Monday 6 March 2017

quotes on happyness ಸುಖ

19. ಸುಖ

1.            ಯಾರು ತನ್ನ ಸುಖಕ್ಕಾಗಿ, ಸುಖ ಬಯಸುವ ಪರಜೀವಿಗಳಿಗೆ ದಂಡಶಸ್ತ್ರದಿಂದ ಹಿಂಸಿಸುವನೋ ಅವನು ಮುಂದೆ ಸುಖವನ್ನು ಪಡೆಯುವುದಿಲ್ಲ.                97
2.            ಮುಪ್ಪಿನವರೆಗೆ ಶೀಲವು ಸುಖ, ಶ್ರದ್ಧಾಯುತ ಪ್ರಯತ್ನಶೀಲತೆ ಸುಖ, ಜ್ಞಾನ ಪ್ರಾಪ್ತಿಯು ಸುಖ ಹಾಗು ಪಾಪ ಮಾಡದೆ ಇರುವುದು ಸುಖ. 98
3.            ಸುಖವು ನಮ್ಮ ಬಯಕೆಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿದೆ. ಹಾಗು ಸರಿಯಾದ ಇಚ್ಛೆಗಳ ಆಯ್ಕೆಗಳಲ್ಲಿದೆ.      99
4.            ಸುಖದ ರಹಸ್ಯವು ಪ್ರಾಪಂಚಿಕ ಬಂಧನಗಳಿಂದ ಮನಸ್ಸನ್ನು ಬಿಡುಗಡೆ ಮಾಡುವುದರಲ್ಲಿದೆ.    100
5.            ಸುಖವು 5 ವಿಧದ್ದಾಗಿರುತ್ತದೆ. ಕಾರಣಿಯ ಸುಖ, ಮೂಲ ಸುಖ, ಏಕಾಂತತೆಯ ಸುಖ, ಅಕಲುಷಿತ ಸುಖ ಮತ್ತು ಸಮಾಧಿ
ಸುಖ.      101
6.            ಸಾವಿರಾರು ದೀಪಗಳನ್ನು ಒಂದು ದೀಪದಿಂದ ಬೆಳಗಿಸಬಹುದು, ಅದರಿಂದಾಗಿ ದೀಪವು ಚಿಕ್ಕದೇನೂ ಆಗುವುದಿಲ್ಲ. ಅದರಂತೆಯೇ ಸುಖವನ್ನು  ಹಂಚಿದರೆ  ಅದು  ಕಡಿಮೆಯೂ
ಆಗುವುದಿಲ್ಲ.            102


No comments:

Post a Comment