Monday 27 February 2017

The Right Meditation in kannada ಯೋಗ್ಯವಾದ ಸಮಾಧಿ

15. ಯೋಗ್ಯವಾದ ಸಮಾಧಿ
1.            ಎಚ್ಚರಿಕೆರಹಿತತೆಯಲ್ಲಿ ಆನಂದಿಸಬೇಡ, ಸುಖಭೋಗಗಳಲ್ಲಿ ಸ್ನೇಹಬೇಡ, ಪರಿಶ್ರಮಿಯಾದ ಧ್ಯಾನಿಯು ಅಪಾರವಾದ ಆನಂದ ಅನುಭವಿಸುತ್ತಾನೆ.  75
2.            ಸಮಾಧಿಯಿಂದ ಜ್ಞಾನವು ಉದಯಿಸುತ್ತದೆ. ಏಕಾಗ್ರತೆ ರಹಿತತೆಯಿಂದ ಜ್ಞಾನವು ಕ್ಷಯಿಸುತ್ತದೆ.            76
3.            ಯಾರು ಪ್ರಜ್ಞಾದ ಕೊರತೆಯುಳ್ಳವರೋ ಅವರಿಗೆ ಸಮಾಧಿಯಿಲ್ಲ, ಹಾಗೆಯೇ ಸಮಾಧಿಯ ಕೊರತೆಯುಳ್ಳವರಿಗೆ ಪ್ರಜ್ಞಾವು ದೊರೆಯುವುದಿಲ್ಲ. ಯಾರಲ್ಲಿ ಸಮಾಧಿ ಮತ್ತು ಪ್ರಜ್ಞಾಗಳು ಎರಡು ಕೂಡಿರುವುದೋ ಆತನು ವಿಮುಕ್ತಿಗೆ ಹತ್ತಿರ
ವಾಗಿದ್ದಾನೆ.             77
4.            ಸಮಾಧಿಸ್ಥನಾಗು, ಧ್ಯಾನದಲ್ಲಿ ತಲ್ಲೀನನಾಗು, ನಿತ್ಯವೂ ಧರ್ಮಕ್ಕೆ ಅನುಸಾರವಾಗಿ ನಡೆ, ಸಂಸಾರದ ದುಷ್ಪರಿಣಾಮಗಳನ್ನು ಮನನ ಮಾಡುತ್ತಾ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
5.            ರಾಗಯುಕ್ತವಾದ ಸೌಂದರ್ಯದ ನಿಮಿತ್ತ (ಗ್ರಹಿಕೆ)ಗಳನ್ನು ತ್ಯಜಿಸು, ಏಕಾಗ್ರ ಹಾಗು ಸಮಾಧಿಸ್ಥನಾಗು, ಅಶುಭದ ಭಾವನೆಯಲ್ಲಿ ಚಿತ್ತವನ್ನು ನಿಲ್ಲಿಸು. ಅನಿಮಿತ್ತ (ಗ್ರಹಿಕೆಗೆ ಅತೀತ)ವನ್ನು ವೃದ್ಧಿಗೊಳಿಸಿಕೋ, ಚಿತ್ತವೃತ್ತಿಗಳನ್ನು ತೆಗೆದುಹಾಕು. ಆಗ ಅಭಿಮಾನದ ಅಂತ್ಯ ಮಾಡಿ ವಿಹರಿಸುವೆ. 79
6.            ಒಂದೇ ಆಸನದಲ್ಲಿ ಬಹುಕಾಲ ಇರುವಂತೆ ಅಭ್ಯಸಿಸು ಮತ್ತು ಭಿಕ್ಷುಗಳ ಸಂಗತಿ ಮಾಡು, ಏಕಾಂತವಾಸಿಯು ಮೌನೇಯ ಎಂದು ಕರೆಯಲ್ಪಡುತ್ತಾನೆ, ಚಿತ್ತದ ಏಕಾಂತತೆಯಲ್ಲಿ ವಿಹರಿಸುವವನು ದಶದಿಕ್ಕುಗಳನ್ನು ಪ್ರಕಾಶಿಸುವನು.         80

7.            ಹಿಂದಿನ ಯೋಚನೆಗಳಲ್ಲಿ ಅಲೆದಾಡಬೇಡ, ಭವಿಷ್ಯದ ಕನಸುಗಳಲ್ಲಿ ತೊಡಗಿರಬೇಡ, ವರ್ತಮಾನದ ಕ್ಷಣದಲ್ಲಿ ಏಕಾಗ್ರಿತನಾಗಿರು.        81

No comments:

Post a Comment