Monday 27 March 2017

the quotes on repentance ಪಶ್ಚಾತ್ತಾಪ

                                      48. ಪಶ್ಚಾತ್ತಾಪ


1.            ಪಶ್ಚಾತ್ತಾಪದಲ್ಲಿ ಪಾಪ ವಿಮುಖತೆ ಸೇರಲಿ.            249

2.            ನಿಮ್ಮ ತಪ್ಪುಗಳನ್ನು ಅರ್ಹರಲ್ಲಿ ಧೈರ್ಯವಾಗಿ ನಿವೇದಿಸಿ
ಕೊಳ್ಳಿ.     250

3.            ಯಾರು ತನ್ನ ಶ್ರೇಷ್ಠ ಪುಣ್ಯ ಕಾರ್ಯಗಳಿಂದ ಪಾಪವನ್ನು ಮುಚ್ಚುವನೋ ಅಂತಹವನು ಮೋಡದಿಂದ ಹೊರಬಂದ ಚಂದಿರನಂತೆ ಲೋಕಕ್ಕೆ ಪ್ರಕಾಶ ನೀಡುತ್ತಾನೆ.              251


4.            ಯಾರಲ್ಲಿ ಸತ್ಯ, ಧರ್ಮ, ಧೈರ್ಯ ಮತ್ತು ತ್ಯಾಗ ಇರುವುದೋ ಆತನು ಲೋಕದಿಂದ ಪರಲೋಕಕ್ಕೆ ಹೋದಮೇಲೆ ಪಶ್ಚಾತ್ತಾಪಪಡುವುದಿಲ್ಲ.         25

the quotes on critical thinking

                                  47. ವಿಮಶರ್ೆ


1.            ನಿಮ್ಮ ಕಲ್ಪನೆಗಳನ್ನು ನಂಬಬೇಡಿ, ನಿಮ್ಮ ನಂಬಿಕೆಗಳಿಗೆ ನಿರ್ಣಯಗಳಿಗೆ ಹೊಂದುತ್ತವೆಂದು ಎಂದೂ ಸಹ ಸ್ವೀಕರಿಸದಿರಿ. ಪ್ರಕಟಿತ ಸುದ್ದಿಗಳಿಗೆ ಆಗಲಿ, ಸಂಪ್ರದಾಯಕ್ಕಾಗಲಿ ಅಥವಾ ಕೇಳಿದುದು ಎಂದಾಗಲಿ ಅಂತಹುದನ್ನೆಲ್ಲಾ ನಂಬಬೇಡಿ. ತಲತಲಾಂತರಗಳಿಂದ ಮೌಖಿಕವಾಗಿ ಬಂದಿದೆಯೆಂದಾಗಲಿ, ಗಾಳಿ ಸುದ್ದಿಗಳಿಗಾಗಲಿ ಅಥವಾ ಸುನಿಶ್ಚಿತ ಪೂಜ್ಯ (ಪವಿತ್ರ) ಗ್ರಂಥಗಳಲ್ಲಿದೆ ಎಂದಾಗಲಿ ನಂಬಬೇಡಿ ಹಾಗು ಸ್ವೀಕರಿಸಬೇಡಿ.

2.            ಇದು ಪ್ರಮಾಣಬದ್ಧ ಅಥವಾ ಸಾಧಾರಪೂರಿತವಾಗಿ ಹೇಳಲಾಗಿದೆ ಎಂದರೂ ನಂಬಬೇಡಿ, ಸ್ವೀಕರಿಸಬೇಡಿ. ವಿವೇಕಿಯು ಜನರು ಆತನ ಬಗ್ಗೆ ಏನಾದರೂ ಯೋಚಿಸಲಿ, ಅದರಿಂದ ಪ್ರಭಾವಿತನಾಗುವುದಿಲ್ಲ.               245

3.            ತರ್ಕಬದ್ಧವಾಗಿದೆ ಎಂದಾಗಲಿ ಅಥವಾ ಊಹೆಗೆ ನಿಲುಕುತ್ತದೆ ಎಂದಾಗಲಿ, ಅಭಿಪ್ರಾಯಕ್ಕೆ ಹೊಂದುತ್ತದೆ ಎಂದಾಗಲಿ ಏನನ್ನೂ ಸ್ವೀಕರಿಸಬೇಡಿ. ಯಾರು ಅಸಾರವಾದುದನ್ನು ಸಾರವೆಂದು ಸಾರವಾದುದರಲ್ಲಿ ಅಸಾರವೆಂದು ಮಿಥ್ಯ ಗ್ರಹಿಕೆಗಳಿಂದ ಕೂಡಿರುವರೋ ಅವರು ಎಂದೂ ಸಾರವನ್ನು ಸಾಧಿಸುವುದಿಲ್ಲ.

4.            ಯಾವಾಗ ನಿಮಗೆ ಕೆಲವು ವಿಷಯಗಳು ಅಕುಶಲವಾದುದು ಮತ್ತು ಕೆಟ್ಟದೆಂದು ಅರಿವಾಗುತ್ತದೋ ಆಗ ಅದನ್ನು ತ್ಯಜಿಸಿ ಮತ್ತು ಯಾವಾಗ ಕೆಲವು ವಿಷಯಗಳು ಕುಶಲವಾದುದು ಮತ್ತು ಹಿತಕಾರಿ ಎಂದು ಅರಿಯುವಿರೋ ಅದನ್ನು ಸ್ವೀಕರಿಸಿ ಮತ್ತು ಅನುಸರಿಸಿರಿ.      247


5.            ಯಾವೆಲ್ಲಾ ವಿಷಯಗಳಿಂದ ಈಗ ಹಾಗು ಮುಂದೆ ದುಃಖ ಅನುಭವಿಸಬೇಕಾಗುವುದೋ ಮತ್ತು ನಾವು ಮತ್ತು ಪರರು ದುಃಖ ಪಡಬೇಕಾಗುವುದೋ ಅದೇ ಅಕುಶಲವಾಗಿದೆ.       248

quotes on bonds ಬಂಧನಗಳು

                                 46. ಬಂಧನಗಳು


1.            ಯಾವ ವ್ಯಕ್ತಿಯು ಪಾಪಯುತವಾದ ಯೋಚನೆಗಳಿಂದ ಕೂಡಿರುವರೋ, ಯಾರ ಭಾವೋದ್ರೇಕಗಳು ಬಲಿಯುತ ವಾಗಿವೆಯೋ, ಯಾರು ಸುಖದ ಹೊರತು ಬೇರೇನೂ ಕಾಣಲಾರನೋ ಅಂತಹವನ ತೃಷ್ಣೆಯು ವೇಗವಾಗಿ ಬೆಳೆಯು ತ್ತದೆ. ನಿಜಕ್ಕೂ ಆತನು ಬಂಧನವನ್ನು ಬಲಿಷ್ಠಗೊಳಿಸು
ತ್ತಿದ್ದಾನೆ. 239

2.            ಯಾವುವು ಕಬ್ಬಿಣದಿಂದ, ಮರದಿಂದ ಅಥವಾ ಹಗ್ಗದಿಂದಾದ ಬಂಧನಗಳು ಇವೆಯೋ, ಅಷ್ಟೇನು ಬಲಿಷ್ಠವಲ್ಲ ಎಂದು ಜ್ಞಾನಿಗಳು ಹೇಳುತ್ತಾರೆ. ಆದರೆ ಆಭರಣಗಳಿಗಾಗಿ, ವಸ್ತ್ರಗಳಿಗಾಗಿ, ಮಕ್ಕಳಿಗಾಗಿ ಮತ್ತು ಪತ್ನಿಯರ ಆಸಕ್ತಿಗಳೇ ಅತ್ಯಂತ ಬಲಿಷ್ಠವಾದ ಬಂಧನಗಳೆಂದು ಜ್ಞಾನಿಗಳು ಹೇಳುತ್ತಾರೆ.                240

3.            ಯಾರಲ್ಲಿ ಪ್ರಿಯ ಅಥವಾ ಅಪ್ರಿಯ ಭಾವನೆಗಳಿಲ್ಲವೂ ಆತನಲ್ಲಿ ಬಂಧನಗಳಿಲ್ಲ.       241

4.            ಒಬ್ಬನು ಕೋಪವನ್ನು ಬಿಡಬೇಕು, ಅಹಂಕಾರವನ್ನು ವಜರ್ಿಸಬೇಕು. ಒಬ್ಬನು ಎಲ್ಲಾ ಬಂಧನಗಳಿಂದ ಮುಕ್ತನಾಗಬೇಕು, ಯಾರು ದೇಹ ಮತ್ತು ಮನಸ್ಸಿಗೆ ಅಂಟಿಲ್ಲವೋ ಅವರಿಗೆ ಯಾವ ಕೆಡಕು ಇಲ್ಲ.                 242


5.            ಯಾವರೀತಿ ಮೀನು ಜಾಲವನ್ನು ಬೇಧಿಸಿ ಹೊರಬರುವುದೋ ಅದೇರೀತಿ ಬಂಧನಗಳನ್ನು ನಷ್ಟಮಾಡಿ, ನಿಲ್ಲದ ಅಭಂಗ ಅಗ್ನಿಯಾಗಿ ಸರ್ವ ಬಂಧನಗಳನ್ನು ಸುಟ್ಟು (ಕತ್ತರಿಸಿ) ಖಡ್ಗ ಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.                243

quotes on worry ಚಿಂತೆ

                                45. ಚಿಂತೆ


1.            ಜ್ಞಾನಿ ಪುರುಷನು ಭವಿಷ್ಯದ ಬಗ್ಗೆ ಯಾವ ಭರವಸೆಯನ್ನು ಇಡುವುದಿಲ್ಲ ಹಾಗು ಕಳೆದುಹೋದ ಕಾಲದ ಬಗ್ಗೆ ಪಶ್ಚಾತ್ತಾಪ ಪಡುವುದಿಲ್ಲ.    235

2.            ಜಯವು ಶತೃತ್ವ ಉಂಟು ಮಾಡುತ್ತದೆ. ಸೋತವನು ಕುಗ್ಗಿ ಶೋಕಿಸುತ್ತಾನೆ. ಆದರೆ ಶಾಂತತೆವುಳ್ಳವರು ಜಯ ಪರಾಜಯ ಬಿಟ್ಟು ಸುಖಿಯಾಗಿರುತ್ತಾರೆ.              236

3.            ಎಲ್ಲಾ ಜೀವಿಗಳು ಕೊರತೆಯಿಂದ ಕೂಡಿವೆ ಮತ್ತು ಅತಿ ಆಸೆಯಿಂದ ಕೂಡಿವೆ ಹಾಗು ತೃಷ್ಣೆಯ ಗುಲಾಮ
ವಾಗಿದೆ. 237

4.            ಇದು ಸಹಾ ಸಂಭವನೀಯ ಕೆಟ್ಟ ವೈದ್ಯನ ಕಹಿ ಅರಿತಮೇಲೆ ಒಳ್ಳೆಯ ವೈದ್ಯನನ್ನು ನಂಬಲು ಹೆದರುತ್ತಾರೆ.           238
                             

quotes on disinterest ವೈರಾಗ್ಯ (ವಿರಾಗ)

                                44. ವೈರಾಗ್ಯ (ವಿರಾಗ)


1.            ಚಕ್ಷುವಿನ ವಿಷಯದಲ್ಲಿ ಲೋಲುಪನಾಗದಿರು. ಗ್ರಾಮ್ಯ ಕಥನಗಳಿಂದ ಕಿವಿಯನು ಮುಚ್ಚಿಕೋ (ರಕ್ಷಿಸಿಕೋ). ಸ್ವಾದದಲ್ಲಿ ಲೋಲುಪನಾಗದಿರು ಮತ್ತು ಲೋಕದಲ್ಲಿ ಯಾವುದನ್ನು ಸ್ವೀಕರಿಸಬೇಡ.   231

2.            ಏನನ್ನಾದರೂ ಸಾಧಿಸಬೇಕಿದ್ದರೆ ಬಹಳ ದೃಢತಾಪೂರ್ವಕವಾಗಿ ಪರಿಶ್ರಮಿಸು, ಸಡಿಲಿಕೆಯ ಸಮಣ ಜೀವನವು ಬಯಕೆಗಳ ಧೂಳನ್ನು ಹೆಚ್ಚಿಸುತ್ತದೆ.           232

3.            ಲೋಕವು 5 ಕಾಮಲೋಕಗಳಲ್ಲಿ ಹಾಗು ಆರನೆಯದಾದ ಚಿತ್ತದಲ್ಲಿ ಆಸಕ್ತಿ ತೊರೆದರೆ ದುಃಖದಿಂದ ಮುಕ್ತಿ
ದೊರೆಯುತ್ತದೆ.       233

4.            ನಿಯಮಗಳಲ್ಲಿ ಸಂಯಮದಿಂದಿರು. ಐದು ಇಂದ್ರಿಯಗಳಲ್ಲಿ ಕಾಯಗತಾಸ್ಮೃತಿ ಸ್ಥಾಪಿಸಿರಲಿ. ವೈರಾಗ್ಯ ವೃದ್ಧಿಸುವವ

ನಾಗು.     234

the quotes on health ಆರೋಗ್ಯ

                                 43. ಆರೋಗ್ಯ


1.            ಆರೋಗ್ಯವು ಪರಮ ಲಾಭ.    225

2.            ಎರಡು ಪ್ರಕಾರದ ರೋಗಗಳಿವೆ, ಅವುಗಳೆಂದರೆ : ಶಾರೀರಿಕ ರೋಗ ಮತ್ತು ಮಾನಸಿಕ ರೋಗಶಾರೀರಿಕ ರೋಗದಿಂದ ಮುಕ್ತರಾಗಲು ಒಂದು ವರ್ಷ, ಅಥವಾ 2 ವರ್ಷ, ನೂರು ವರ್ಷಗಳಿಂದಲೂ ಹೆಚ್ಚು ಕಾಲಕ್ಕೂ ರೋಗದಿಂದ ಮುಕ್ತರಾಗಲು ಆನಂದಿಸುತ್ತಾರೆ. ಆದರೆ ಮಾನಸಿಕ ಕ್ಲೇಷಗಳ ಮುಕ್ತರ ಹೊರತು ಅನ್ಯರು ಮಾನಸಿಕ ರೋಗದಿಂದ ಮುಕ್ತರಾಗಲು ಒಂದು ಕ್ಷಣವೂ ಸಹ ಆನಂದಿಸುವುದಿಲ್ಲ.          226

3.            ಲೋಭ, ದ್ವೇಷ ಮತ್ತು ಮೋಹ ಮೂರು ರೋಗದ ಮುಖ್ಯ ಪ್ರತಿನಿಧಿಗಳಾಗಿವೆ. 227

4.            ಯಾರು ಸ್ನೇಹಿತರನ್ನು ನಂಬದವನೋ, ಅಸ್ಥಿರ ಚಿತ್ತನೋ ಮತ್ತು ಮಿತ್ರರಲ್ಲಿ ಕೆಟ್ಟದಾಗಿ ವತರ್ಿಸುವನೋ, ಆತನ ಆರೋಗ್ಯ ಚೆನ್ನಾಗಿರುವುದಿಲ್ಲ.  228

5.            ರೋಗವನ್ನು (ಜನ್ಮ) ಮುಂಚೆಯೆ ತಡೆಯುವುದು ನಿವಾರಣೆಗಿಂತ ಉತ್ತಮವಾದುದು.            229


6.            ಶರೀರವು ರೋಗಕ್ಕೆ ಗುರಿಯಾದಾಗ ಮನಸ್ಸನ್ನು ದುರ್ಬಲ ಗೊಳಿಸದಿರಿ.                230

the responsibility of wife ಪತ್ನಿ

                                42. ಪತ್ನಿ


1.            ಪತ್ನಿಯು ತನ್ನ ಪತಿಯೊಂದಿಗೆ ಐದು ರೀತಿಯಲ್ಲಿ ನಡೆದುಕೊಳ್ಳಬೇಕು :


     1. ಮನೆಯನ್ನು ಅಥವಾ ಸಂಪತ್ತನ್ನು ವ್ಯವಸ್ಥಿತವಾಗಿ ನೋಡಿಕೊಂಡು ಹೋಗುವುದು.

     2. ಪತಿಯ ಬಂಧುಗಳಿಗೆ ಸಹಾಯ ಮಾಡುವುದು.
     3. ನಿಷ್ಠಾವಂತೆ ಯಾಗಿರುವುದು.
     4. ಪತಿಯ ಸಂಪತ್ತನ್ನು ರಕ್ಷಿಸುವುದು
      5. ಪರಿಶ್ರಮೆಯಾಗಿರುವುದು
      6. ಸಮಯಕ್ಕೆ ಸರಿಯಾಗಿ ಆಹಾರ ಮಾಡಿ ನೀಡುವುದು.          221

2.            ಯಾರು ಸದಾ ಪೀಡಿಸುತ್ತಿರುವಳೋ, ಕ್ರೋಧಿಯೋ, ಗಂಡನನ್ನು ಅಲಕ್ಷಿಸುವಳೋ ಅಂತಹವಳು ತೊಂದರೆದಾಯಕ ಪತ್ನಿಯಾಗಿರುತ್ತಾಳೆ.                222

3.            ಯಾರು ಗಂಡನ ಆದಾಯದಲ್ಲಿ ಕದಿಯುವಳೋ, ಸುಳ್ಳು ಗಾತಿಯೋ, ವಂಚಿಸುವವಳೋ ಆಕೆಯನ್ನು ಚೋರ ಭಾಯರ್ೆ ಎನ್ನುತ್ತಾರೆ.                223


4.            ಯಾರು ವಿಧೇಯಳೋ, ಕಾರ್ಯದಕ್ಷಳೋ, ಮರು ಮತನಾಡದೆ ಎಲ್ಲಾ ಕೆಲಸ ಮಾಡುವವಳೋ, ಸಹನಾಮೂತರ್ಿಯೋ ಆಕೆ ಭಾಯರ್ೆ ಎನಿಸುತ್ತಾಳೆ.     224

the responsibility of husband ಪತಿ

                              41. ಪತಿ

1.            ಪುರುಷನು ತನ್ನ ಪತ್ನಿಯೊಂದಿಗೆ ಐದು ರೀತಿಯಲ್ಲಿ ನಡೆದುಕೊಳ್ಳಬೇಕು :
                1.            ಆತನು ಪತ್ನಿಯೊಂದಿಗೆ ಕರುಣೆಭರಿತ ಹಾಗು ಗೌರವಯುತ ಮಾತುಗಳನ್ನು ಆಡಬೇಕು.         217

                2.            ಪತ್ನಿಯೊಂದಿಗೆ ಕಟುವಾಕ್ಯ ಹಾಗು ನಿಂದನೆಯಿಂದ ವತರ್ಿಸಬಾರದು.               218

                3.            ಪತ್ನಿಯೊಂದಿಗೆ ನಿಷ್ಠಾವಂತನಾಗಿರಬೇಕು (ಅಂದರೆ ಪರ ಸ್ತ್ರೀಯರ ಸಂಬಂಧ ಬೆಳೆಸಬಾರದು)              219

                4.            ಆತನು ತನ್ನೆಲ್ಲಾ ಐಶ್ವರ್ಯವನ್ನು ಆಕೆಯ ಕೈಗೆ ಒಪ್ಪಿಸಬೇಕು.


                5.            ಆತನು ಆಕೆಗೆ ತನ್ನ ಸಾಮಥ್ರ್ಯಕ್ಕೆ ತಕ್ಕಂತೆ ಆಕೆಗೆ ವಸ್ತ್ರಗಳನ್ನು ಹಾಗು ಆಭರಣಗಳನ್ನು ನೀಡಬೇಕು.      220

Monday 20 March 2017

quotes on children ಮಕ್ಕಳು

                                         40. ಮಕ್ಕಳು

1.            ಮಕ್ಕಳಿಗೆ ಪಾಪದಿಂದ ತಡೆಯುವುದು.    212

2.            ಪುಣ್ಯವನ್ನು ಮಾಡಲು ಪ್ರೋತ್ಸಾಹಿಸುವುದು.           213

3.            ಯೋಗ್ಯ ವಿದ್ಯಾಭ್ಯಾಸ ಮತ್ತು ವೃತ್ತಿಯಲ್ಲಿ ತೊಡಗಿಸು
ವುದು.      214

4.            ಯೋಗ್ಯರೊಂದಿಗೆ ವಿವಾಹ ಮಾಡಿಸುವುದು ಮತ್ತು ಕಾಲ ಬಂದಾಗ ಅವರಿಗೆ ಆಸ್ತಿಯನ್ನು ನೀಡುವುದು - ಇವು ತಂದೆ-ತಾಯಿಗಳ ಕರ್ತವ್ಯವಾಗಿದೆ.     215


5.            ವಿವೇಕಿಗಳು ಮಕ್ಕಳನ್ನು ಅಪಾಯದಿಂದ, ಭಯದಿಂದ ಮತ್ತು ಕೆಟ್ಟದ್ದರಿಂದ ರಕ್ಷಿಸುತ್ತಾರೆ.       21

quotes on parents ತಂದೆ ತಾಯಿಯರು

                                       39. ತಂದೆ ತಾಯಿಯರು


1.            ತಂದೆ-ತಾಯಿಗಳ ಸೇವೆ, ಪತ್ನಿ ಪುತ್ರರ ಸಲಹುವಿಕೆ
ಮತ್ತು ಶಾಂತಿಯುತ ಯೋಗ್ಯ ವೃತ್ತಿ ಇವು ಅತ್ಯಂತ ಮಂಗಳಕರ.          207

2.            ಲೋಕದಲ್ಲಿ ತಂದೆತಾಯಿಯರನ್ನು ಸೇವಿಸುವುದು ಸುಖ. ಸಮಣರ ಸೇವೆ ಮಾಡುವುದು ಸುಖ ಮತ್ತು ಪುಣ್ಯವಂತರ ಸೇವೆ ಮಾಡುವುದು ಸುಖ.      208

3.            ಮಾತಾಪಿತರಿಗೆ ಪರಿಚಾರಿಕೆ ಮಾಡುವ ವಿವೇಕಿಯು ಇಲ್ಲಿಯೇ ಪ್ರಶಂಸೆಯನ್ನು ಗಳಿಸುತ್ತಾನೆ, ನಂತರ ಸುಗತಿಯಲ್ಲಿ ಆನಂದಿಸುತ್ತಾನೆ.                209

4.            ತಂದೆ-ತಾಯಿಯರಿಗೆ ಎಲ್ಲಾ ರೀತಿಯ ಪೂರ್ಣ ಸೇವೆ ಮಾಡಿಯೂ, ಅವರಿಗೆ ಇಡೀ ವಿಶ್ವದ ಅಧಿಪತ್ಯ ನೀಡಿದರೂ ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ.            210


5.            ತಂದೆ-ತಾಯಿಯರಿಗೆ ಎಲ್ಲಾ ರೀತಿಯ ಸಹಾಯ ಮಾಡುವುದು, ಮಾಡತಕ್ಕ ಕರ್ತವ್ಯಗಳನ್ನು ಮಾಡುವುದು, ಕುಟುಂಬದ ಸುಸಂಪ್ರದಾಯ ಪಾಲನೆ, ಘನತೆ ಕಾಪಾಡುವುದು, ಅವರ ಆಸ್ತಿಯನ್ನು ಚೆನ್ನಾಗಿ ನೋಡಿಕೊಳ್ಳುವುದು, ಅವರ ಮರಣದ ನಂತರ ಅವರ ಹೆಸರಿನಲ್ಲಿ ದಾನ ಅಪರ್ಿಸುವುದು ಮಕ್ಕಳ ಕರ್ತವ್ಯವಾಗಿದೆ.          211

quotes on friendship ಮಿತ್ರತ್ವ

                                  38. ಮಿತ್ರತ್ವ


1.            ಹೃತ್ಫೂರ್ವಕ ಮಿತ್ರತ್ವವು ಪರಮ ಮಧುರವಾಗಿರುತ್ತದೆ.          201

2.            ಒಬ್ಬನಿಗೆ ಯೋಗ್ಯ ಮಿತ್ರ (ತನಗಿಂತ ಶ್ರೇಷ್ಠ ಅಥವಾ ಸಮಾನ) ದೊರಕದಿದ್ದರೆ ಒಂಟಿಯಾಗಿರುವುದು ಉತ್ತಮ. ಆದರೆ ಮೂರ್ಖರ ಸಂಗಡ ಬೇಡವೇ ಬೇಡ.      202

3.            ನಾಲ್ಕು ಬಗೆಯವರನ್ನು ನಿನು ನಿನ್ನ ಮಿತ್ರರೆಂದು ತಿಳಿ :
                1. ಸಹಾಯ ಮಾಡುವವ  2. ಸುಖ ದುಃಖದಲ್ಲಿ ಸಮಭಾಗಿ ಯಾದವ  3. ಬುದ್ಧಿವಾದ ಹೇಳುವವ  4. ಅನುಕಂಪದಿಂದ ಕೂಡಿರುವವನು. 203

4.            ಹೇಗೆ ಹೊಗಳಿಕೆ ಮಿತ್ರನಿಂದ ದುರುಪಯೋಗವಾಗಿ ಹಾನಿಯಾಗುತ್ತದೋ ಹಾಗೆಯೇ ಶತ್ರುವಿನ ನಿಂದೆ ಕೆಲವೊಮ್ಮೆ ಸರಿಯಾಗಿರುತ್ತದೆ.                204

5.            ಪ್ರೀತಿಯು ಹಿಂದಿನ ಜನ್ಮಗಳ ಸಂಬಂಧದಿಂದ ಉದಯಿಸುತ್ತದೆ ಮತ್ತು ವರ್ತಮಾನದ ಅನುಕಂಪದಿಂದ ಚೇತನಗೊಳ್ಳುತ್ತದೆ. ಹೇಗೆಂದರೆ ಕಮಲವು ನೀರು ಮತ್ತು ಕೆಸರಿನಿಂದ ಅರಳುವ ಹಾಗೆ.             205


6.            ಸ್ನೇಹದ ಕಾರಣದಿಂದ ದುಃಖ ಉದಯಿಸುವುದು. ಆದ್ದರಿಂದ ಸ್ನೇಹದ ದುಷ್ಪರಿಣಾಮಗಳನ್ನು ಅರಿತು ಸ್ಮೇಹರಹಿತನಾಗಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.    206

quotes on treasure ಐಶ್ವರ್ಯ

                                       37. ಐಶ್ವರ್ಯ


1.            ಆರೋಗ್ಯವು ಪರಮಲಾಭ. ಸಂತೃಪ್ತಿಯೇ ಶ್ರೇಷ್ಠ ಐಶ್ವರ್ಯ. ವಿಶ್ವಾಸಯೋಗ್ಯನೇ ಶ್ರೇಷ್ಠ ಬಂಧು. ನಿಬ್ಬಾಣವೇ ಪರಮ
ಸುಖ.      194

2.            ಗೃಹಸ್ಥನು ತಮ್ಮ ಐಶ್ವರ್ಯವನ್ನು ನಾಲ್ಕು ಭಾಗವಾಗಿ ಹಂಚಿಕೊಳ್ಳುತ್ತಾನೆ : 1. ನಿತ್ಯಬಳಕೆಗೆ  2. ದಾನಕ್ಕೆ  3. ಬಂಡವಾಳಕ್ಕೆ  4. ಆಪತ್ ಸಮಯಕ್ಕೆ.             195

3.            ಒಬ್ಬನು ಪ್ರಜ್ಞಾಪೂರ್ವಕವಾಗಿ ಯೋಚಿಸಿ ಖಚರ್ು ಮಾಡಬೇಕು. ಆತನ ಲಾಭಾಂಶವನ್ನು ಅತಿ ಖಚರ್ು ಮಾಡಬಾರದು, ಅತಿ ಕಡಿಮೆಯು ಕೂಡದು. ಏಕೆಂದರೆ ಹೆಚ್ಚು ಖಚರ್ು ಮಾಡಿದರೆ ಭಿಕಾರಿಯಾಗುತ್ತಾನೆ. ಅತಿ ಕಡಿಮೆ ಖಚರ್ು ಮಾಡಿದರೆ ಲೋಭಿಯಾಗುತ್ತಾನೆ.     196

4.            ಐಶ್ವರ್ಯ ಮುರ್ಖನನ್ನು ಮಾತ್ರ ನಾಶಗೊಳಿಸುತ್ತದೆ, ಆದರೆ ಶ್ರೇಷ್ಠತ್ವದ ಅನ್ವೇಷಣೆಗಾರನಿಗೆ ಅಲ್ಲ. ಐಶ್ವರ್ಯದ ಲೋಭಿಯು ತನ್ನನ್ನು ಮಾತ್ರವಲ್ಲ, ಪರರಿಗೂ ಹಾಳು ಮಾಡುತ್ತಾನೆ.         197

5.            ನನಗೆ ಮಕ್ಕಳುಂಟು, ನನ್ನಲ್ಲಿ ಐಶ್ವರ್ಯವಿದೆ ಎಂದು ಮೂರ್ಖನು ತೊಂದರೆಗೆ ಸಿಲುಕುತ್ತಾನೆ. ಆದರೆ ವಾಸ್ತವವಾಗಿ ಆತನಿಗೆ ಆತನೇ ಇಲ್ಲ. ಇನ್ನು ಎಲ್ಲಿಯ ಮಕ್ಕಳು, ಎಲ್ಲಿಯ ಐಶ್ವರ್ಯ ?!.      198

6.            ಉಚಿತ ಕಾರ್ಯಗಳನ್ನು ಮಾಡುವವನು, ಧೈರ್ಯವಂತನು ಹಾಗು ಪರಿಶ್ರಮವುಳ್ಳವನು ಧನ ಗಳಿಸುತ್ತಾನೆ.           199

7.            ಶ್ರೇಷ್ಠವಾದ ಧನಗಳು ಏಳು ಅವೆಂದರೆ : ಶ್ರದ್ಧೆ, ಶೀಲ, ಹಿರಿ, ಪಾಪಭೀತಿ, ವಿದ್ಯೆ, ತ್ಯಾಗ ಮತ್ತು ಪ್ರಜ್ಞೆ.     200