Thursday 3 March 2016

quotes on Dhamma in kannada

2. ಧಮ್ಮ


1.            ಸರ್ವ ಪಾಪವನ್ನು ಮಾಡದಿರುವುದು, ಕುಶಲವನ್ನು (ಒಳ್ಳೆಯತನವನ್ನು) ಸಂಪಾದಿಸುವುದು, ಸ್ವಚಿತ್ತವನ್ನು ಪರಿಶುದ್ಧಿ ಗೊಳಿಸುವುದು - ಇದೇ ಬುದ್ಧರ ಶಾಸನವಾಗಿದೆ.       7
2.            ಕೆಟ್ಟದ್ದನ್ನು ಆಡದಿರುವುದು, ನೋಯಿಸದಿರುವುದು, ಪಾತಿಮೋಕ್ಖ (ಭಿಕ್ಖುನಿಯಮ) ಅನುಸಾರವಾಗಿ ಸಂಯಮದಿಂದಿರುವುದು, ಆಹಾರದಲ್ಲಿ ಮಿತವಾಗಿರುವುದು, ಒಂಟಿಯಾಗಿ ವಾಸಿಸುವುದು, ಮನವನ್ನು ಯಾವಾಗಲೂ ಧ್ಯಾನ ಉನ್ನತಿಯಲ್ಲಿ ನೆಲೆ ಮಾಡುವುದು - ಇದೇ ಬುದ್ಧರ ಶಾಸನವಾಗಿದೆ.      8
3.            ಕಾರಣದಿಂದಾಗುವ ಎಲ್ಲಾ ವಿಷಯಗಳನ್ನು (ಧಮ್ಮವನ್ನು), ಅವುಗಳ ಸ್ಪಷ್ಟ ಕಾರಣಗಳನ್ನು ಮಹಾಸಮಣರು ತಿಳಿಸಿದ್ದಾರೆ ಮತ್ತು ತಥಾಗತರು ಅವುಗಳ ನಿರೋಧವನ್ನು ಹಾಗು ಅದರ ಮಾರ್ಗವನ್ನು ಸಹಾ ತಿಳಿಸಿದ್ದಾರೆ.    9
4.            ಧಮ್ಮದಾನವು ಎಲ್ಲಾ ದಾನಗಳಿಗಿಂತ ಶ್ರೇಷ್ಠ, ಧಮ್ಮರಸವು ಉಳಿದ ರಸಗಳಿಗಿಂತ ಶ್ರೇಷ್ಠ, ಧಮ್ಮಾನಂದವು ಉಳಿದ ಆನಂದಗಳಿಗಿಂತ ಶ್ರೇಷ್ಠ. ಯಾರು ತೃಷ್ಣೆಯನ್ನು ನಾಶಪಡಿಸಿಕೊಂಡಿರುವರೋ ಅವರು ದುಃಖವೆಲ್ಲದರಿಂದ ಮುಕ್ತರಾಗಿದ್ದಾರೆ.   10

5.            ಈ ಧಮ್ಮವು ಬಂದು ಸಾಧಿಸುವವರಿಗೆ ಹೊರತು ಬಂದು ನಂಬುವವರಿಗಲ್ಲ. ಇದು ರಾಗ ದ್ವೇಷ ಮತ್ತು ಮೋಹದಿಂದ ಪೀಡಿತರಾಗಿರುವವರಿಗೆ ಅರಿಯಲಾಗುವುದಿಲ್ಲ. 11

No comments:

Post a Comment