Saturday 17 October 2015

quotes on buddha in kannada

1. ಯಾರ ಜಯವನ್ನು ಬೇರೆ ಯಾವುದರಿಂದಲೂ ಅಪಜಯ ಮಾಡಲಾಗುವುದಿಲ್ಲವೊ, ಗೆದ್ದು ಹೋದ  ಲೋಕದ ಯಾವ ಕಲ್ಮಶಗಳು ಮತ್ತೆ ಹಿಡಿಯಲಾರವೋ ಅಂತಹವರು ಬುದ್ಧರು. ಅನಂತವಾದ ಸಾಮಥ್ರ್ಯವುಳ್ಳವರು. ದಾರಿಯೇ ಇರದಿರುವಾಗ ಅವರ ದಾರಿಯನ್ನು ಹೇಗೆ ಯಾವುದರಿಂದ ಕಂಡು ಹಿಡಿಯಲು ಸಾಧ್ಯ ? 1


2. ಯಾರು ನನ್ನ ಬೋಧನೆಯನ್ನು ನೋಡುತ್ತಾರೋ (ಅರಿಯುತ್ತಾರೋ) ಅವರು ನನ್ನನ್ನು (ಬುದ್ಧರನ್ನು) ಕಾಣುತ್ತಾರೆ (ಅರಿಯುತ್ತಾರೆ). 2
3. ಯಾರು ರೋಗಿಯನ್ನು ಆರೈಕೆ ಮಾಡುತ್ತಾರೋ ಅವರು ನನಗೆ (ಬುದ್ಧರಿಗೆ) ಸೇವೆ ಮಾಡುತ್ತಾರೆ. 3
4. ಒಂದು ಅದ್ಭುತಜೀವಿ, ಒಬ್ಬ ಅಸಮಾನ್ಯ ಮಾನವರು ಈ ಜಗತ್ತಿನಲ್ಲಿ ಉದಯಿಸುವರು, ಅವರು ಜಗತ್ತಿನ ಸರ್ವಹಿತಕ್ಕಾಗಿ, ಸರ್ವರ ಸುಖಕ್ಕಾಗಿ, ಜಗತ್ತಿನ ಮೇಲಿನ ಅನುಕಂಪದಿಂದಾಗಿ ಉದಯಿಸುವರು. ಒಳ್ಳೆಯದಕ್ಕಾಗಿ, ದೇವ-ಮನುಷ್ಯರ ಹಿತ ಸುಖಕ್ಕಾಗಿ ಹುಟ್ಟುವಂತಹ ಆ ಅದ್ವಿತೀಯ ಜೀವಿಯೇ
ಬುದ್ಧರು. 4
5. ಸರ್ವ ಲೋಕದಲ್ಲಿ ಅವರನ್ನು ಮೀರಿದವರು ಯಾರೂ ಇಲ್ಲ. ಯಾರಿಂದಲೂ ಅವರನ್ನು ಜಯಿಸಲು ಸಾಧ್ಯವಿಲ್ಲ. ಸರ್ವಲೋಕವನ್ನು ತಿಳಿದು, ಸರ್ವಲೋಕಗಳಿಂದ ಬಿಡುಗಡೆ ಪಡೆದವರು. ಅವರು ಮುಕ್ತರಲ್ಲಿ ಅಗ್ರರು, ದಾಟಿರುವವರಲ್ಲಿ ಶ್ರೇಷ್ಠರು, ಅರಿತಿರುವವರಲ್ಲಿ ಅನುಪಮರು. 5
6. ಬುದ್ಧರ ಉದಯ ದುರ್ಲಭ...
ಬುದ್ಧರ ಹುಟ್ಟುವಿಕೆ ಸುಖಕರ, ಮಂಗಳಕರ...
ಅಂತಹ ಪುರುಷಶ್ರೇಷ್ಠರನ್ನು ಕಾಣುವುದು ದುರ್ಲಭ.