆತನು ಸಂಸಾರದಲ್ಲಿ ಎಚ್ಚರಿಕೆಯಿಂದ ವಿಷಪೂರಿತದಂತಿರುವ ಬಯಕೆಯನ್ನು ತ್ಯಜಿಸುವನು.             401

3.            ಮೊದಲು ಆತನ ಯಾವ ಯಶಸ್ಸು ಮತ್ತು ಕೀತರ್ಿ ಇತ್ತೋ ಅದೆಲ್ಲವೂ ಇದರಿಂದ (ಕಾಮ) ನಷ್ಟವಾಗುತ್ತದೆ. ಇದನ್ನು ಕಂಡಾದರೂ ಮೈಥುನವನ್ನು ತ್ಯಜಿಸುವ ಅಭ್ಯಾಸ ಮಾಡಲಿ.

4.            ಯಾರು ಬಯಕೆಗಳಿಗೆ ವಶಿಯಾಗಿದ್ದಾನೋ ಭಿಕಾರಿಯಂತೆ ಯೋಚಿಸುವನೋ ಇಂತಹ ವ್ಯಕ್ತಿಯು ಪರರ ನಿಂದೆ ಕೇಳಿ ಮೌನವಾಗುತ್ತಾನೆ.                403

5.            ಎಲ್ಲಿಯವರೆಗೆ ನರನಾರಿಯರಿಗೆ ಇರುವ ಬಂಧನವು ಅದು ಎಷ್ಟೇ ಅಲ್ಪವಾಗಿರಲಿ, ಅದು ಕಡಿದು ಹಾಕಲ್ಪಟ್ಟಿಲ್ಲವೋ ಅಲ್ಲಿಯವರೆಗೆ ಹಾಲು ಕುಡಿಯುವ ಕರು ಹಸುವಿಗೆ ಅಂಟಿರುವಂತೆ ಮನುಷ್ಯನ ಮನಸ್ಸು ಬಂಧನಕ್ಕೆ ಸಿಕ್ಕಿಕೊಂಡಿರುತ್ತದೆ.          404


6.            ಯೌವ್ವನದಲ್ಲಿ ಬ್ರಹ್ಮಚಾರ್ಯ ಪಾಲಿಸದವನು ಅಥವಾ ಧನವನ್ನು ಗಳಿಸದವನು. ಗುರಿ ತಲುಪದ ಬಾಣಗಳಂತೆ ಅಪ್ರಯೋಜಕನಾಗಿ ಹಿಂದಿನದನ್ನು ಹಲುಬುತ್ತಾ ಮುದಿಯಾಗಿ ಬಿದ್ದಿರುವನು. 40

QUOTES ON ARGUMENTS ವಾದ-ವಿವಾದ

                               79. ವಾದ-ವಿವಾದ


1.            ವಾದಿಯು ಪರಿಷತ್ತಿನ ಮಧ್ಯದಲ್ಲಿ ತನ್ನ ವಾದದ ಸಮರ್ಥನೆಗಾಗಿ ಪ್ರಶಂಸಿತನಾಗುತ್ತಾನೆ. ಆತನು ಮನಕ್ಕೆ ಅನುಸಾರವಾಗಿ ನಗುತ್ತಾನೆ ಹಾಗು ಅಭಿಮಾನಪಡುತ್ತಾನೆ.            395

2.            ಅವರು ವಿವಾದ ಕಾಮನೆಯಿಂದ ಪರಿಷತ್ತಿಗೆ ಹೋಗಿ ಒಬ್ಬರು ಇನ್ನೊಬ್ಬರಿಗೆ ಮೂರ್ಖರೆನ್ನುತ್ತಾರೆ. ವಿಭಿನ್ನ ಗುರುಗಳನ್ನು ನಂಬುತ್ತಾ ಅವರ ಪ್ರಶಂಸೆ ಮಾಡುತ್ತಾರೆ ಮತ್ತು ತಮ್ಮನ್ನು ಕುಶಲರೆಂದು ಭಾವಿಸುತ್ತಾರೆ.  396

3.            ಪ್ರಶ್ನೆ ಕೇಳಿದಾಗ ಪರಾಜಿತನಾಗಿ, ಪರಾಜಯವನ್ನು ತೋರಿಸಿದಾಗ ನಿರಾಸ್ತ್ರ ಮನುಷ್ಯನು ವಿಲಾಪಿಸುತ್ತಾನೆ, ಶೋಕ ಪಡುತ್ತಾನೆ ಮತ್ತು ಪ್ರತಿವಾದಿಯು ತನ್ನನ್ನು ಸೋಲಿಸಿದನು ಎಂದು ಯೋಚಿಸಿ ಪಶ್ಚಾತ್ತಾಪಪಟ್ಟು ಶೋಕಿಸುತ್ತಾನೆ.              397

4.            ವಿವಾದವು ಶ್ರಮಣರಲ್ಲಿ ಉಂಟಾಗುತ್ತದೆ. ಅವರಲ್ಲಿ ಪ್ರಹಾರ ಮತ್ತು ಪ್ರತಿ ಪ್ರಹಾರ ಆಗುತ್ತದೆ. ವಿಷಯವನ್ನು ಕಂಡು ವಿವಾದದಿಂದ ರಹಿತರಾಗಲಿ ಇದರಿಂದ ಪ್ರಶಂಸೆಯ ವಿನಃ ಬೇರೆ ಯಾವ ಲಾಭವೂ ಇಲ್ಲ.             398


5.            ಆತನು ಅಭಿಮಾನವನ್ನು ವಿನಾಶದ ಕಾರಣ ಎಂದು ಅರಿಯದೆ ಅಭಿಮಾನದ ಹಾಗು ಗರ್ವದ ಮಾತನಾಡುತ್ತಾನೆ. ಇದನ್ನು ಕಂಡು ಸಹಾ ವಿವಾದದಲ್ಲಿ ಬೀಳದಿರಲಿ. ಕುಶಲ ವ್ಯಕ್ತಿಗಳು ಅದನ್ನು ಶುದ್ಧಿ ಎಂದು ಹೇಳಲಾರರು.  399

QUOTES ON DEATH ಮರಣ

                                 78. ಮರಣ


1.            ಮರಗಳಲ್ಲಿನ ಫಲಗಳಿಗೆ ಬೀಳುವ ಭಯವಿರುವಂತೆ ಹಾಗೆಯೇ ಜನ್ಮಿಸಿರುವ ಜೀವಿಗಳಿಗೆ ನಿತ್ಯವೂ ಮೃತ್ಯುವಿನ ಭಯವಿರುತ್ತದೆ.

2.            ಹೇಗೆ ಕುಂಬಾರನಿಂದ ಸಿದ್ಧವಾಗಿರುವ ಮಣ್ಣಿನ ಪಾತ್ರೆಗಳು ಚೂರಾಗುವ ಸ್ವಭಾವವುಳ್ಳದ್ದಾಗಿದೆಯೋ ಹಾಗೆಯೇ ಜೀವಿಗಳ ಜೀವನವು ಇದೆ.                392

3.            ರೀತಿಯಿಂದ ಲೋಕವು ಮೃತ್ಯು ಹಾಗು ವೃದ್ಧಾಪ್ಯದಿಂದ ಪೀಡಿತವಾಗಿದೆ. ಆದ್ದರಿಂದ ಧೀರಪುರುಷರು ಲೋಕದ ಸ್ವಭಾವ ಅರಿತು ಶೋಕಪಡುವುದಿಲ್ಲ. 393


4.            ವಿಲಾಪಿಸುವುದರಿಂದ ಅಲ್ಪವು ಪ್ರಯೋಜನವಾಗುವ ಹಾಗಿದ್ದರೆ ಬುದ್ಧಿವಂತ ವ್ಯಕ್ತಿಯು ಹಾಗೆಯೇ ತನಗೆ ನೋವುಂಟು ಮಾಡಿಕೊಳ್ಳಲಿ. ಆದರೆ ಹಾಗೆ ಆಗದಿರುವಾಗ ಶೋಕಿಸದಿರಲಿ, ಅದು ನಿರರ್ಥಕ.           394

QUOTES ON SHABBY ನೀಚ

                                    77. ನೀಚ


1.            ಯಾರು ಮಾನವ, ಪ್ರಾಣಿ ಹಾಗು ಅಂಡಜಗಳಿಗೆ ಹಿಂಸಿಸು ವನೋ, ಯಾರಿಗೆ ಪ್ರಾಣಿಗಳ ಬಗೆಗೆ ದಯೆಯೇ ಇಲ್ಲವೋ, ಆತನನ್ನು ನೀಚನೆಂದು ಭಾವಿಸು. 387

2.            ಯಾರು ಗ್ರಾಮಗಳನ್ನು, ಹಳ್ಳಿಗಳನ್ನು ನಷ್ಟ ಮಾಡುವನೋ ಹಾಗು ಆಕ್ರಮಣ ಮಾಡುವನೋ, ಯಾರು ಕುಖ್ಯಾತನಾಗಿರುವ ಅತ್ಯಾಚಾರಿಯೋ ಆತನನ್ನು ನೀಚನೆಂದು ಭಾವಿಸು.            388

3.            ಯಾರು ಬಲತ್ಕಾರದಿಂದ ಅಥವಾ ಪ್ರೇಮದಿಂದ ಸೋದರ ಸಂಬಂಧಿಗಳ ಅಥವಾ ಮಿತ್ರರ ಸ್ತ್ರೀಯರೊಂದಿಗೆ ಕಾಣುವನೋ ಆತನನ್ನು ನೀಚನೆಂದು ತಿಳಿದುಕೋ.       389


4.            ಯಾರು ಸಹಾ ಜನ್ಮದಿಂದ ನೀಚರಾಗುವುದಿಲ್ಲ. ಅಥವಾ ಬ್ರಾಹ್ಮಣರೂ ಆಗುವುದಿಲ್ಲ. ಕರ್ಮದಿಂದಲೇ ನೀಚರೂ ಆಗುತ್ತಾರೆ ಮತ್ತು ಕರ್ಮದಿಂದಲೇ ಬ್ರಾಹ್ಮಣರು ಆಗುತ್ತಾರೆ.                390

QUOTES ON MONK ಭಿಕ್ಷು

                                      76. ಭಿಕ್ಷು


1.            ನಯನಗಳನ್ನು ಕೆಳಗೆ ನೆಟ್ಟು, ವೇಗವಾಗಿ ನಡೆಯದೆ, ಇಂದ್ರಿಯ ಗಳನ್ನು ಸಂಯಮಗೊಳಿಸಿದ, ಮನವನ್ನು ವಶಗೊಳಿಸಿರುವ ತೀವ್ರ ಬಯಕೆ ಹಾಗು ಕಾಮವಾಸನೆಯಿಂದ ದೂರಾಗಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.        382

2.            ಶಬ್ದಕ್ಕೆ ಹೆದರದೆ ಸಿಂಹದ ಸಮಾನನಾಗು, ವಾಯುವಿನಂತೆ ಬಲೆಗೆ ಬೀಳದವನಾಗು, ಜಲದಿಂದ ಲಿಪ್ತವಾಗದ ಕಮಲದ ಸಮಾನನಾಗು, ಖಡ್ಗಮೃಗದಂತೆ ಏಕಾಂಗಿಯಾಗಿ ಸಂಚರಿಸು.

3.            ಯಾರು ಸ್ವಯಂ ತನ್ನದೇ ರೀತಿಯಲ್ಲಿ ನಿಮರ್ಿತವಾದ ಮಾರ್ಗದಲ್ಲಿ ಕ್ರಮಿಸಿ ಸಂಶಯರಹಿತನೊ, ನಿಬ್ಬಾಣ ಪ್ರಾಪ್ತನೋ, ಜನ್ಮ ಮರಣಗಳನ್ನು ಮೀರಿರುವನೋ, ಬ್ರಹ್ಮಚಾರ್ಯ ಪೂರ್ಣನೋ ಮತ್ತು ಯಾರ ಪುನರ್ಜನ್ಮ ಇಲ್ಲವಾಗಿದೆಯೋ ಆತನೇ ಭಿಕ್ಷು.

4.            ಅನ್ನ ಅಥವಾ ಪೇಯ, ಖಾದ್ಯ ಅಥವಾ ವಸ್ತ್ರಗಳು ಸಿಕ್ಕಿದಾಗ ಅದರ ಸಂಗ್ರಹಣೆ ಮಾಡದಿರಲಿ. ಅದೆಲ್ಲವೂ ಸಿಗದೆ ಇದ್ದಾಗ ಚಿಂತೆ ಮಾಡದಿರಲಿ.                385


5.            ಭಿಕ್ಷುವು ಕ್ರಮ-ವಿಕ್ರಯಗಳಲ್ಲಿ ತೊಡಗದಿರಲಿ, ಎಲ್ಲಿಯೂ ಯಾರಿಗೂ ದೂಷಿಸದಿರಲಿ, ಗ್ರಾಮದಲ್ಲಿ ಯಾರಿಗೂ ಬಯ್ಯದಿರಲಿ ಮತ್ತು ಲಾಭದ ಇಚ್ಛೆಯಿಂದ ಜನರನ್ನು ಆಕಷರ್ಿಸಿ ಮಾತನಾಡದಿರಲಿ.       386

QUOTES ON SENSE PLEASURE ಇಂದ್ರಿಯ ಸುಖಗಳು

                            75. ಇಂದ್ರಿಯ ಸುಖಗಳು


1.            ಇದು ಬಂಧನಕಾರಿ. ಇದರಲ್ಲಿ ಅಲ್ಪ ಸ್ವಾದವಿದೆ ಹಾಗು ಅಪಾರ ದುಃಖವಿದೆ. ಜ್ಞಾನಿ ಪುರುಷ ಇದು ಹುಣ್ಣು ಎಂದು ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸುತ್ತಾನೆ.          377

2.            ಲೋಕವು ಐದು ಕಾಮಭೋಗಗಳಲ್ಲಿ ಹಾಗು ಆರನೆಯದಾದ ಚಿತ್ತದಲ್ಲಿ ಆಸಕ್ತಿ ತೊರೆದರೆ ದುಃಖದಿಂದ ಮುಕ್ತಿ ದೊರೆಯುತ್ತದೆ.

3.            ಒಂದುವೇಳೆ ಇಚ್ಛಿಸುವವನು, ತೃಷ್ಣೆಗೆ ವಶಿಭೂತನು ಆದ ಅವನ ಕಾಮಭೋಗಗಳ ವಸ್ತುಗಳು (ವ್ಯಕ್ತಿಗಳು) ನಷ್ಟವಾದರೆ ಆತನು ಬಾಣವು ಚುಚ್ಚಿದಂತೆ ಪೀಡಿತನಾಗುತ್ತಾನೆ.            379

4.            ಆದ್ದರಿಂದ ವ್ಯಕ್ತಿಯು ಸದಾ ಸ್ಮೃತಿವಂತನು ಆಗಿ ಕಾಮಬೋಗ ಗಳನ್ನು ಪರಿತ್ಯಜಿಸಬೇಕು. ಅವುಗಳನ್ನು ತ್ಯಜಿಸಲಿ, ನಾವೆಯಿಂದ ನೀರನ್ನು ಬರಿದು ಮಾಡಿ ಭವಸಾಗರವನ್ನು ದಾಟಿ ಹೋಗಲಿ.


5.            ಹೇಗೆ ಸ್ವಪ್ನದಲ್ಲಿ ಕಂಡ ವಸ್ತುವನ್ನು ಜಾಗೃತರಾದ ಮೇಲೆ ನೋಡಲಾರರೋ ಅದೇರೀತಿ ಪ್ರಿಯ ಜನರನ್ನು ಮೃತ್ಯುವಿನ ಅನಂತರ ನೋಡಲಾರರು.      381

QUOTES ON NEGLIGENCE ಅಲಕ್ಷ

                                     74. ಅಲಕ್ಷ


1.            ಅಲಕ್ಷದಷ್ಟು ನಷ್ಟಕಾರಿ ಇನ್ನೊಂದನ್ನು ನಾನು ಕಾಣುತ್ತಿಲ್ಲ. ಅಲಕ್ಷವು ಗೊಂದಲವನ್ನು ಉಂಟುಮಾಡಿ, ಜ್ಞಾನವಿಹೀನನನ್ನಾಗಿ ಮಾಡುತ್ತದೆ. ಸರ್ವ ಅಕುಶಲ ಸ್ಥಿತಿಗಳನ್ನು ಹೆಚ್ಚಿಸುತ್ತದೆ. 373

2.            ಯಾರು ಇಚ್ಛೆಗಳಿಗೆ ವಶಿಭೂತರೋ, ಸಾಂಸಾರಿಕ ಸುಖಗಳಲ್ಲಿ ಬಂಧಿತರೋ, ಅವರ ಮುಕ್ತಿ ಅತಿ ಕಠಿಣವಾಗಿದೆ. ಏಕೆಂದರೆ ಅವರು ಬೇರೆಯವರಿಂದ ಮುಕ್ತಿ ಹೊಂದಲಾರರು. ಅವರು ಭೂತ ಹಾಗು ಭವಿಷ್ಯದ ಮಾತುಗಳಿಗೆ ಅಲಕ್ಷ ಮಾಡುತ್ತಾರೆ. ಕೇವಲ ವರ್ತಮಾನದ ಕಾಮನೆಗಳಿಗೆ ಹಾತೊರೆಯುತ್ತಾರೆ.               374

3.            ಪರಮಾರ್ಥದ ಪ್ರಾಪ್ತಿಗೆ ಸತತ ಯತ್ನಶೀಲನಾಗು, ಜಾಗರೂಕ ನಾಗು, ಅಲಸ್ಯವನ್ನು ತ್ಯಜಿಸು. ದೃಢಸಂಕಲ್ಪನಾಗು, ಸ್ಥೈರ್ಯ ಹಾಗು ಬಲದಿಂದ ಕೂಡಿ ಖಡ್ಗ ಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.           375


4.            ಅಲಕ್ಷವು ರಜವಾಗಿದೆ. ಪ್ರಮಾದದ ಕಾರಣದಿಂದ ರಜ ಉತ್ಪನ್ನವಾಗುತ್ತದೆ. ಜಾಗರೂಕ ಮತ್ತು ವಿದ್ಯೆಯಿಂದ ತನ್ನ ಮುಳ್ಳುಗಳನ್ನು ಕಿತ್ತು ಬಿಸಾಡಲಿ.               376

QUOTES ON WISE ಪ್ರಜ್ಞಾವಂತ

                        73. ಪ್ರಜ್ಞಾವಂತ


1.            ಯಾರು ಹಿಂದಿನ ಕಶ್ಮಲಗಳನ್ನು ತೊರೆದು ಹೊಸ ಕಶ್ಮಲಗಳನ್ನು ಉತ್ಪತ್ತಿ ಮಾಡಲಾರನೋ, ಇಚ್ಛಾರಹಿತನೋ, ವಾದದಲ್ಲಿ ಅನಾಸಕ್ತನೋ, ದೃಷ್ಟಿಗಳಿಂದ ಪೂರ್ಣ ಮುಕ್ತನಾದ ಧೀರನು ಸಂಸಾರದಲ್ಲಿ ಲಿಪ್ತನಾಗಲಾರ ಮತ್ತು ಆತನು ತನ್ನ ನಿಂದೆಯನ್ನು ಮಾಡಿಕೊಳ್ಳಲಾರ.     369

2.            ಯಾರಿಗೆ ದೇಹ ಮತ್ತು ಮನಸ್ಸಿನ ಬಗ್ಗೆ ಸರ್ವಸ್ವವು ಮಮತೆ ಯಿಲ್ಲವೋ ಯಾರು ಇಲ್ಲದುದಕ್ಕಾಗಿ ಶೋಕಪಡುವುದಿಲ್ಲವೋ ಆತನು ಲೋಕದಲ್ಲಿ ಜನ್ಮಗ್ರಹಣೆ, ಮಾಡುವುದಿಲ್ಲ.                370

3.            ಯಾವಾಗ ನಿಮಗೆ ಕೆಲವು ವಿಷಯಗಳು ಅಕುಶಲವಾದವು ಮತ್ತು ಪಾಪವಾದವು, ತಪ್ಪಾಗಿರುವಂತಹದು ಎನಿಸುತ್ತದೆಯೋ ಆಗ ನೀವು ಅವನ್ನು ವಜರ್ಿಸಿ ಮತ್ತು ಹಾಗೆಯೇ ಯಾವಾಗ ನಿಮಗೆ ಕೆಲವು ವಿಷಯಗಳು ಕುಶಲವಾದವು. ಒಳ್ಳೆಯದು (ಸರಿಯಾದುದು) ಎನಿಸುತ್ತದೊ ಅವನ್ನು ಸ್ವೀಕರಿಸಿ ಕ್ರಿಯೆಗಳನ್ನು ಮಾಡಿರಿ.       371


4.            ಯಾರು ಅಸಾರವಾದುದನ್ನು ಸಾರವೆಂತಲೂ (ಕಲ್ಪನೆಯಲ್ಲಿ ವಾಸ್ತವ) ಮತ್ತು ಸಾರವಾದುದರಲ್ಲಿ ಅಸಾರವನ್ನು (ವಾಸ್ತವದಲ್ಲಿ ಕಲ್ಪನೆಯನ್ನು) ಹುಡುಕುತ್ತಾರೊ ಅವರು ಎಂದಿಗೂ ಸಾರವಾದುದರ ಕಡೆಗೆ ತಲುಪಲಾರರು.           372

QUOTES ON WRONG VIEWS ಮಿಥ್ಯಾ ದೃಷ್ಟಿ (ಮೂಢನಂಬಿಕೆಗಳು)


                               72. ಮಿಥ್ಯಾ ದೃಷ್ಟಿ (ಮೂಢನಂಬಿಕೆಗಳು)


1.            ಮಿಥ್ಯಾದೃಷ್ಟಿಗಳು 3 ವಿಧದ್ದಾಗಿದೆ : ಎಲ್ಲವೂ ನಮ್ಮ ಹಿಂದಿನ ಜನ್ಮದ ಪರಿಣಾಮ ಎಂದು ಭಾವಿಸುವುದು. ಪ್ರತಿಯೊಂದು ದೇವರ ಅಥವಾ ವಿಧಿಯ ಕೈವಾಡ ಎಂದು ಭಾವಿಸುವುದು ಮತ್ತು ಪ್ರತಿಯೊಂದಕ್ಕೂ ಕಾರಣವೇ ಇಲ್ಲ ಎಂದು ಭಾವಿಸುವುದು.

2.            ಶುದ್ಧ ವ್ಯಕ್ತಿಯು ಲೋಕದಲ್ಲಿ ಎಲ್ಲಿಯೂ ಕಲ್ಪಿತ ದೃಷ್ಟಿ ಹೊಂದಿರಲಾರನು. ಶುದ್ಧ ವ್ಯಕ್ತಿಯು ಮಾಯಾ ಮತ್ತು ಅಭಿಮಾನವನ್ನು ತ್ಯಜಿಸಿ ಅನಾಸಕ್ತನಾಗಿ ಮತ್ತೆ ಯಾವ ಕಾರಣಕ್ಕಾಗಿ ವಿವಾದದಲ್ಲಿ ಬೀಳಬೇಕು?   365

3.            ಆತನಲ್ಲಿ ಆತ್ಮದೃಷ್ಟಿಯಾಗಲಿ ಹಾಗು ಲೋಕಾಯುತ (ಭೌತಿಕವಾದ) ದೃಷ್ಟಿಯಾಗಲಿ ಇರುವುದಿಲ್ಲ. ಆತನು ಇಲ್ಲಿಯೆ ಸರ್ವದೃಷ್ಟಿಗಳನ್ನು ನಷ್ಟಪಡಿಸಿರುವನು. 366

4.            ಸಿದ್ಧಾಂತ, ಶ್ರುತಿ, ಶೀಲವ್ರತ ಮತ್ತು ವಿಚಾರಶೀಲತೆಯಿಂದಲೇ (ಅಥವಾ ಯಾವುದಾದರೂ ಒಂದರಿಂದಲೇ) ಯಾರೊಬ್ಬರು ಶುದ್ಧರಾಗಲಾರರು. ಯಾರು ಪಾಪ ಪುಣ್ಯಗಳಲ್ಲಿ ಲಿಪ್ತರಾಗುವುದಿಲ್ಲವೋ, ಯಾರು ಸ್ವ-ತ್ಯಾಗಿಯೋ ಮತ್ತು ಪಾಪಗಳನ್ನು ಮಾಡದವನೇ ಶುದ್ಧನಾಗುವನು.                367


5.            ನಾನು ಇದೇ ಸತ್ಯ ಎಂದು ಹೇಳುವುದಿಲ್ಲ, ಅಂತಹ ವಿಷಯ ಎತ್ತಿ ಜನರು ಪರರನ್ನು ಮೂರ್ಖರೆನ್ನುವರು. ಅವರು ತಮ್ಮ ತಮ್ಮ ದೃಷ್ಟಿಯನ್ನು ಸತ್ಯಸಿದ್ಧ ಮಾಡುವರು ಮತ್ತು ಪರರನ್ನು ಮೂರ್ಖ ಎನ್ನುವರು. 368

quotes on defilements ಕಶ್ಮಲಗಳು

                                   71. ಕಶ್ಮಲಗಳು

1.            ಬೆಳ್ಳಿಯಲ್ಲಿನ ಕಶ್ಮಲಗಳನ್ನು ಅಕ್ಕಸಾಲಿಯು ತೆಗೆದುಹಾಕುವ ರೀತಿ ವಿವೇಕಿಯು ತನ್ನಲ್ಲಿನ ಕಶ್ಮಲಗಳನ್ನು ಕ್ರಮ ಕ್ರಮವಾಗಿ ಕ್ಷಣಕ್ಷಣಕ್ಕೂ ತೆಗೆದು ಹಾಕಬೇಕು.                360

2.            ಸುಖಭೋಗಗಳನ್ನು ತ್ಯಜಿಸಿ ಅಡ್ಡಿಗಳಿಲ್ಲದೆ ಜ್ಞಾನಿಯು ತನ್ನ ಚಿತ್ತವನ್ನು ಕಶ್ಮಲಗಳಿಂದ ಶುದ್ಧಿಗೊಳಿಸುತ್ತಾನೆ.            361

3.            ನೆನಪಿಸಿಕೊಳ್ಳದಿರುವಿಕೆಯು ಜ್ಞಾನಕ್ಕೆ ಮಲ, ಸೋಮಾರಿತನವು ಸೌಂದರ್ಯಕ್ಕೆ ಮಲ, ಗಮನಹರಿಸದಿರುವಿಕೆ ಮನೆಗೆ ಮಲ, ಅಜಾಗ್ರತೆ ರಕ್ಷಣೆಗೆ ಮಲ.         362


4.            ಲೋಭ, ಮೋಸ, ತೃಷ್ಣೆ, ಬಾಯಾರಿಕೆ, ಚಿತ್ತ, ಮಲೀನತೆ ಹಾಗು ಮೋಹದಿಂದ ರಹಿತನಾಗು, ಯಾವುದೇ ಪ್ರಕಾರದ ಇಚ್ಛೆ ಮಾಡದೆ ಸಂಸಾರದ ಸರ್ವ ಆಸಕ್ತಿಯನ್ನು ತ್ಯಜಿಸಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.       363

Sunday, 23 April 2017

THE QUOTES ON SUCCESS ಯಶಸ್ಸು

                            70. ಯಶಸ್ಸು


1.            ಒಬ್ಬನು ಸಾವಿರ ಸಾರಿ ಸಾವಿರ ಯೋಧರನ್ನು ಗೆಲ್ಲಬಹುದು. ಆದರೆ ತನ್ನನ್ನು ಗೆದ್ದವನು ಮಾತ್ರ ಶ್ರೇಷ್ಠ ವಿಜಯಶಾಲಿ. 355

2.            ನಿನ್ನ ತಪ್ಪುಗಳನ್ನು ಅರಿತುಕೋ ಮತ್ತು ನಿನ್ನ ಅಭಿವೃದ್ಧಿಯನ್ನು ಗಮನಿಸು.               356

3.            ಶ್ರೇಷ್ಠ ಪ್ರಾಪ್ತಿಗಳೆಂದರೆ : ಪ್ರಜ್ಞಾಭಿವೃದ್ಧಿ, ಶೀಲಾಭಿವೃದ್ಧಿ, ದಾನಹೃದಯ ಮತ್ತು ಭಕ್ತಿ.              357

4.            ಸಂಯಮ, ಏಕಾಗ್ರತೆ, ಅವ್ಯಗ್ರತೆ, ಕಾಲಕ್ಕೆ ತಕ್ಕ ನಿಷ್ಕ್ರಮಣ ದೃಢ ಪರಾಕ್ರಮಿ, ಗುಣವಿರುವವರು ಜಯಶಾಲಿಗಳು  ಆಗುತ್ತಾರೆ.              358

5.            ಜ್ಞಾನಿಯೊಬ್ಬನು ಶೀಲದಲ್ಲಿ ಸುಸ್ಥಾಪಿತನಾಗಿ, ಸಮಾಧಿಯನ್ನು ಮತ್ತು ಪ್ರಜ್ಞೆಯನ್ನು ವೃದ್ಧಿಸಿದಾಗ ಅಂತಹ ಉತ್ಸಾಹಿ ಮತ್ತು ಪ್ರಜ್ಞಾವಂತನು ಬಲೆಯ ಜಾಲದಿಂದ ಪಾರಾಗುವಿಕೆಯಲ್ಲಿ ಯಶಸ್ವಿಯಾಗುತ್ತಾನೆ.           35