Wednesday, 24 May 2017

QUOTES ON NIBBANA ನಿಬ್ಬಾಣ .

                      100. ನಿಬ್ಬಾಣ


1.            ನಿಬ್ಬಾಣಂ ಪರಮ ಸುಖಂ, ನಿಬ್ಬಾಣವು ಪರಮಶ್ರೇಷ್ಠ ಸುಖವಾಗಿದೆ (ಆದರೆ ಇದು ಇಂದ್ರಿಯಗಳ ಅಥವಾ ಮನಸ್ಸಿನ ಸುಖವಲ್ಲ).500

2.            ಹುಟ್ಟಿಲ್ಲದ, ಆದಿಯಿಲ್ಲದ, ರಚಿತವಾಗಿಲ್ಲದ ಮತ್ತು ಸ್ಥಿತಿಯಲ್ಲದ ಒಂದು ಸ್ಥಿತಿಯಿರುವುದರಿಂದಲೇ ನಾವು ಹುಟ್ಟಿನಿಂದ, ಆದಿಯಿಂದ ರಚನೆಯಿಂದ ಮತ್ತು ಸ್ಥಿತಿಗಳಿಂದ ಪಾರಾಗಲು ಸಾಧ್ಯವಿದೆ.501

3.            ಎಲ್ಲಿ ಪೃಥ್ವಿ, ಜಲ, ಗಾಳಿ, ತೇಜೋಗಳು ಇಲ್ಲವೋ ಆಕಾಶ ನಂಚಾಯತನ, ವಿನ್ಯಾನಂಚಯಾತನ, ಅಕಿಂಚಾಯಾತನ, ನೇವನಸ್ಯಾನಸನ್ಯಾಯಾತನಗಳು ಇಲ್ಲವೋ, ಲೋಕಗಳು, ಪರಲೋಕಗಳು ಇಲ್ಲವೊ, ಎಲ್ಲಿ ಸೂರ್ಯಚಂದ್ರರಿಲ್ಲವೋ ಅಂಥವ ಒಂದು ಸ್ಥಿತಿಯಿದೆ. ಅಲ್ಲಿ ಹುಟ್ಟು ಇಲ್ಲ. ಅಗತಿಯು ಇಲ್ಲ. ಸ್ಥಿತಿಯು ಇಲ್ಲ, ಚ್ಯುತಿಯು ಇಲ್ಲ. ಯಾವುದು ಅದಕ್ಕೆ ಆಧಾರವಾಗಿಲ್ಲ. ಇದೇ ದುಃಖದ ಅಂತ್ಯ.  502

4.            ಕಾಯವು ಚೂರಾಗಿ, ಸನ್ಯಾವು ಅಳಿಸಿ ಹೋಗಿ, ವೇದನೆಯು ತಂಪಾಗಿ, ಸಂಖಾರವು ಉಪಶಮನ ಹೊಂದಿ, ವಿನ್ಯಾನವು ತನ್ನ ಕೊನೆಯನ್ನು ಮುಟ್ಟುತ್ತದೆ.            5035.            ಲೋಭದ ನಾಶ, ದ್ವೇಷದ ನಾಶ ಮತ್ತು ಮೋಹದ ನಾಶ - ಮಿತ್ರನೆ ಇದೇ ನಿಬ್ಬಾಣವಾಗಿದೆ.                 504

QUOTES ON NO-SELF

              99. ಅನಾತ್ಮ


1.            ದೇಹವು ನಾನಲ್ಲ. ದೇಹವೇ ನಾನಾಗಿದ್ದರೆ ಶರೀರಕ್ಕೆ ರೋಗವೇ ಬರುತ್ತಿರಲಿಲ್ಲ.         495

2.            ಯಾರು ಇದು ನನ್ನದು ಎಂದು ಎಂದಿಗೂ ಯೋಚಿಸುವು ದಿಲ್ಲವೋ ಆತನಿಗೆ ಯಾವುದೋ ಕೊರತೆ ಇದೆ ಎಂದು ಅನಿಸುವುದಿಲ್ಲ. ಹೀಗಾಗಿ ಆತ ಎಂದಿಗೂ ನಷ್ಟದ ಬಗ್ಗೆ ಚಿಂತೆಗೀಡಾಗುವುದಿಲ್ಲ.       496

3.            ಯಾರಿಗೆ ಯಾವುದೇ ವಸ್ತು ವಿಷಯದಲ್ಲಿ ಇದು ನನ್ನದು ಅಥವಾ ಇದು ಪರರದು ಹೀಗೆ ಅನಿಸುವುದಿಲ್ಲವೋ ಅಂತಹದು ಮಮತ್ವದಲ್ಲಿ ಬೀಳದಿರುವವನು ನನ್ನದಲ್ಲ ಎಂದು ಅರಿತು ಶೋಕಿಸುವುದಿಲ್ಲ.                497

4.            ದೇಹವು ಹೀಗಿರಲಿ ಅಥವಾ ಹಾಗಿರಲಿ ಎಂದರೆ ಹಾಗೆ ಆಗುವುದಿಲ್ಲ. ವೇದನೆಗಳು ಹೀಗಿರಲಿ, ಅಥವಾ ಹಾಗಿರಲಿ. ಎಂದರೆ ಹಾಗೆ ಆಗುವುದಿಲ್ಲ. ಗ್ರಹಿಕೆಗಳು ಹೀಗಿರಲಿ, ಅಥವಾ ಹಾಗಿರಲಿ. ಎಂದರೆ ಹಾಗೆ ಆಗುವುದಿಲ್ಲ. ಸಂಖಾರಗಳು ಹೀಗಿರಲಿ, ಅಥವಾ ಹಾಗಿರಲಿ. ಎಂದರೆ ಹಾಗೆ ಆಗುವುದಿಲ್ಲ. ಮನಸ್ಸು ಹೀಗಿರಲಿ, ಅಥವಾ ಹಾಗಿರಲಿ. ಎಂದರೆ ಹಾಗೆ ಆಗುವುದಿಲ್ಲ. ಇವೆಲ್ಲಾ ಅನಿತ್ಯವಾಗಿದೆ. ಯಾವುದು ಅನಿತ್ಯವೋ ಅದು ದುಃಖವಾಗಿದೆ. ಅಂತಹದನ್ನು ಇದು ನಾನು, ಇದು ನನ್ನದು ಅಥವಾ ಇದು ನನ್ನ ಆತ್ಮ ಎಂದು ಪರಿಗಣನೆ ಮಾಡಲಾಗುವುದಿಲ್ಲ.      498

5.            ಅಜ್ಞಾನಿಯು ದೇಹಕ್ಕೆ ಅಥವಾ ವೇದನೆಗೆ ಅಥವಾ ಗ್ರಹಿಕೆಗೆ ಅಥವಾ ಯೋಚನೆಗೆ ಅಥವಾ ಅರಿವಿಗೆ ನಾನು ಎಂದು ಭಾವಿಸುತ್ತಾನೆ. ಅಥವಾ ನಾನು ಎಂಬುದು ಗುಂಪಿಗೆ ನಾಯಕ ಎಂದು ಭಾವಿಸುತ್ತಾನೆ.       499


QUOTES ON IMPERMANENCE ಅನಿತ್ಯ

                98. ಅನಿತ್ಯ


1.            ಎಲ್ಲಾ ಸಂಖಾರಗಳು ಅನಿತ್ಯವೆಂದು ಒಬ್ಬನು ಪ್ರಜ್ಞಾದಿಂದ ಅರಿತಾಗ, ಆತನು ದುಃಖದಿಂದ ವಿಮುಖನಾಗುತ್ತಾನೆ.               491

2.            ಅಹೋ! ಜೀವನವು ಅತಿ ಅಲ್ಪವಾಗಿದೆ. ನೂರು ವರ್ಷಕ್ಕಿಂತ ಮೊದಲೇ ಮಾನವ ಮೃತ್ಯುವಪ್ಪುತ್ತಾನೆ. ಯಾರು ಇದಕ್ಕಿಂತ ಅಧಿಕವಾಗಿ ಜೀವಿಸುವರೋ ಅವರೂ ಸಹಾ ವೃದ್ಧಾವಸ್ಥೆ ಪ್ರಾಪ್ತಿಮಾಡಿ ಮೃತ್ಯು ಹೊಂದುತ್ತಾರೆ.              492

3.            ಸರ್ವ ಲೋಕವು ಅಸಾರವಾಗಿದೆ. ಸರ್ವ ದಿಕ್ಕುಗಳು ವಿಚಲಿತವಾಗಿದೆ. ಕಲ್ಯಾಣ ಸ್ಥಾನ ಹುಡುಕುತ್ತಾ ನಾನು ಎಲ್ಲಿಯೂ ಆಪತ್ತಿನಿಂದ ಬರಿದಾದುದನ್ನು ಕಾಣಲಿಲ್ಲ.               493


4.            ಜೀವನವು ಭ್ರಮೆಯಾಗಿದೆ. ಸ್ವಪ್ನದಂತೆ, ನೆರಳಿನಂತೆ, ನಿರ್ಗುಳ್ಳೆಯಂತೆ ಇದೆ. ಇಲ್ಲಿ ಯಾವುದು ನಿತ್ಯವಲ್ಲ, ಶಾಶ್ವತವಲ್ಲ, ಯಾವುದು ಕೋಪಕ್ಕೆ ಅರ್ಹವಲ್ಲ, ವಿವಾದಕ್ಕೆ ಅರ್ಹವಲ್ಲ, ಯಾವುದೂ ಇಲ್ಲ.              494

QUOTES ON LOATHSOMENESS ಅಶುಭ

             97. ಅಶುಭ
1.            ಶರೀರವು ಜೀರ್ಣವಾಗುವುದು. ರೋಗಗಳ ಗೂಡು ಉದುರಿ ಹೋಗುವ ನಿಮರ್ಿತಿ, ಹೊಲಸು ತುಂಬಿದ ಮಾಂಸದ ಮುದ್ದೆಯು ಒಡೆದು ಹೋಗುತ್ತದೆ. ಮರಣದಲ್ಲಿ ಇದು ಅಂತ್ಯ ಪಡೆಯುತ್ತದೆ.           485

2.            ಪಾರಿವಾಳದ ಬಣ್ಣದ ಮೂಳೆಗಳು, ಶರತ್ಕಾಲದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಒಣಗಿದ ಸೋರೆ ಬುರುಡೆಗಳಂತಿದೆ. ಹಾಗೆ ಅವುಗಳನ್ನು ಕಂಡೂ ಹೇಗೆ ಯಾರಾದರೂ ಅವುಗಳಲ್ಲಿ ಆನಂದಪಡೆಯಬಹುದು.    486

3.            ಎಂದು ಆತನು ಸತ್ತು ಹೋಗುವನೋ ಆಗ ಕಟ್ಟಿಗೆಯಂತೆ ಬಿದ್ದಿರುತ್ತಾನೆ. ಕಂದುಬಣ್ಣಕ್ಕೆ ಶರೀರ ತಿರುಗುತ್ತದೆ, ಸ್ಮಶಾಣದಲ್ಲಿ ಆತನನ್ನು ಎಸೆಯುತ್ತಾರೆ. ಹಾಗು ಸೋದರ ಬಂಧುಗಳಿಂದ ಅಪೇಕ್ಷಾರಹಿತನಾಗುತ್ತಾನೆ.               487

4.            ಆತನನ್ನು ನಾಯಿಗಳು, ನರಿಗಳು, ಗೆದ್ದಲು, ಕೀಟಗಳು, ಕಾಗೆಗಳು, ಹದ್ದುಗಳು ಮತ್ತು ಅನ್ಯ ಪ್ರಾಣಿಗಳು
ತಿನ್ನುತ್ತವೆ.               488

5.            ಶರೀರ ಹೇಗಿದೆಯೋ ಆತನೂ ಹಾಗೆಯೇ. ಇದು ಹೇಗಿದೆಯೋ ಹಾಗೆಯೇ ಆತನು ಸಹ. ಆದ್ದರಿಂದ ತನ್ನ ಅಥವಾ ಪರರ ಬಗ್ಗೆ ರಾಗವನ್ನು ತ್ಯಜಿಸಲಿ.                489


6.            ದೇಹವು ನೊರೆಯ ರಾಶಿಯಂತೆ, ವೇದನೆಯು ನೀರ್ಗುಳ್ಳೆಯಂತೆ, ಗ್ರಹಿಕೆಯು ಮರಿಚಿಕೆಯಂತೆ, ಸಂಖಾರವು ಬಾಳೆಗಿಡದಂತೆ. ಅರಿವನ್ನು ಭ್ರಮೆಯಂತೆ ಧ್ಯಾನಿಗಳು ಯತಾಭೂತವಾಗಿ ಅರಿಯುತ್ತಾರೆ.               490

QUOTES ON DEPENDENT ARISING ಅವಲಂಬನೆಯಿಂದ ಉದಯ

     96. ಅವಲಂಬನೆಯಿಂದ ಉದಯ


1.            ಯಾರು ಕಾರ್ಯಕಾರಣ ಸಂಬಂಧಿ ಉದಯವನ್ನು ಅರಿಯು ತ್ತಾರೋ ಅವರು ಧಮ್ಮವನ್ನು ಅರಿಯುತ್ತಾರೆ ಮತ್ತು ಯಾರು ಧಮ್ಮವನ್ನು ಅರಿಯುತ್ತಾರೊ ಅವರು ಕಾರಣಕಾರ್ಯ ಪರಿಣಾಮ ಗಳ ಆಗುಹೋಗುವಿಕೆಗಳನ್ನೆಲ್ಲಾ ಅರಿತಿರುತ್ತಾರೆ.                481

2.            ಯೋಚನೆಗಳು ಪದಗಳಿಂದ ವ್ಯಕ್ತಪಡಿಸುತ್ತವೆ. ಪದಗಳು ಕ್ರಿಯೆಯನ್ನು ವ್ಯಕ್ತಪಡಿಸುತ್ತವೆ. ಕ್ರಿಯೆಯು ಅಭ್ಯಾಸವಾಗುತ್ತಾ ಹೋಗುತ್ತದೆ. ಅಭ್ಯಾಸವು ವ್ಯಕ್ತಿತ್ವವನ್ನು ನಿಮರ್ಾಣ ಮಾಡುತ್ತದೆ. ಆದ್ದರಿಂದ ನಿಮ್ಮ ಯೋಚನೆಗಳನ್ನು ಗಮನಿಸಿ, ಅವುಗಳ ಹಾದಿಯನ್ನು ಜಾಗರೂಕತೆಯಿಂದ ವೀಕ್ಷಿಸಿ. ಹಾಗು ಸರ್ವಜೀವಿಗಳ ಹಿತಕ್ಕಾಗಿ ಮೈತ್ರಿಯು ಪ್ರಸರಿಸಲಿ.                482

3.            ಪ್ರತಿಯೊಂದು ಉದಯಿಸುವುದು ಹಾಗು ಮರೆಯಾಗುವುದು ಕಾರಣ ಮತ್ತು ಪರಿಸ್ಥಿತಿಗಳಿಂದಾಗಿಯೇ ಆಗಿದೆ. ಯಾವುದೊಂದು ಪೂರ್ಣವಾಗಿ ಏಕೈಕವಾಗಿಯೇ ಅಸ್ತಿತ್ವದಲ್ಲಿ ಸದಾ ಇರಲಾರದು. ಪ್ರತಿಯೊಂದು ಉಳಿದ ಪ್ರತಿಯೊಂದರಲ್ಲಿ ಸಂಬಂಧವನ್ನು ಇರಿಸಿವೆ.        483


4.            ಶರೀರ ತನ್ನಿಂದ ತಾನೇ ಆಗಿಲ್ಲ. ಇತರರಿಂದ ದುಃಖ ರೂಪಿತಗೊಂಡಿಲ್ಲ. ಕಾರಣದಿಂದ ಇದು ಆಗಿದೆ. ಕಾರಣವನ್ನು ಮುರಿದರೆ ಇದಿಲ್ಲವಾಗುತ್ತದೆ.                484

QUOTES ON GOD(CREATOR) ದೇವರು

         95. ದೇವರು


1.            ಯಾರಿಗೆ ಕಣ್ಣಿದೆಯೋ ಆತ ರೋಗಭರಿತ ದೃಶ್ಯಗಳನ್ನು ಕಾಣುತ್ತಾನೆ. ಏಕೆ ಸೃಷ್ಟಿಕರ್ತ ತನ್ನ ಜೀವಿಗಳನ್ನು ಸರಿಯಾಗಿ ಇಟ್ಟಿಲ್ಲ? ಆತನ ಶಕ್ತಿ ಮಿತಿಯಿಲ್ಲದ ಸರ್ವಶಕ್ತಭರಿತವಾಗಿದ್ದೂ ಏಕೆ ಆತನ ಹಸ್ತವು ಹಾರೈಸಲು ಅಪರೂಪವಾಗಿ ಬರುತ್ತದೆ? ಏಕೆ ಆತನು ಸರ್ವರಿಗೂ ಸುಖ ನೀಡಲಾರ? ಏತಕ್ಕಾಗಿ ವಂಚಕರು, ಸುಳ್ಳು ಹೇಳುವವರು ಮತ್ತು ಮೂರ್ಖರು ಉನ್ನತಿಗೇರುತ್ತಾರೆ? ಏಕೆ ಮಿಥ್ಯವೇ ಸದಾ ಜಯಶಾಲಿ ಯಾಗುತ್ತದೆ? ಸತ್ಯ ಮತ್ತು ನ್ಯಾಯ ಏಕೆ ಸೋಲುತ್ತದೆ. ನಾನು ನಿಮ್ಮ ಸೃಷ್ಟಿಕರ್ತನನ್ನು ನ್ಯಾಯರಹಿತರಲ್ಲಿ ಒಬ್ಬರೆಂದು ತೀಮರ್ಾನಿಸುತ್ತೇನೆ. ಏಕೆಂದರೆ ಜಗತ್ತಿನ ತಪ್ಪು ಛಾವಣಿಯ  ನಿಮರ್ಾತರಾಗಿದ್ದಾರೆ.      478

2.            ಒಂದುವೇಳೆ ಸರ್ವಶಕ್ತನಾದ ದೇವರು ಇದ್ದದ್ದೇ ಆದರೆ ಪ್ರತಿ ಜೀವಿಯ ಸುಖಕ್ಕೆ ಅಥವಾ ಶೋಕಕ್ಕೆ ಮತ್ತು ಪುಣ್ಯಕ್ಕೆ ಅಥವಾ ಪಾಪಕ್ಕೆ (ಸೃಷ್ಟಿಕರ್ತನೇ ಮೂಲ ಕಾರಣಕರ್ತನಾಗಿ) ದೇವರೇ ಪಾಪದ ಕಲೆಯುಳ್ಳವನಾಗುತ್ತಾನೆ. ಮಾನವ ಕೇವಲ ಆತನ ಇಚ್ಛೆಯಂತೆ ವತರ್ಿಸುತ್ತಿದ್ದಾನೆ ಅಷ್ಟೇ.               479


3.            ಮಿಥ್ಯಾದೃಷ್ಟಿಗಳು 3 ವಿಧದ್ದಾಗಿದೆ : ಎಲ್ಲವೂ ನಮ್ಮ ಹಿಂದಿನ ಜನ್ಮದ ಪರಿಣಾಮ ಎಂದು ಭಾವಿಸುವುದು. ಪ್ರತಿಯೊಂದು ದೇವರ ಅಥವಾ ವಿಧಿಯ ಕೈವಾಡ ಎಂದು ಭಾವಿಸುವುದು ಮತ್ತು ಪ್ರತಿಯೊಂದಕ್ಕೂ ಕಾರಣವೇ ಇಲ್ಲ ಎಂದು ಭಾವಿಸುವುದು. 480

QUOTES ON SOLITUDE ಏಕಾಂತಜೀವನ

                 94. ಏಕಾಂತಜೀವನ


1.            ಒಂಟಿಯಾಗಿ ವಾಸಿಸಿ, ಏಕಾಂತದಲ್ಲಿ ಆನಂದಿಸಿ, ಅಂತರಂಗ ದಲ್ಲಿ ಶಾಂತಿಯಿರಲಿ, ಚಿತ್ತವು ಸಮತೆಯಿಂದಿರಲಿ, ಧ್ಯಾನದ ಬಗ್ಗೆ ಅಲಕ್ಷ್ಯ ಮಾಡಬೇಡಿ.                474

2.            ಏಕಾಕಿಯಾಗಿ ಓಡಾಡುವ ಏಕಾಕಿಯಾಗಿ ಮಲಗುವ, ತನ್ನನ್ನು ತಾನೇ ಧಮಿಸಿಕೊಳ್ಳುವ, ಏಕಾಕಿಯು ವನವಾಸದಿಂದ ಆನಂದಗೊಳ್ಳುತ್ತಾನೆ.  475

3.            ಧಮ್ಮವನ್ನು ಕೇಳಿ ಅದರ ಅರ್ಥವನ್ನು ತಿಳಿದು ಆನಂದ ಪಡೆದ ಏಕಾಂಗಿಯು ಸುಖವಾಗಿರುತ್ತಾನೆ. ಪ್ರಾಣಿಗಳ ಬಗೆಗೆ ಸಂಯಮದಿಂದಿದ್ದು, ವೈರರಹಿತನಾಗಿ, ರಾಗರಹಿತನಾಗಿ ಯಾರು ತಾನು ತನ್ನದು ಎಂಬ ಭಾವನೆಯನ್ನು ತೊರೆದಿರುವನೋ ಅವನೇ ಪರಮ ಸುಖಿಯಾಗುತ್ತಾನೆ.   476

4.            ಬುದ್ಧ ಭಗವಾನರ ಸತ್ಯವನ್ನು ಆಲಿಸು. ಗುಂಪಿನಲ್ಲಿರುವವನಿಗೆ ಪೂರ್ಣ ವಿಮುಕ್ತಿ ಅಸಂಭವ, ಅದನ್ನು ಅರಿತು ಖಡ್ಗ ಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.              477