Monday 27 March 2017

the quotes on critical thinking

                                  47. ವಿಮಶರ್ೆ


1.            ನಿಮ್ಮ ಕಲ್ಪನೆಗಳನ್ನು ನಂಬಬೇಡಿ, ನಿಮ್ಮ ನಂಬಿಕೆಗಳಿಗೆ ನಿರ್ಣಯಗಳಿಗೆ ಹೊಂದುತ್ತವೆಂದು ಎಂದೂ ಸಹ ಸ್ವೀಕರಿಸದಿರಿ. ಪ್ರಕಟಿತ ಸುದ್ದಿಗಳಿಗೆ ಆಗಲಿ, ಸಂಪ್ರದಾಯಕ್ಕಾಗಲಿ ಅಥವಾ ಕೇಳಿದುದು ಎಂದಾಗಲಿ ಅಂತಹುದನ್ನೆಲ್ಲಾ ನಂಬಬೇಡಿ. ತಲತಲಾಂತರಗಳಿಂದ ಮೌಖಿಕವಾಗಿ ಬಂದಿದೆಯೆಂದಾಗಲಿ, ಗಾಳಿ ಸುದ್ದಿಗಳಿಗಾಗಲಿ ಅಥವಾ ಸುನಿಶ್ಚಿತ ಪೂಜ್ಯ (ಪವಿತ್ರ) ಗ್ರಂಥಗಳಲ್ಲಿದೆ ಎಂದಾಗಲಿ ನಂಬಬೇಡಿ ಹಾಗು ಸ್ವೀಕರಿಸಬೇಡಿ.

2.            ಇದು ಪ್ರಮಾಣಬದ್ಧ ಅಥವಾ ಸಾಧಾರಪೂರಿತವಾಗಿ ಹೇಳಲಾಗಿದೆ ಎಂದರೂ ನಂಬಬೇಡಿ, ಸ್ವೀಕರಿಸಬೇಡಿ. ವಿವೇಕಿಯು ಜನರು ಆತನ ಬಗ್ಗೆ ಏನಾದರೂ ಯೋಚಿಸಲಿ, ಅದರಿಂದ ಪ್ರಭಾವಿತನಾಗುವುದಿಲ್ಲ.               245

3.            ತರ್ಕಬದ್ಧವಾಗಿದೆ ಎಂದಾಗಲಿ ಅಥವಾ ಊಹೆಗೆ ನಿಲುಕುತ್ತದೆ ಎಂದಾಗಲಿ, ಅಭಿಪ್ರಾಯಕ್ಕೆ ಹೊಂದುತ್ತದೆ ಎಂದಾಗಲಿ ಏನನ್ನೂ ಸ್ವೀಕರಿಸಬೇಡಿ. ಯಾರು ಅಸಾರವಾದುದನ್ನು ಸಾರವೆಂದು ಸಾರವಾದುದರಲ್ಲಿ ಅಸಾರವೆಂದು ಮಿಥ್ಯ ಗ್ರಹಿಕೆಗಳಿಂದ ಕೂಡಿರುವರೋ ಅವರು ಎಂದೂ ಸಾರವನ್ನು ಸಾಧಿಸುವುದಿಲ್ಲ.

4.            ಯಾವಾಗ ನಿಮಗೆ ಕೆಲವು ವಿಷಯಗಳು ಅಕುಶಲವಾದುದು ಮತ್ತು ಕೆಟ್ಟದೆಂದು ಅರಿವಾಗುತ್ತದೋ ಆಗ ಅದನ್ನು ತ್ಯಜಿಸಿ ಮತ್ತು ಯಾವಾಗ ಕೆಲವು ವಿಷಯಗಳು ಕುಶಲವಾದುದು ಮತ್ತು ಹಿತಕಾರಿ ಎಂದು ಅರಿಯುವಿರೋ ಅದನ್ನು ಸ್ವೀಕರಿಸಿ ಮತ್ತು ಅನುಸರಿಸಿರಿ.      247


5.            ಯಾವೆಲ್ಲಾ ವಿಷಯಗಳಿಂದ ಈಗ ಹಾಗು ಮುಂದೆ ದುಃಖ ಅನುಭವಿಸಬೇಕಾಗುವುದೋ ಮತ್ತು ನಾವು ಮತ್ತು ಪರರು ದುಃಖ ಪಡಬೇಕಾಗುವುದೋ ಅದೇ ಅಕುಶಲವಾಗಿದೆ.       248

No comments:

Post a Comment