Monday, 19 September 2016

quotes on right view in kannada ( ಯೋಗ್ಯವಾದ ದೃಷ್ಟಿಕೋನ)

8. ಯೋಗ್ಯವಾದ ದೃಷ್ಟಿಕೋನ


1.  ಒಂದು ಸಿದ್ಧಾಂತಕ್ಕೆ ಅಂಟಿಕೊಂಡು, ಪರರ ದೃಷ್ಟಿಕೋನವನ್ನು ಕೀಳಾಗಿ ಕಾಣುವುದನ್ನು ಜ್ಞಾನಿಗಳು ತಡೆ ಎಂದಿದ್ದಾರೆ.     372.          ಈ ಪ್ರಪಂಚವು ನಿರಂತರ ಪ್ರವಾಹದಂತೆ ಮತ್ತು ಅನಿತ್ಯ ವಾದುದು. ಯಾವುದೆಲ್ಲವೂ ಉತ್ಪತ್ತಿಯಾಗುತ್ತದೋ ಅದೆಲ್ಲವೂ ಅಳಿಯುತ್ತದೆ. ಪರಿವರ್ತನೆ ಮತ್ತು ಅನಿತ್ಯತೆಯೇ ಜೀವನದ ಸ್ವರೂಪವಾಗಿದೆ. ಯಾವುದೆಲ್ಲಾ ಅನಿತ್ಯವೋ ಅದೆಲ್ಲವೂ ದುಃಖಕರವಾಗಿದೆ. ಒಬ್ಬನು ಸುಖವಾಗಿದ್ದಾಗಲೂ ಆ ಸುಖವು ಹಾಗೆಯೇ ಉಳಿಯಲಾರದು.     383.          ಯಾರು ಸಮ್ಮದೃಷ್ಟಿಯನ್ನು ಹೊಂದಿರುವರೋ ಅವರಲ್ಲಿ ಇವೆಲ್ಲಾ ನಿತ್ಯ ಎಂಬ ಭಾವನೆ ಇರುವುದಿಲ್ಲ ಅಥವಾ ಇವೆಲ್ಲಾ ಸುಖ ಅಥವಾ ಇದೇ ಆತ್ಮ ಎಂಬ ಭಾವನೆ ಬರುವುದೇ ಇಲ್ಲ ಅದು ಅವರಲ್ಲಿ ಅಸಾಧ್ಯ.      394.         ಒಂದುವೇಳೆ ಜನರ ದೃಷ್ಟಿಯು ಪವಿತ್ರವಾಗಿದ್ದರೆ, ಅವರು ಶುದ್ಧರು, ಪ್ರಜ್ಞಾವಂತರು, ಕುಶಲರು ಮತ್ತು ಮತಿವಂತರಾಗುತ್ತಿದ್ದರು. ಅವರಲ್ಲಿ ಯಾರು ಪ್ರಜ್ಞಾವಿಹೀನನಾಗುತ್ತಿರಲಿಲ್ಲ. ಅವರ ದೃಷ್ಟಿಯು ಪರಿಪೂರ್ಣವಾಗುತ್ತಿತ್ತು.        405.          ಸಮ್ಮದೃಷ್ಟಿ ಎಂದರೆ ನಾಲ್ಕು ಆರ್ಯ ಸತ್ಯಗಳ ಜ್ಞಾನವೇ
ಆಗಿದೆ.    416.          ಇಷ್ಟೊಂದು ಶುಭ್ರವಾದ, ಪರಿಶುದ್ಧವಾದ ಈ ಬೋಧನೆಗೂ ನೀವು ಅಂಟಿದರೆ, ನೀವು ತೆಪ್ಪದ ಬೋಧನೆ ಅರ್ಥಮಾಡಿಕೊಳ್ಳಿ. ಹೇಗೆಂದರೆ ಬೋಧನೆ ದಾಟುವುದಕ್ಕೆ ಹಿಡಿದುಕೊಳ್ಳಲಿಕ್ಕೆ ಅಲ್ಲ.      42


No comments:

Post a Comment