Monday 20 March 2017

quotes on emancipation ವಿಮುಕ್ತಿ

                                      35. ವಿಮುಕ್ತಿ


1.            ಯಾರು ಏಕಾಂತತೆಯ ಮಧುರತೆಯನ್ನು ಮತ್ತು ಪ್ರಶಾಂತತೆಯ ಗಂಭೀರತೆಯನ್ನು ಸವಿದಿರುವನೋ ಆತನು ಭಯದಿಂದ ಮತ್ತು ಪಾಪದಿಂದ ಮುಕ್ತನಾಗುತ್ತಾನೆ.               183

2.            ಹಳೆಯದೆಲ್ಲಾ ಕ್ಷೀಣವಾಯಿತು (ಹಳೆಯ ಪ್ರವೃತ್ತಿಗಳು), ಹೊಸದು ಎಂದಿಗೂ ಉದಯವಾಗುವುದಿಲ್ಲ. ರೀತಿಯಾಗಿ ಅವರ ಚಿತ್ತವೂ ಜನ್ಮದಿಂದ ವಿಮುಕ್ತಿ ಪಡೆಯುವುದು.       184

3.            ಸಮಸ್ಯೆಗಳು ಎಲ್ಲಿ ಉದಯಿಸುತ್ತದೆಯೋ, ಅಲ್ಲಿಯೇ ಪರಿಹರಿಸಬೇಕು. ನಂತರ ಅಲ್ಲಿಂದ ಮುಂದೆ ಹೋಗ
ಬೇಕು.     185

4.            ಶ್ರೇಷ್ಠ ಜೀವನವು ಲಾಭ, ಗೌರವ, ಕೀತರ್ಿಗಳಿಗಾಗಿ ಅಲ್ಲ, ಶೀಲ ಸಂಪನ್ನತೆಯ ಹಿತಾನುಕೂಲಕ್ಕಾಗಿ ಅಲ್ಲ, ಸಮಾಧಿಯ ಲಾಭಕ್ಕಾಗಿ ಅಲ್ಲ. ಜ್ಞಾನ ದರ್ಶನದ ಹಿತಾನುಕೂಲಕ್ಕಾಗಿ ಅಲ್ಲ. ಭಿಕ್ಷುಗಳೇ ಅಚಲವಾದ ಚಿತ್ತ ವಿಮುಕ್ತಿಯೇ ಇದರ ಗುರಿ. ಇದೇ ಮರದ ಸಾರದ ದಿಂಡು, ಸಾಧನೆಯ ಉತ್ತುಂಗ.               186


5.            ಯಾವ ಸ್ಥಿತಿಗೂ ಹೊಂದಿಕೊಂಡಿರುವುದು ಸರಿ ಎನಿಸುವುದಿಲ್ಲ ಎಂದು ಅರಿವಾಗಿ ಎಲ್ಲಾ ಸ್ಥಿತಿಗಳಲ್ಲಿಯೂ ಅನಿತ್ಯ ಗ್ರಹಿಸುತ್ತಾ, ದುಃಖ ಗಮನಿಸುತ್ತಾ ಅನಾತ್ಮ ಗ್ರಹಿಸುತ್ತಾ, ನಿರೋಧಿಸುವಿಕೆ ಕಂಡುಕೊಳ್ಳುತ್ತಾ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಯಾವುದಕ್ಕೂ ಅಂಟಿಕೊಳ್ಳದೆ ತನಗೆ ತಾನೆ ನಿಬ್ಬಾಣವನ್ನು ಒಂಟಿಯಾಗಿ ಸಾಧಿಸುತ್ತಾನೆ. 187

No comments:

Post a Comment