Monday, 19 September 2016

quotes on the right resolution in kannada (ಯೋಗ್ಯವಾದ ಸಂಕಲ್ಪ)

9.
ಯೋಗ್ಯವಾದ ಸಂಕಲ್ಪ


1.  ಎಲ್ಲಾ ಬಗೆಯ ಬೋಗಾಭಿಲಾಶೆಗಳಿಂದ ದೂರವಾಗಬೇಕೆಂಬ ಸಂಕಲ್ಪ, ಎಲ್ಲಾ ಬಗೆಯ ದ್ವೇಷಗಳಿಂದ ದೂರವಾಗಬೇಕೆಂಬ ಸಂಕಲ್ಪ,
ಎಲ್ಲಾ ಬಗೆಯ ಹಿಂಸೆಗಳಿಂದ ದೂರವಾಗಬೇಕೆಂಬ ಸಂಕಲ್ಪ
ಇವನ್ನೇ ಸಮ್ಮ ಸಂಕಲ್ಪ ಎನ್ನುತ್ತಾರೆ.        43
2.          ನಾನು ಪದ್ಮಾಸನ ಸ್ಥಿತಿಯಲ್ಲೆ ಅಸವಗಳಿಂದ ಮುಕ್ತಚಿತ್ತ ಪ್ರಾಪ್ತಿಯ ವಿನಃ ಆಸನ ಭಂಗಿಸಿ ಮೇಲೇಳುವುದಿಲ್ಲ ಎಂದು ಸಂಕಲ್ಪ ಮಾಡುವವನು ಶೋಭಾಯಮಾನನಾಗುವನು.   44
3.          ನಾನು ದಾನಿಯಾಗಲಿ ಮತ್ತು ಸಹಾಯ ಮಾಡುವವನಾಗಲಿ, ನಾನು ಶೀಲವಂತನಾಗಲಿ, ಶುದ್ಧನಾಗಲಿ ಮತ್ತು ಪ್ರಾಮಾಣಿಕನಾಗಲಿ, ನಾನು ಸ್ವಾಥರ್ಿಯಾಗದಿರಲಿ, ಬದಲಾಗಿ ನಿಸ್ವಾರ್ಥ ಹಾಗು ತ್ಯಾಗಿಯಾಗಿರಲಿ.       454.         ನಾನು ಜ್ಞಾನಿಯಾಗಲಿ ಮತ್ತು ನನ್ನ ಜ್ಞಾನದ ಫಲವನ್ನು ಪರರಲ್ಲಿ ಹಂಚುವಂತಾಗಲಿ, ನಾನು ಪ್ರಯತ್ನಶಾಲಿಯಾಗಲಿ, ಶಕ್ತಿಶಾಲಿ ಯಾಗಲಿ, ನಿರಂತರ ಪರಿಶ್ರಮಿಯಾಗಿರಲಿ, ನಾನು ಸಹನೆಯುಳ್ಳವ ನಾಗಲಿ, ನಾನು ಪರರ ತಪ್ಪುಗಳನ್ನು ಸಹಿಸಿ ಕ್ಷಮಿಸುವಂತಾಗಲಿ, ನಾನು ನೀಡಿದ ವಚನವನ್ನು ಎಂದೆಂದಿಗೂ ನೆರವೇರಿಸು ವಂತಾಗಲಿ.         465.          ನಾನು ಧೃಢನಾಗಲಿ ಮತ್ತು ಸ್ಥಿರ ನಿಧರ್ಾರದವನಾಗಲಿ, ನಾನು ದಯಾವಂತನಾಗಲಿ, ಕರುಣೆಯಿಂದ ಇರಲಿ ಮತ್ತು ಮಿತ್ರತ್ವದಿಂದ ಇರುವಂತಾಗಲಿ, ನಾನು ನಮ್ರನಾಗಿರಲಿ, ಶಾಂತನಾಗಿರಲಿ, ಅಭಯಶಾಲಿಯು, ಶೋಕರಹಿತನು ಆಗುವಂತಾಗಲಿ.      476.          ನಾನು ಪರಿಪೂರ್ಣತೆಗೆ ಸೇವೆ ಮಾಡುವಂತಾಗಲಿ ಹಾಗು ಸೇವೆಗಾಗಿ ಪರಿಪೂರ್ಣತೆ ಹೊಂದಲಿ.      48


No comments:

Post a Comment