Monday, 27 February 2017

The Mind in kannada ಮನಸ್ಸು

16. ಮನಸ್ಸು


1.            ಮನಸ್ಸನ್ನು ಗ್ರಹಿಸುವುದು ಕಷ್ಟಕರ, ಅತ್ಯಂತ ಸೂಕ್ಷ್ಮವು ಎಲ್ಲೆಂದರಲ್ಲಿ ಜಾರುತ್ತವೆ. ಆದರೆ ಜ್ಞಾನಿಯು ಅದರ ರಕ್ಷಣೆ ಮಾಡುತ್ತಾನೆ. ರಕ್ಷಿಸಲ್ಪಟ್ಟ ಮನಸ್ಸು ಸುಖವನ್ನು
ನೀಡುತ್ತದೆ.              82
2.            ನಾವು ನಮ್ಮ ಹಿಂದಿನ ಯೋಚನೆಗಳ ಫಲಿತಾಂಶವಾಗಿದ್ದೇವೆ. ನಮ್ಮ ಮುಂದಿನ ಫಲಿತಾಂಶ ನಮ್ಮ ಈಗಿನ ಯೋಚನೆಗಳಂತೆ ಆಗುತ್ತದೆ.                83
3.            ಪಳಗಿದ ಮನಸ್ಸು ಮಹತ್ಫಲವನ್ನು ಮಹಾ ಲಾಭವನ್ನು ನೀಡುತ್ತದೆ, ಪರಮ ಆನಂದವನ್ನು ನೀಡುತ್ತದೆ. ಹಾಗೆಯೇ ಅಶಿಕ್ಷಿತ ಮನಸ್ಸು ದುರ್ಗತಿಯನ್ನು, ದುಃಖವನ್ನು, ನಷ್ಟವನ್ನು ಉಂಟುಮಾಡುತ್ತದೆ. ನಿಯಂತ್ರಿತ ಮನಸ್ಸಿನಿಂದ, ರಕ್ಷಿತ ಮನಸ್ಸಿನಿಂದ, ಜಾಗೃತ ಮನಸ್ಸಿನಿಂದ ಮಹತ್ ಲಾಭವು ಲಭಿಸುತ್ತದೆ, ಪರಮಸುಖವು ಸಿಗುತ್ತದೆ.    84
4.            ಮನಸ್ಸಿನಿಂದಲೇ ಜಗತ್ತು ಮಾರ್ಗದಶರ್ಿತವಾಗಿದೆ. ಮನಸ್ಸಿನಿಂದಲೇ ಜಗತ್ತು ಚಿತ್ರಿತವಾಗಿದೆ. ಹಾಗು ಸರ್ವ ಮಾನವರು ಮನಸ್ಸಿನ ಸರ್ವಶಕ್ತತೆಯನ್ನು ಪಡೆದಿದ್ದಾರೆ.             85


5.            ಮನಸ್ಸೇ ಎಲ್ಲಾ ಮಾನಸಿಕ ಸ್ಥಿತಿಗಳ ಮೂಲ, ಮನಸ್ಸೇ ಅವುಗಳ ನಾಯಕ, ಮನಸ್ಸಿನಿಂದಲೇ ಅವುಗಳ ನಿಮರ್ಿತಿ. ಒಬ್ಬನು ಪ್ರಸನ್ನವಾದ ಮನಸ್ಸಿನಿಂದ ಮಾತನಾಡಿದರೆ ಅಥವಾ ಕಾರ್ಯ ಮಾಡಿದರೆ ಎಂದಿಗೂ ಬಿಡದೆ ಹಿಂಬಾಲಿಸುವ ನೆರಳಿನ ಹಾಗೆ ಸುಖವು ಆತನನ್ನು ಹಿಂಬಾಲಿಸುತ್ತದೆ.                 86

The Right Meditation in kannada ಯೋಗ್ಯವಾದ ಸಮಾಧಿ

15. ಯೋಗ್ಯವಾದ ಸಮಾಧಿ
1.            ಎಚ್ಚರಿಕೆರಹಿತತೆಯಲ್ಲಿ ಆನಂದಿಸಬೇಡ, ಸುಖಭೋಗಗಳಲ್ಲಿ ಸ್ನೇಹಬೇಡ, ಪರಿಶ್ರಮಿಯಾದ ಧ್ಯಾನಿಯು ಅಪಾರವಾದ ಆನಂದ ಅನುಭವಿಸುತ್ತಾನೆ.  75
2.            ಸಮಾಧಿಯಿಂದ ಜ್ಞಾನವು ಉದಯಿಸುತ್ತದೆ. ಏಕಾಗ್ರತೆ ರಹಿತತೆಯಿಂದ ಜ್ಞಾನವು ಕ್ಷಯಿಸುತ್ತದೆ.            76
3.            ಯಾರು ಪ್ರಜ್ಞಾದ ಕೊರತೆಯುಳ್ಳವರೋ ಅವರಿಗೆ ಸಮಾಧಿಯಿಲ್ಲ, ಹಾಗೆಯೇ ಸಮಾಧಿಯ ಕೊರತೆಯುಳ್ಳವರಿಗೆ ಪ್ರಜ್ಞಾವು ದೊರೆಯುವುದಿಲ್ಲ. ಯಾರಲ್ಲಿ ಸಮಾಧಿ ಮತ್ತು ಪ್ರಜ್ಞಾಗಳು ಎರಡು ಕೂಡಿರುವುದೋ ಆತನು ವಿಮುಕ್ತಿಗೆ ಹತ್ತಿರ
ವಾಗಿದ್ದಾನೆ.             77
4.            ಸಮಾಧಿಸ್ಥನಾಗು, ಧ್ಯಾನದಲ್ಲಿ ತಲ್ಲೀನನಾಗು, ನಿತ್ಯವೂ ಧರ್ಮಕ್ಕೆ ಅನುಸಾರವಾಗಿ ನಡೆ, ಸಂಸಾರದ ದುಷ್ಪರಿಣಾಮಗಳನ್ನು ಮನನ ಮಾಡುತ್ತಾ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
5.            ರಾಗಯುಕ್ತವಾದ ಸೌಂದರ್ಯದ ನಿಮಿತ್ತ (ಗ್ರಹಿಕೆ)ಗಳನ್ನು ತ್ಯಜಿಸು, ಏಕಾಗ್ರ ಹಾಗು ಸಮಾಧಿಸ್ಥನಾಗು, ಅಶುಭದ ಭಾವನೆಯಲ್ಲಿ ಚಿತ್ತವನ್ನು ನಿಲ್ಲಿಸು. ಅನಿಮಿತ್ತ (ಗ್ರಹಿಕೆಗೆ ಅತೀತ)ವನ್ನು ವೃದ್ಧಿಗೊಳಿಸಿಕೋ, ಚಿತ್ತವೃತ್ತಿಗಳನ್ನು ತೆಗೆದುಹಾಕು. ಆಗ ಅಭಿಮಾನದ ಅಂತ್ಯ ಮಾಡಿ ವಿಹರಿಸುವೆ. 79
6.            ಒಂದೇ ಆಸನದಲ್ಲಿ ಬಹುಕಾಲ ಇರುವಂತೆ ಅಭ್ಯಸಿಸು ಮತ್ತು ಭಿಕ್ಷುಗಳ ಸಂಗತಿ ಮಾಡು, ಏಕಾಂತವಾಸಿಯು ಮೌನೇಯ ಎಂದು ಕರೆಯಲ್ಪಡುತ್ತಾನೆ, ಚಿತ್ತದ ಏಕಾಂತತೆಯಲ್ಲಿ ವಿಹರಿಸುವವನು ದಶದಿಕ್ಕುಗಳನ್ನು ಪ್ರಕಾಶಿಸುವನು.         80

7.            ಹಿಂದಿನ ಯೋಚನೆಗಳಲ್ಲಿ ಅಲೆದಾಡಬೇಡ, ಭವಿಷ್ಯದ ಕನಸುಗಳಲ್ಲಿ ತೊಡಗಿರಬೇಡ, ವರ್ತಮಾನದ ಕ್ಷಣದಲ್ಲಿ ಏಕಾಗ್ರಿತನಾಗಿರು.        81

The Right Mindfulness in kannada ಯೋಗ್ಯವಾದ ಜಾಗ್ರತೆ

14. ಯೋಗ್ಯವಾದ ಜಾಗ್ರತೆ

1.            ಮೂರ್ಖರು ತಮ್ಮ ಅಲ್ಪಜ್ಞತೆಯಿಂದಾಗಿ ಅಜಾಗರೂಕ ರಾಗುತ್ತಾರೆ. ಆದರೆ ಜ್ಞಾನಿಗಳು ಎಚ್ಚರಿಕೆಯನ್ನು ಅಮೂಲ್ಯ ಐಶ್ವರ್ಯದಂತೆ ಕಾಪಾಡುತ್ತಾರೆ.      69
2.            ಎಚ್ಚರದಿಂದಿರುವಿಕೆ ಅಮರತ್ವದ ಹಾದಿಯಾಗಿದೆ, ಅಲಕ್ಷವು ಮೃತ್ಯುವಿನ ಮಾರ್ಗವಾಗಿದೆ. ಎಚ್ಚರಿಕೆಯುಳ್ಳವ ಎಂದಿಗೂ ಸಾಯಲಾರ, ಎಚ್ಚರ ತಪ್ಪಿದವ ಸತ್ತಂತೆ ಇದ್ದಾನೆ.     70
3.            ಜಾಗರೂಕತೆಯಿಂದ ಭವಸಾಗರವನ್ನು ಹಾರುತ್ತಾನೆ.              71
4.            ಎದ್ದೇಳು, ಕುಳಿತುಕೋ, ಮಲಗುವುದರಿಂದ ನಿನಗೇನು ಲಾಭ? ಮುಳ್ಳುಗಳಿಂದ ಚುಚ್ಚಿಸಿಕೊಂಡಿರುವ ನಿನಗೆ ನಿದ್ದೆ
ಏತಕ್ಕಾಗಿ?              72
5.            ಎದ್ದೇಳು, ಕುಳಿತುಕೋ, ದೃಢತೆಯ ಸಹಿತ, ನಿಬ್ಬಾಣಕ್ಕಾಗಿ ಪರಿಶ್ರಮಿಸು.              73

6.            ಭಿಕ್ಷುಗಳೇ, ಎಚ್ಚರಿಕೆಯನ್ನು ನಾನು ಸರ್ವರೀತಿಯ ಸಹಾಯಕಾರಿ ಎಂದು ಘೋಷಿಸುತ್ತೇನೆ...ಜಾಗರೂಕನು ವೇಗದ ಕುದುರೆಯಂತೆ, ಎಚ್ಚರದಿಂದಲೇ ಶ್ರೇಷ್ಠತ್ವ ಲಭ್ಯ. ಎಚ್ಚರದಿಂದಿರುವುದು ಸದಾ ಶ್ಲಾಘನೀಯ. ಎಚ್ಚರದಿಂದ ಇರುವವನಿಗೆ ಅವನತಿಯಿಲ್ಲ. ಜಾಗೃತನು ನಿಬ್ಬಾಣಕ್ಕೆ ಹತ್ತಿರ.                74

The Right Effort in kannada ಯೋಗ್ಯವಾದ ವ್ಯಾಯಾಮ

13. ಯೋಗ್ಯವಾದ ವ್ಯಾಯಾಮ

1.            ಮನಸ್ಸಿನ ಮೂರು ಪಾಪಗಳೆಂದರೆ ಲೋಭ, ದ್ವೇಷ ಮತ್ತು ಮೋಹ. ಅಕುಶಲ (ಪಾಪ) ಯೋಚನೆ ರಕ್ಷಿಸು. ಅಕುಶಲ (ಪಾಪ) ಯೋಚನೆಗಳನ್ನು ತ್ಯಜಿಸು. ಕುಶಲ ಯೋಚನೆಗಳನ್ನು ಅಭಿವೃದ್ಧಿಗೊಳಿಸು ಮತ್ತು ಕುಶಲ ಯೋಚನೆಗಳನ್ನು ರಕ್ಷಿಸು (ಪರಿಪೂರ್ಣಗೊಳಿಸು).                64
ಉತ್ಪನ್ನವಾಗದಂತೆ
2.            ನಡೆಯುವಾಗ, ನಿಂತಾಗ, ಕುಳಿತಿರುವಾಗ, ಮಲಗಿರುವಾಗ, ದೇಹವನ್ನು ಬಾಗಿಸಿದಾಗ ಅಥವಾ ನೆಟ್ಟಗೆ ಮಾಡಿಕೊಂಡಾಗ ಸವರ್ಾವಸ್ಥೆಯಲ್ಲಿಯೂ ಭಿಕ್ಷು ಸಂಯಮದಿಂದಿರಲಿ.           65
3.            ಆತನು ಪಾಪ ಯೋಚನೆ ಹುಟ್ಟಿಕೊಂಡಾಗ ಅದನ್ನು ಸಹಿಸುವುದಿಲ್ಲ. ಅದನ್ನು ದೂರ ಮಾಡುತ್ತಾನೆ. ಹುಟ್ಟುತ್ತಿದ್ದ ಹಾಗೆಯೇ ಧಮಿಸುತ್ತಾನೆ, ಗೆಲ್ಲುತ್ತಾನೆ, ಅಂತ್ಯಗೊಳಿಸಿ ಅವು ಇಲ್ಲದಂತೆ ಮಾಡುತ್ತಾನೆ.   66
4.            ಕೆಟ್ಟ ಯೋಚನೆಗಳನ್ನು ತ್ಯಜಿಸಿ, ಕುಶಲ ಭಾವನೆಗಳನ್ನು ವೃದ್ಧಿಸುವ ಜಾಣನು ಅನಿಕೇತನನಾಗಿ ಸಬಲವಾದ ಪ್ರಜ್ಞಾವನ್ನು ಬೆಳೆಸಿಕೊಳ್ಳಲಿ.                67
5.            ಕಂಠದವರೆಗೆ ತುಂಬಿರುವ ಎಣ್ಣೆಯ ಪಾತ್ರೆಯನ್ನು ಒಂದು ತೊಟ್ಟು ಚೆಲ್ಲದಂತೆ ಹೇಗೆ ತೆಗೆದುಕೊಂಡು ಹೋಗುವರೋ ಹಾಗೆ ನಿಬ್ಬಾಣವನ್ನು ಬಯಸುವವರು ಚಿತ್ತದ ರಕ್ಷಣೆ ಮಾಡ
ಬೇಕು.     68


The Right Livelihood in kannada ಯೋಗ್ಯವಾದ ಜೀವನೋಪಾಯ

12. ಯೋಗ್ಯವಾದ ಜೀವನೋಪಾಯ
1
.               ಪರರಿಗೆ ಸ್ವಲ್ಪವೂ ಹಾನಿ ಮಾಡದೆ ಯಾರು ಜೀವಿಸುತ್ತಿರುವರೋ ಅವರು ಧನ್ಯರೇ ಸರಿ.        60
2.            ಯೋಗ್ಯ ವೃತ್ತಿಯಲ್ಲಿ ತೊಡಗುವುದೇ ಸಮ್ಮಜೀವನ. ಪರರಿಗೆ ತೊಂದರೆಯಾಗುವ ಯಾವ ವೃತ್ತಿಯನ್ನು ಆಯ್ಕೆ ಮಾಡಬಾರದು. ಉದಾ: ಪ್ರಾಣಿಗಳ ಮಾರಾಟ, ಶಸ್ತ್ರಗಳ ಮಾರಾಟ, ಮಾಂಸದ ಮಾರಾಟ, ವಿಷವಸ್ತುಗಳ ಮಾರಾಟ, ಮಧ್ಯಪಾನದ ಮಾರಾಟ, ವೇಶ್ಯಾವೃತ್ತಿ ಇತ್ಯಾದಿ. 61
3.            ಒಳ್ಳೆಯ ಸಚ್ಚಾರಿತ್ರ್ಯದ ಜೀವನವನ್ನು ನಡೆಸು, ದುಶ್ಚಾರಿತ್ರ್ಯದ ಜೀವನ ನಡೆಸಬೇಡ. ಸುಧಮ್ಮವನ್ನು ಅನುಸರಿಸುವವನು ಲೋಕದಲ್ಲಿ ಮತ್ತು ಪರಲೋಕದಲ್ಲೂ ಸುಖಿಯಾಗಿ ಬದುಕುವನು.               62
4.            ಹೀನವಾದ ಧರ್ಮವನ್ನು ಸೇವಿಸಬೇಡ, ಎಚ್ಚರಿಕೆ ತಪ್ಪಿ ಬಾಳಬೇಡ. ಮಿಥ್ಯಾದೃಷ್ಟಿಯನ್ನು ಅನುಸರಿಸಬೇಡ, ಲೋಕದ ಬಾಳುವೆಗಾಗಿ ಬದು
ಕಬೇಡ.           63


Right Actions in kannada ಯೋಗ್ಯವಾದ ಕರ್ಮ

11. ಯೋಗ್ಯವಾದ ಕರ್ಮ

1.            ದೇಹದ ಮೂರು ಪಾಪಗಳೆಂದರೆ ಕೊಲ್ಲುವಿಕೆ, ಕಳ್ಳತನ ಮತ್ತು ವ್ಯಭಿಚಾರ.            55
2.            ಹೇಗೆ ನಾನು ಇರುವೆನೋ ಹಾಗೆಯೇ ಜೀವಿಗಳೂ ಸಹಾ, ಹೇಗೆ ಜೀವಿಗಳಿರುವೆವೋ ಹಾಗೆಯೇ ನಾನಿರುವೆನು, ರೀತಿಯಾಗಿ ಎಲ್ಲರೂ ತನ್ನ ಸಮಾನರು ಎಂದು ಅರಿತು ಯಾರಿಗೂ ವಧಿಸದಿರು ಮತ್ತು ಪರರಿಂದ ಕೊಲ್ಲಿಸದಿರು (ಹಿಂಸಿಸದಿರು).               56
3.            ಉದ್ದವಾದದ್ದಾಗಿರಲಿ ಅಥವಾ ಗಿಡ್ಡದ್ದಾಗಿರಲಿ, ಅಣುವಷ್ಟಾಗಿರಲಿ ಅಥವಾ ಸ್ಥೂಲವಾಗಿರಲಿ, ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದೇ ಆಗಿರಲಿ ಯಾರು ತನಗೆ ಕೊಡದೆ ಇದ್ದುದನ್ನು ಸ್ವೀಕರಿಸುವು ದಿಲ್ಲವೋ ಅವರನ್ನು ನಾನು ಬ್ರಾಹ್ಮಣ (ಶ್ರೇಷ್ಠ)
ಎನ್ನುತ್ತೇನೆ.             57
4.            ಎಚ್ಚರಿಕೆ ತಪ್ಪಿ ಪರನಾರಿ ಗಮನವನ್ನು ಮಾಡುವವನು ದೌಭರ್ಾಗ್ಯಗಳನ್ನು ಅನುಭವಿಸುತ್ತಾನೆ. ಪಾಪಗಳಿಕೆ, ನಿಂದೆ, ನಿದ್ರಾಭಂಗ ಮತ್ತು ನಿರಯ.   58
5.            ದುಶ್ಶೀಲನಾಗಿ ಸಂಯಮಹೀನನಾಗಿ 100 ವರ್ಷ ಬದುಕುವುದ ಕ್ಕಿಂತ ಒಂದೇ ಒಂದುದಿನ ಶೀಲವಂತನಾಗಿ ಧ್ಯಾನಿಯಾಗಿ ಬದುಕುವುದು ಮೇಲು.   59