Monday 13 March 2017

quotes on giving ದಾನ

                                 27. ದಾನ

1.            ಧಮ್ಮ ದಾನವು ಸರ್ವದಾನಗಳಿಗಿಂತ ಶ್ರೇಷ್ಠ.         139

2.            ಮೂರು ಬಗೆಯ ದಾನಗಳಿವೆ : ಲೌಕಿಕ ವಸ್ತುಗಳ ದಾನ, ಅಭಯ ದಾನ ಮತ್ತು ಧಮ್ಮ ದಾನ. 140

3.            ಕಳೆ ಹೊಲಕ್ಕೆ ಮುಳುವು, ರಾಗವು ಮಾನವ ಕುಲಕ್ಕೆ ಮುಳುವು. ಆದ್ದರಿಂದ ರಾಗರಹಿತರಿಗೆ ನೀಡಿದ್ದು ಮಹತ್ಫಲವನ್ನು
ನೀಡುತ್ತದೆ.              141

4.            ದಾನ ನೀಡುವಾಗ ಫಲಾಪೇಕ್ಷೆ ಇಟ್ಟು ದಾನ ಮಾಡುತ್ತಾರೆ. ಆದರೆ ಯಾರು ಫಲಾಪೇಕ್ಷೆರಹಿತರಾಗಿ ದಾನ ನೀಡುವರೋ ಅವರ ಪುಣ್ಯವನ್ನು ಅಳೆಯಲಾಗುವುದಿಲ್ಲ.             142

5.            ದಾನದಿಂದ ಮಿತ್ರರನ್ನೆಲ್ಲಾ ಸೇರಿಸಿ ಇಡಬಹುದು.    143

6.            ದಾನವನ್ನು ಮಾಡು ಮತ್ತು ದಾನ ನೀಡುವ ಸಮಯದಲ್ಲಿ ಸರ್ವರ ಬಗ್ಗೆ ಮನಸ್ಸನ್ನು ಪ್ರಸನ್ನವಾಗಿಡು, ದಾನವೇ ದಾಯಕನ ಅವಲಂಬನೆಯಾಗಿದೆ.            144


7.            ದಾನವನ್ನು ಪಡೆದವನು ಅದನ್ನು ಮರೆಯಬಾರದು, ದಾನವನ್ನು ನೀಡಿದವನು ಅದನ್ನು ಸ್ಮರಿಸಬಾರದು. 145

No comments:

Post a Comment