Monday 19 September 2016

the quotes on right speech in kannada (ಯೋಗ್ಯವಾದ ಸಂಭಾಷಣೆ)

10. ಯೋಗ್ಯವಾದ ಸಂಭಾಷಣೆ



1.          ಸುಳ್ಳು ಹೇಳುವಿಕೆಯೆ ಸರ್ವ ಪಾಪಕ್ಕೂ ಮೂಲ. ಇದು ಮಾನವನನ್ನು ದುರ್ಗತಿಗೆ ತಳ್ಳುತ್ತದೆ. ಆತನ ಬಾಯಿಯಿಂದ ದುವರ್ಾಸನೆ ಹೊರಹೊಮ್ಮಿಸುತ್ತದೆ ಮತ್ತು ಅವನು ಪರರಿಗೆ ಅಪ್ರಿಯನಾಗುತ್ತಾನೆ, ಪರರಿಂದ ಕೀಳಾಗಿ ಕಾಣಲ್ಪಡು
ತ್ತಾನೆ.     49




2.          ಮಾತಿನ ನಾಲ್ಕು ಪಾಪಗಳೆಂದರೆ ಸುಳ್ಳು, ಕಠಿಣಮಾತು, ಚಾಡಿ ಮತ್ತು ವ್ಯರ್ಥ ಮಾತುಗಳು.          50



3.          ಸುಂದರವಾದ ಹೂವು ಸುಗಂಧರಹಿತವಾದರೆ ಹೇಗೋ ಹಾಗೆಯೇ ನುಡಿದಂತೆ ನಡೆಯುವವನ ನುಡಿಗಳು ನಿಶ್ಚಲವಾದುದು. 51



4.         ಪರರು ಇಲ್ಲದಿರುವಾಗ ಅವರ ಬಗ್ಗೆ ಕೆಟ್ಟದ್ದನ್ನು ಆಡುವುದು ಬೇಡ. ಒಬ್ಬನು ಪರರಿಗೆ ತೀಕ್ಷ್ಣವಾಗಿ ಅವಹೇಳನ ಮಾಡುವುದನ್ನು ತನ್ನ ನುಡಿಗಳಲ್ಲಿ ಮುಕ್ತಿಗೊಳಿಸಲಿ.      52



5.          ಒಬ್ಬನ ನುಡಿಗಳು ಮಿತವಾಗಿರಲಿ, ವಿಚಾರಪೂರಿತವಾಗಿರಲಿ, ಜ್ಞಾನಯುತವಾಗಿ ಹಾಗು ಕಿವಿಗಳಿಗೆ ಆನಂದದಾಯಕವಾಗಿ ನುಡಿಯಲಿ.    



6.          ಯಾವ ಮಾತು ಯತಾರ್ಥವಾದದ್ದು, ಸತ್ಯವುಳ್ಳದ್ದು, ಒಳ್ಳೆಯತನಕ್ಕೆ ಸಂಬಂಧವುಳ್ಳದ್ದು ಮತ್ತು ಇತರರಿಗೆ ಪ್ರಿಯವೇ ಆಗಿರಲಿ ಅಥವಾ ಅಪ್ರಿಯವೇ ಆಗಿರಲಿ, ಆ ಮಾತನ್ನು ವಿವರಿಸಲು ಸಮಯ ತಿಳಿದಿರಬೇಕು.      5





quotes on the right resolution in kannada (ಯೋಗ್ಯವಾದ ಸಂಕಲ್ಪ)

9.
ಯೋಗ್ಯವಾದ ಸಂಕಲ್ಪ


1.  ಎಲ್ಲಾ ಬಗೆಯ ಬೋಗಾಭಿಲಾಶೆಗಳಿಂದ ದೂರವಾಗಬೇಕೆಂಬ ಸಂಕಲ್ಪ, ಎಲ್ಲಾ ಬಗೆಯ ದ್ವೇಷಗಳಿಂದ ದೂರವಾಗಬೇಕೆಂಬ ಸಂಕಲ್ಪ,
ಎಲ್ಲಾ ಬಗೆಯ ಹಿಂಸೆಗಳಿಂದ ದೂರವಾಗಬೇಕೆಂಬ ಸಂಕಲ್ಪ
ಇವನ್ನೇ ಸಮ್ಮ ಸಂಕಲ್ಪ ಎನ್ನುತ್ತಾರೆ.        43




2.          ನಾನು ಪದ್ಮಾಸನ ಸ್ಥಿತಿಯಲ್ಲೆ ಅಸವಗಳಿಂದ ಮುಕ್ತಚಿತ್ತ ಪ್ರಾಪ್ತಿಯ ವಿನಃ ಆಸನ ಭಂಗಿಸಿ ಮೇಲೇಳುವುದಿಲ್ಲ ಎಂದು ಸಂಕಲ್ಪ ಮಾಡುವವನು ಶೋಭಾಯಮಾನನಾಗುವನು.   44




3.          ನಾನು ದಾನಿಯಾಗಲಿ ಮತ್ತು ಸಹಾಯ ಮಾಡುವವನಾಗಲಿ, ನಾನು ಶೀಲವಂತನಾಗಲಿ, ಶುದ್ಧನಾಗಲಿ ಮತ್ತು ಪ್ರಾಮಾಣಿಕನಾಗಲಿ, ನಾನು ಸ್ವಾಥರ್ಿಯಾಗದಿರಲಿ, ಬದಲಾಗಿ ನಿಸ್ವಾರ್ಥ ಹಾಗು ತ್ಯಾಗಿಯಾಗಿರಲಿ.       45



4.         ನಾನು ಜ್ಞಾನಿಯಾಗಲಿ ಮತ್ತು ನನ್ನ ಜ್ಞಾನದ ಫಲವನ್ನು ಪರರಲ್ಲಿ ಹಂಚುವಂತಾಗಲಿ, ನಾನು ಪ್ರಯತ್ನಶಾಲಿಯಾಗಲಿ, ಶಕ್ತಿಶಾಲಿ ಯಾಗಲಿ, ನಿರಂತರ ಪರಿಶ್ರಮಿಯಾಗಿರಲಿ, ನಾನು ಸಹನೆಯುಳ್ಳವ ನಾಗಲಿ, ನಾನು ಪರರ ತಪ್ಪುಗಳನ್ನು ಸಹಿಸಿ ಕ್ಷಮಿಸುವಂತಾಗಲಿ, ನಾನು ನೀಡಿದ ವಚನವನ್ನು ಎಂದೆಂದಿಗೂ ನೆರವೇರಿಸು ವಂತಾಗಲಿ.         46



5.          ನಾನು ಧೃಢನಾಗಲಿ ಮತ್ತು ಸ್ಥಿರ ನಿಧರ್ಾರದವನಾಗಲಿ, ನಾನು ದಯಾವಂತನಾಗಲಿ, ಕರುಣೆಯಿಂದ ಇರಲಿ ಮತ್ತು ಮಿತ್ರತ್ವದಿಂದ ಇರುವಂತಾಗಲಿ, ನಾನು ನಮ್ರನಾಗಿರಲಿ, ಶಾಂತನಾಗಿರಲಿ, ಅಭಯಶಾಲಿಯು, ಶೋಕರಹಿತನು ಆಗುವಂತಾಗಲಿ.      47



6.          ನಾನು ಪರಿಪೂರ್ಣತೆಗೆ ಸೇವೆ ಮಾಡುವಂತಾಗಲಿ ಹಾಗು ಸೇವೆಗಾಗಿ ಪರಿಪೂರ್ಣತೆ ಹೊಂದಲಿ.      48


quotes on right view in kannada ( ಯೋಗ್ಯವಾದ ದೃಷ್ಟಿಕೋನ)

8. ಯೋಗ್ಯವಾದ ದೃಷ್ಟಿಕೋನ


1.  ಒಂದು ಸಿದ್ಧಾಂತಕ್ಕೆ ಅಂಟಿಕೊಂಡು, ಪರರ ದೃಷ್ಟಿಕೋನವನ್ನು ಕೀಳಾಗಿ ಕಾಣುವುದನ್ನು ಜ್ಞಾನಿಗಳು ತಡೆ ಎಂದಿದ್ದಾರೆ.     37



2.          ಈ ಪ್ರಪಂಚವು ನಿರಂತರ ಪ್ರವಾಹದಂತೆ ಮತ್ತು ಅನಿತ್ಯ ವಾದುದು. ಯಾವುದೆಲ್ಲವೂ ಉತ್ಪತ್ತಿಯಾಗುತ್ತದೋ ಅದೆಲ್ಲವೂ ಅಳಿಯುತ್ತದೆ. ಪರಿವರ್ತನೆ ಮತ್ತು ಅನಿತ್ಯತೆಯೇ ಜೀವನದ ಸ್ವರೂಪವಾಗಿದೆ. ಯಾವುದೆಲ್ಲಾ ಅನಿತ್ಯವೋ ಅದೆಲ್ಲವೂ ದುಃಖಕರವಾಗಿದೆ. ಒಬ್ಬನು ಸುಖವಾಗಿದ್ದಾಗಲೂ ಆ ಸುಖವು ಹಾಗೆಯೇ ಉಳಿಯಲಾರದು.     38



3.          ಯಾರು ಸಮ್ಮದೃಷ್ಟಿಯನ್ನು ಹೊಂದಿರುವರೋ ಅವರಲ್ಲಿ ಇವೆಲ್ಲಾ ನಿತ್ಯ ಎಂಬ ಭಾವನೆ ಇರುವುದಿಲ್ಲ ಅಥವಾ ಇವೆಲ್ಲಾ ಸುಖ ಅಥವಾ ಇದೇ ಆತ್ಮ ಎಂಬ ಭಾವನೆ ಬರುವುದೇ ಇಲ್ಲ ಅದು ಅವರಲ್ಲಿ ಅಸಾಧ್ಯ.      39



4.         ಒಂದುವೇಳೆ ಜನರ ದೃಷ್ಟಿಯು ಪವಿತ್ರವಾಗಿದ್ದರೆ, ಅವರು ಶುದ್ಧರು, ಪ್ರಜ್ಞಾವಂತರು, ಕುಶಲರು ಮತ್ತು ಮತಿವಂತರಾಗುತ್ತಿದ್ದರು. ಅವರಲ್ಲಿ ಯಾರು ಪ್ರಜ್ಞಾವಿಹೀನನಾಗುತ್ತಿರಲಿಲ್ಲ. ಅವರ ದೃಷ್ಟಿಯು ಪರಿಪೂರ್ಣವಾಗುತ್ತಿತ್ತು.        40



5.          ಸಮ್ಮದೃಷ್ಟಿ ಎಂದರೆ ನಾಲ್ಕು ಆರ್ಯ ಸತ್ಯಗಳ ಜ್ಞಾನವೇ
ಆಗಿದೆ.    41



6.          ಇಷ್ಟೊಂದು ಶುಭ್ರವಾದ, ಪರಿಶುದ್ಧವಾದ ಈ ಬೋಧನೆಗೂ ನೀವು ಅಂಟಿದರೆ, ನೀವು ತೆಪ್ಪದ ಬೋಧನೆ ಅರ್ಥಮಾಡಿಕೊಳ್ಳಿ. ಹೇಗೆಂದರೆ ಬೋಧನೆ ದಾಟುವುದಕ್ಕೆ ಹಿಡಿದುಕೊಳ್ಳಲಿಕ್ಕೆ ಅಲ್ಲ.      42


quotes on noble 8 fold path in kannada (ಆರ್ಯ ಅಷ್ಠಾಂಗ ಮಾರ್ಗ)

7.
ಆರ್ಯ ಅಷ್ಠಾಂಗ ಮಾರ್ಗ

1. ಯಾರು ದುಃಖವನ್ನು ಅರಿಯುತ್ತಾರೋ ಅವರು ದುಃಖದ ಉತ್ಪತ್ತಿಯನ್ನು ಅರಿಯುತ್ತಾರೆ, ಹಾಗೆಯೇ ಅದರ ನಿರೋಧ
ವನ್ನು ಅರಿಯುತ್ತಾರೆ ಮತ್ತು ನಿರೋಧದ ಮಾರ್ಗವನ್ನು ಅರಿಯುತ್ತಾರೆ.         32


2.          ಎಲ್ಲಾ ವಿಷಯಗಳು (ಸಂಖಾರ) ಅನಿತ್ಯವೆಂದು ಒಬ್ಬನು ಪ್ರಜ್ಞೆಯಿಂದ ಅರಿತಾಗ ಆತನು ವಿರಾಗ ಹೊಂದುತ್ತಾನೆ. ಇದೇ ಪರಿಶುದ್ಧತೆಗೆ ಮಾರ್ಗ.     33


3.          ನಿಮಗೆ ನೀವೇ ಪರಿಶ್ರಮಪಡಬೇಕು. ತಥಾಗತರು ಕೇವಲ ಮಾರ್ಗವನ್ನು ಮಾತ್ರ ತೋರಿಸುತ್ತಾರೆ. ಮಾರ್ಗಗಳಲ್ಲಿ ಅಷ್ಟಾಂಗ ಮಾರ್ಗವೇ ಶ್ರೇಷ್ಠ. ಯಾರು ಈ ಮಾರ್ಗದಲ್ಲಿ ಹೋಗುತ್ತರೋ ಅವರು ಬುದ್ಧರ ಬೋಧನೆಯಂತೆ ನಡೆದು ದುಃಖಮುಕ್ತರು ಆಗುತ್ತಾರೆ.           34


4.         ಯಾರು ಶ್ರಮಶೀಲನಾಗಬೇಕಿದ್ದಾಗ ಶ್ರಮಿಸುವುದಿಲ್ಲವೋ ಯುವಕನಾಗಿಯು, ಬಲಿಷ್ಠನಾಗಿಯು, ಸೋಮಾರಿಯಾಗಿರು ವನೋ, ಯಾರು ತನ್ನ ಲಕ್ಷವನ್ನು ಸಡಿಲಗೊಳಿಸಿರುವನೋ ಅಂತಹ ಚಿಂತನೆಯನ್ನು ಬಿಟ್ಟಿರುವನೋ ಅಂತಹ ಸೋಮಾರಿ ಜ್ಞಾನದ ಮಾರ್ಗ ಅರಿಯಲಾರ.     35



5.          ಇಂದ್ರಿಯ ಭೋಗಗಳನ್ನು, ದೇಹದಂಡನೆಯನ್ನು ಮೀರಿದ ಮಧ್ಯಮ ಮಾರ್ಗವು ಸಮ್ಮಸಂಬುದ್ಧರಿಂದ ಪ್ರಕಾಶಿಸಲ್ಪಟ್ಟಿದೆ. ಅದು ದೃಷ್ಟಿಯನ್ನು, ಜ್ಞಾನವನ್ನು, ಅಭಿಜ್ಞಾವನ್ನು, ಶಾಂತಿಯನ್ನು, ಸಂಬೋಧಿಯನ್ನು ಮತ್ತು ನಿಬ್ಬಾಣವನ್ನು ನೀಡುತ್ತದೆ.       36

the quotes on 3rd noble truth in kannada (ದುಃಖ ನಿರೋಧ ಸತ್ಯ)

6. ದುಃಖ ನಿರೋಧ ಸತ್ಯ

1.          ಯಾವ ಮುಳ್ಳಿನಿಂದ ಚುಚ್ಚಿಕೊಂಡ ವ್ಯಕ್ತಿ ಸರ್ವ ದಿಕ್ಕುಗಳಿಗೂ ಓಡುವನೋ, ಅದೇ ಮುಳ್ಳನ್ನು ತೆಗೆದ ನಂತರ ಆತನು ಓಡುವುದೂ ಇಲ್ಲ, ಮುಳುಗುವುದೂ ಇಲ್ಲ.       27


2.          ಯಾರಿಗೆ ಯಾವ ಪ್ರಿಯಬಯಕೆಗಳಿಲ್ಲವೋ ಅವರಿಗೆ ಯಾವ ದುಃಖವೂ ಇಲ್ಲ. ಯಾರಲ್ಲಿ ಉದ್ರೇಕ ಹಾಗು ವಿಷಾಧವಿಲ್ಲವೋ ಅವರಿಗೆ ನಾನು ಶೋಕರಹಿತ ಎನ್ನುತ್ತಾನೆ.           28


3.          ಪ್ರಿಯ ಬಯಕೆ ಇಲ್ಲದವನು ದುಃಖರಹಿತನಾಗುತ್ತಾನೆ.    29


4.         ಎಲ್ಲವನ್ನೂ ಪೂರ್ಣವಾಗಿ ಅರಿತವರು, ಯಾವುದರಲ್ಲಿಯೂ ರಮಿಸುವುದಿಲ್ಲ. ಎಲ್ಲವನ್ನು ಅರಿತ ಅವರು ದುಃಖವೆಲ್ಲದರಿಂದ ಮುಕ್ತರಾಗಿರುತ್ತಾರೆ.       30


5.          ಕಾಯವು ಚೂರು ಚೂರಾಗಿ, ಗ್ರಹಿಕೆಯು ಅಳಿಸಿ ಹೋಗಿ, ವೇದನೆಗಳೆಲ್ಲವೂ ತಂಪಾಗಿ, ಸಂಖಾರವು ಉಪಶಮನ ಹೊಂದಿ ಅರಿವು (ವಿಞ್ಞನ) ತನ್ನ ಕೊನೆಯನ್ನು ಮುಟ್ಟುತ್ತದೆ.        31


quotes on the cause of suffering in kannada (ದುಃಖದ ಕಾರಣ ಸತ್ಯ)

 5. ದುಃಖದ ಕಾರಣ ಸತ್ಯ
1. ದುಃಖದ ಕಾರಣವೇನೆಂದರೆ ಸ್ವಾರ್ಥದ ಬಯಕೆ, ಅದು ಸುಖದ ಬಯಕೆಯಾಗಿರಬಹುದು, ಸೇಡಿನ ಬಯಕೆಯಾಗಿರಬಹುದು ಅಥವಾ ಕೇವಲ ದೀಘರ್ಾಯುವಿನ ಬಯಕೆಯು
ಆಗಿರಬಹುದು.        21


2.          ಬಯಕೆಯೇ ದುಃಖದ ಕಾರಣವಾಗಿದೆ. ಏಕೆಂದರೆ ಬಯಕೆಯು ಎಂದಿಗೂ ಪೂರ್ಣವಾಗಿ ತೃಪ್ತಿ ಹೊಂದಲಾರದು.    22


3.          ಬಯಕೆಗಳಿಂದಲೇ ದುಃಖವು ಉದಯಿಸುವುದು, ಬಯಕೆ ಗಳಿಂದಲೇ ಭಯವು ಉದಯಿಸುವುದು, ಯಾರು ಪೂರ್ಣವಾಗಿ ಬಯಕೆಗಳಿಂದ ಮುಕ್ತರೋ ಅವರಿಗೆ ದುಃಖವಿಲ್ಲ, ಭಯ ಎಲ್ಲಿಯದು ?   23


4.         ಕೇವಲ ವಿಷಯಗಳಿಂದಲೇ ಮಾನವನು ತನ್ನನ್ನು ಗುರುತಿಸಿಕೊಳ್ಳತ್ತಾನೆ.  ಅದು ಆತನ ಚಿತ್ತವನ್ನು ಹದಗೆಡಿಸುತ್ತದೆ. ನಾನು, ನನ್ನದು ಎಂಬುದರಿಂದಲೇ ದುಃಖ ಉಂಟಾಗು
ತ್ತದೆ.      24


5.          ಪ್ರಿಯವಾದುದುಕ್ಕೆ ಅಂಟಿಕೊಳ್ಳಬೇಡ, ಅಪ್ರಿಯವಾದುದಕ್ಕೆ ಅಂಟಿಕೊಳ್ಳಬೇಡ, ಪ್ರಿಯರಾದವರನ್ನು ನೋಡದಿರುವುದು ಹಾಗು ಅಪ್ರಿಯವಾದುದನ್ನು ನೋಡುವುದು ಎರಡೂ ದುಃಖಕರ.           25



6.          ಯಾವುದು ಪರರನ್ನು ಅವಲಂಬಿಸಿದೆಯೋ ಅದೆಲ್ಲವೂ ದುಃಖಕರ, ಸ್ವ-ಪ್ರಭುವಾಗುವುದೇ ಸುಖಕರ.    26


Thursday 3 March 2016

Quotes on truth of suffering

4. ದುಃಖ ಸತ್ಯ

1.            ಜನ್ಮ, ರೋಗ, ಜರಾ, ಮೃತ್ಯು, ಶೋಕ, ನಿರಾಶೆ, ಪ್ರಿಯರ ವಿಯೋಗ, ಅಪ್ರಿಯರ ಸಮಾಗಮ, ಆಸೆಗಳ ಅಪೂರೈಕೆ, ಅಸ್ತಿತ್ವದ ಈ ಎಲ್ಲಾ ಲಕ್ಷಣಗಳು ದುಃಖವನ್ನು ಸೂಚಿಸುತ್ತವೆ.       17


2.            ಹಸುಗಳ ಹಿಂಡನ್ನು ದನಗಾಹಿಯು ದೊಣ್ಣೆಯಿಂದ ಅಟ್ಟುವಂತೆ ಮುಪ್ಪು ಮರಣಗಳು ಜೀವಿಗಳನ್ನು ಓಡಿಸುತ್ತವೆ.    18

3.            ಇಲ್ಲಿ ಮನುಷ್ಯರ ಜೀವನ ಅನಿಮಿತ್ತ ಹಾಗು ಅಜ್ಞಾತವಾಗಿದೆ. ಕಠಿಣ ಹಾಗು ಅಲ್ಪವಾಗಿದೆ ಮತ್ತು ಅದು ಸಹಾ ದುಃಖ ಭರಿತವಾಗಿದೆ.       19


4.            ಯಾರಿಗೆ ನೂರು ಪ್ರಿಯವಾದ ವಿಷಯಗಳಿವೆಯೋ, ಆತನಿಗೆ ನೂರು ಬಗೆಯ ದುಃಖಗಳಿರುತ್ತದೆ. ಯಾರಿಗೆ ಎರಡು ಪ್ರಿಯ ವಿಷಯಗಳಿವೆಯೋ ಅವರಿಗೆ 2 ಬಗೆಯ ದುಃಖ
ಗಳಿರುತ್ತದೆ.





quotes on sangha in kannada

3. ಸಂಘ

1.            ಚಿನ್ನದ ನಾಣ್ಯಗಳ ಮಳೆಗರೆದರೂ ಇಂದ್ರಿಯಸುಖಗಳ ತೃಪ್ತಿ ಆಗುವುದಿಲ್ಲ. ಕಾಮಸುಖಗಳು ಅಲ್ಪಸ್ವಾದ ಹಾಗು ಅಪಾರ ದುಃಖದಿಂದ ಕೂಡಿದೆ. ಇದನ್ನು ಅರಿತು ಪಂಡಿತರು ದಿವ್ಯವಾದ ಸುಖಗಳಲ್ಲೂ ಆನಂದಿಸುವುದಿಲ್ಲ. ಸಮ್ಮಾಸಂಬುದ್ಧರ ಶ್ರಾವಕರು ಸದಾ ತೃಷ್ಣಾಕ್ಷಯದಲ್ಲೇ ನಿರತರಾಗುತ್ತಾರೆ.        12
2.            ಬುದ್ಧ ಭಗವಾನರ ಶಿಷ್ಯರು, ಯಾರು ಹಗಲು-ರಾತ್ರಿ ಧ್ಯಾನದಲ್ಲೇ ಆನಂದಿತರಾಗಿರುವರೋ ಅಂತಹವರು ಸದಾ ಜಾಗ್ರತೆಯಿಂದಿರುತ್ತಾರೆ.            13
3.            ಯಾರು ಪರಮ ಗಂಭೀರ ಪ್ರಜ್ಞಾವಾನ್ ಬುದ್ಧರಿಂದ ಪ್ರಕಾಶಿಸಲ್ಪಟ್ಟ ಆರ್ಯ ಸತ್ಯಗಳನ್ನು ಮನನ ಮಾಡಿದ್ದಾರೋ ಅವರು ತೀರ ಎಚ್ಚರ ತಪ್ಪಿದರೂ ಎಂಟನೆಯ ಜನ್ಮ ಪಡೆಯುವುದಿಲ್ಲ. ಇದು ಸಂಘದ ಉತ್ತಮ ರತ್ನವಾಗಿದೆ.      14
4.            ನಕ್ಷತ್ರಗಳಲ್ಲಿ ಮುಖ್ಯ ಚಂದಿರ. ಬೆಳಗುವುದರಲ್ಲಿ ಪ್ರಧಾನ ಸೂರ್ಯನಾಗಿದ್ದಾನೆ. ಇಚ್ಛಿತರ ಮುಖ್ಯ ಅಭಿಲಾಷೆ ಪುಣ್ಯವಾಗಿದೆ. ಹಾಗೆಯೇ ಪೂಜೆ ಆತಿಥ್ಯಕ್ಕೆ ಮುಖ್ಯವು ಸಂಘವಾಗಿದೆ.         15

5.            ಯಾರು ಪೂಜ್ಯಾರ್ಹರಾದವರನ್ನು, ಬುದ್ಧರನ್ನು ಅಥವಾ ಶ್ರಾವಕರನ್ನು ಪೂಜಿಸುವರೋ, ಪ್ರಪಂಚದ ತಡೆಗಳನ್ನು ದಾಟಿ ಶೋಕ ಸಂಕಟಗಳಿಂದ ಪಾರಾದ, ಮುಕ್ತರಾದ, ಶಾಂತ ಸ್ವರೂಪಿಗಳನ್ನು ಭಯವಿಲ್ಲದವರನ್ನು ಯಾರು ಪೂಜಿಸುವರೋ ಅವರು ಗಳಿಸಿದ ಪುಣ್ಯವನ್ನು ಯಾವುದರಿಂದಲೂ ಅಳಿಯಲು ಸಾಧ್ಯವಿಲ್ಲ.  16

quotes on Dhamma in kannada

2. ಧಮ್ಮ


1.            ಸರ್ವ ಪಾಪವನ್ನು ಮಾಡದಿರುವುದು, ಕುಶಲವನ್ನು (ಒಳ್ಳೆಯತನವನ್ನು) ಸಂಪಾದಿಸುವುದು, ಸ್ವಚಿತ್ತವನ್ನು ಪರಿಶುದ್ಧಿ ಗೊಳಿಸುವುದು - ಇದೇ ಬುದ್ಧರ ಶಾಸನವಾಗಿದೆ.       7
2.            ಕೆಟ್ಟದ್ದನ್ನು ಆಡದಿರುವುದು, ನೋಯಿಸದಿರುವುದು, ಪಾತಿಮೋಕ್ಖ (ಭಿಕ್ಖುನಿಯಮ) ಅನುಸಾರವಾಗಿ ಸಂಯಮದಿಂದಿರುವುದು, ಆಹಾರದಲ್ಲಿ ಮಿತವಾಗಿರುವುದು, ಒಂಟಿಯಾಗಿ ವಾಸಿಸುವುದು, ಮನವನ್ನು ಯಾವಾಗಲೂ ಧ್ಯಾನ ಉನ್ನತಿಯಲ್ಲಿ ನೆಲೆ ಮಾಡುವುದು - ಇದೇ ಬುದ್ಧರ ಶಾಸನವಾಗಿದೆ.      8
3.            ಕಾರಣದಿಂದಾಗುವ ಎಲ್ಲಾ ವಿಷಯಗಳನ್ನು (ಧಮ್ಮವನ್ನು), ಅವುಗಳ ಸ್ಪಷ್ಟ ಕಾರಣಗಳನ್ನು ಮಹಾಸಮಣರು ತಿಳಿಸಿದ್ದಾರೆ ಮತ್ತು ತಥಾಗತರು ಅವುಗಳ ನಿರೋಧವನ್ನು ಹಾಗು ಅದರ ಮಾರ್ಗವನ್ನು ಸಹಾ ತಿಳಿಸಿದ್ದಾರೆ.    9
4.            ಧಮ್ಮದಾನವು ಎಲ್ಲಾ ದಾನಗಳಿಗಿಂತ ಶ್ರೇಷ್ಠ, ಧಮ್ಮರಸವು ಉಳಿದ ರಸಗಳಿಗಿಂತ ಶ್ರೇಷ್ಠ, ಧಮ್ಮಾನಂದವು ಉಳಿದ ಆನಂದಗಳಿಗಿಂತ ಶ್ರೇಷ್ಠ. ಯಾರು ತೃಷ್ಣೆಯನ್ನು ನಾಶಪಡಿಸಿಕೊಂಡಿರುವರೋ ಅವರು ದುಃಖವೆಲ್ಲದರಿಂದ ಮುಕ್ತರಾಗಿದ್ದಾರೆ.   10

5.            ಈ ಧಮ್ಮವು ಬಂದು ಸಾಧಿಸುವವರಿಗೆ ಹೊರತು ಬಂದು ನಂಬುವವರಿಗಲ್ಲ. ಇದು ರಾಗ ದ್ವೇಷ ಮತ್ತು ಮೋಹದಿಂದ ಪೀಡಿತರಾಗಿರುವವರಿಗೆ ಅರಿಯಲಾಗುವುದಿಲ್ಲ. 11