Monday 27 March 2017

quotes on bonds ಬಂಧನಗಳು

                                 46. ಬಂಧನಗಳು


1.            ಯಾವ ವ್ಯಕ್ತಿಯು ಪಾಪಯುತವಾದ ಯೋಚನೆಗಳಿಂದ ಕೂಡಿರುವರೋ, ಯಾರ ಭಾವೋದ್ರೇಕಗಳು ಬಲಿಯುತ ವಾಗಿವೆಯೋ, ಯಾರು ಸುಖದ ಹೊರತು ಬೇರೇನೂ ಕಾಣಲಾರನೋ ಅಂತಹವನ ತೃಷ್ಣೆಯು ವೇಗವಾಗಿ ಬೆಳೆಯು ತ್ತದೆ. ನಿಜಕ್ಕೂ ಆತನು ಬಂಧನವನ್ನು ಬಲಿಷ್ಠಗೊಳಿಸು
ತ್ತಿದ್ದಾನೆ. 239

2.            ಯಾವುವು ಕಬ್ಬಿಣದಿಂದ, ಮರದಿಂದ ಅಥವಾ ಹಗ್ಗದಿಂದಾದ ಬಂಧನಗಳು ಇವೆಯೋ, ಅಷ್ಟೇನು ಬಲಿಷ್ಠವಲ್ಲ ಎಂದು ಜ್ಞಾನಿಗಳು ಹೇಳುತ್ತಾರೆ. ಆದರೆ ಆಭರಣಗಳಿಗಾಗಿ, ವಸ್ತ್ರಗಳಿಗಾಗಿ, ಮಕ್ಕಳಿಗಾಗಿ ಮತ್ತು ಪತ್ನಿಯರ ಆಸಕ್ತಿಗಳೇ ಅತ್ಯಂತ ಬಲಿಷ್ಠವಾದ ಬಂಧನಗಳೆಂದು ಜ್ಞಾನಿಗಳು ಹೇಳುತ್ತಾರೆ.                240

3.            ಯಾರಲ್ಲಿ ಪ್ರಿಯ ಅಥವಾ ಅಪ್ರಿಯ ಭಾವನೆಗಳಿಲ್ಲವೂ ಆತನಲ್ಲಿ ಬಂಧನಗಳಿಲ್ಲ.       241

4.            ಒಬ್ಬನು ಕೋಪವನ್ನು ಬಿಡಬೇಕು, ಅಹಂಕಾರವನ್ನು ವಜರ್ಿಸಬೇಕು. ಒಬ್ಬನು ಎಲ್ಲಾ ಬಂಧನಗಳಿಂದ ಮುಕ್ತನಾಗಬೇಕು, ಯಾರು ದೇಹ ಮತ್ತು ಮನಸ್ಸಿಗೆ ಅಂಟಿಲ್ಲವೋ ಅವರಿಗೆ ಯಾವ ಕೆಡಕು ಇಲ್ಲ.                 242


5.            ಯಾವರೀತಿ ಮೀನು ಜಾಲವನ್ನು ಬೇಧಿಸಿ ಹೊರಬರುವುದೋ ಅದೇರೀತಿ ಬಂಧನಗಳನ್ನು ನಷ್ಟಮಾಡಿ, ನಿಲ್ಲದ ಅಭಂಗ ಅಗ್ನಿಯಾಗಿ ಸರ್ವ ಬಂಧನಗಳನ್ನು ಸುಟ್ಟು (ಕತ್ತರಿಸಿ) ಖಡ್ಗ ಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.                243

No comments:

Post a Comment