Monday 6 March 2017

quotes on peace by lord Buddha ಶಾಂತಿ

                       17. ಶಾಂತಿ

1.            ಭೂತಕಾಲದ ಯೋಚನೆಗಳೆಲ್ಲವನ್ನು ಬಿಟ್ಟುಬಿಡಿ. ಭವಿಷ್ಯದ ಬಗ್ಗೆ ಚಿಂತೆ ಬೇಡ. ವರ್ತಮಾನದ ಸ್ಥಿತಿಗತಿಗಳಿಗೆ ಅಂಟಬೇಡಿ. ಆಗ ಮಾತ್ರ ನೀವು ಶಾಂತಿಯನ್ನು ಪ್ರಾಪ್ತಿಗೊಳಿಸುವಿರಿ.        87
2.            ಶಾಂತಿ ಸಿಗುವುದು ಆಂತರ್ಯದಲ್ಲಿ, ಬಾಹ್ಯದಲ್ಲಿ ಅದನ್ನು ಅರಸದಿರಿ.       88
3.            ನಿಮಗೆ ದೊರೆಯುವುದರಲ್ಲಿ ಅತಿಯಾಗಿ ನಿರೀಕ್ಷಿಸದಿರಿ ಅಥವಾ ಪರರ ಬಗ್ಗೆ ಮತ್ಸರ ಬೇಡ, ಯಾರು ಪರರ ಗಳಿಕೆಯ ಬಗ್ಗೆ ಅಸೂಯೆ ಪಡುವರೋ ಅವರು ಚಿತ್ತಶಾಂತಿಯನ್ನು ಪಡೆಯಲಾರರು.      89
4.            ನಿನ್ನ ಆಹಾರ ಮಿತವಾಗಿರಲಿ, ನಿನ್ನ ಅವಶ್ಯಕತೆಗಳು ಅಲ್ಪವಾಗಿರಲಿ, ನೀನು ಸರಳಜೀವಿಯಾಗಿರು, ಹಾಗೆಯೇ ನಮ್ರನಾಗಿ ಜೀವಿಸುತ್ತಾ ಬಯಕೆರಹಿತನಾಗಿರು, ಆಗ ನೀನು ಶಾಂತಿ ಪಡೆವೆ.                90
5.            ಮುನಿಯು ಸರ್ವದಾ ಅನಾಸಕ್ತರಾಗುತ್ತಾರೆ. ಮಹಾ ವ್ಯಕ್ತಿಯು ಯಾರಿಗೂ ಪ್ರಿಯರನ್ನಾಗಿ ಭಾವಿಸುವುದಿಲ್ಲ. ಅಪ್ರಿಯರನ್ನಾಗಿಯು ಸಹಾ, ಹೇಗೆ ಪದ್ಮ ಎಲೆಯ ಮೇಲೆ ಜಲವು ಇರುವುದಿಲ್ಲವೋ, ಅದೇರೀತಿ ವಿಲಾಪಿಗಳು ಮತ್ತು ಲೋಭಿಗಳು ಆತನಿಗೆ ಪ್ರಭಾವಿತ ಮಾಡಲಾರರು.         91

6.            ಆತನಿಗೆ ಲೋಕದಲ್ಲಿ ತನ್ನದು ಎನ್ನುವಂತಹುದು ಏನೂ ಇಲ್ಲ. ಯಾವ ಕೊರತೆಗಾಗಿಯು ಪಶ್ಚಾತ್ತಾಪಪಡುವುದಿಲ್ಲ ಮತ್ತು ರಾಗಾದಿಗಳ ವಶಕ್ಕೆ ಬೀಳುವುದಿಲ್ಲ. ಆತನೇ ಶಾಂತನೆಂದು ಕರೆಯಲ್ಪಡುತ್ತಾನೆ.    92

No comments:

Post a Comment