Monday 6 March 2017

quotes on metta

23. ಮೈತ್ರಿಯ ಹಾರೈಕೆ

1.            ಸರ್ವ ಜೀವಿಗಳು ಸುಖಿಯಾಗಿರಲಿ ಹಾಗು ಕ್ಷೇಮವಾಗಿರಲಿ. ಅವುಗಳ ಮನಸ್ಸು ಸುಶಾಂತಿಯಿಂದಿರಲಿ ಎಂದು ಒಬ್ಬನ ಮನಸ್ಸು ಅಸೀಮವಾದ, ಮೈತ್ರಿಯಿಂದ ಇಡೀ ವಿಶ್ವವನ್ನು ಪ್ರಸರಿಸಿ ಆವರಿಸಲಿ. ಮೇಲೆ, ಕೆಳಗೆ, ಸುತ್ತಲೂ ದ್ವೇಷವಿಲ್ಲದೆ (ಅಪ್ರಿಯ ಮನೋಭಾವವಿಲ್ಲದೆ) ಹಾರೈಸಲಿ.             118
2.            ಯಾವೆಲ್ಲಾ ಜೀವಿಗಳು ಕಾಣುವುವೋ ಮತ್ತು ಯಾವೆಲ್ಲಾ ಅದೃಶ್ಯವಾಗಿವೆಯೋ, ಯಾವೆಲ್ಲಾ ಜೀವಿಗಳು ಹತ್ತಿರದಲ್ಲಿ ವಿಹರಿಸುತ್ತಿವೆಯೋ ಮತ್ತು ಯಾವುವು ದೂರ ವಾಸಿಸುತ್ತಿದೆಯೋ ಯಾವುವು ಜನ್ಮ ತಾಳಿದೆಯೋ ಅಥವಾ ಮುಂದೆ ಜನ್ಮ ತಾಳುವುವೋ ಅವೆಲ್ಲಾ ಜೀವಿಗಳು ಸದಾ ಸುಖಿಯಾಗಿರಲಿ.    
3.            ಒಬ್ಬನು ನಿಂತಿರಲಿ, ನಡೆಯುತಿರಲಿ, ಕುಳಿತೇ ಇರಲಿ, ಅಥವಾ ಮಲಗಿರಲಿ ಎಲ್ಲಿಯವರೆಗೆ ಒಬ್ಬನು ಎಚ್ಚರವಾಗಿಹನೋ, ಆಗೆಲ್ಲಾ ಆತನು ಮೈತ್ರಿಭರಿತ ಚಿತ್ತದಿಂದ ತುಂಬಿರುವವನಾಗಲಿ.      120
4.            ಎಲ್ಲಾ ಜೀವಿಗಳೂ, ಎಲ್ಲಾ ಪ್ರಾಣಿಗಳೂ, ಎಲ್ಲಾ ಮಾನವರು, ದ್ವೇಷರಹಿತರಾಗಲಿ, ರೋಗರಹಿತರಾಗಲಿ, ದುಃಖರಹಿತರಾಗಲಿ ಮತ್ತು ಅವರು ತಮ್ಮನ್ನು ತಾವು ರಕ್ಷಿಸಿಕೊಂಡು ಸುಖಿಯಾಗಿರಲಿ.
5.            ದ್ವೇಷವು ದ್ವೇಷದಿಂದ ಎಂದಿಗೂ ನಾಶವಾಗುವುದಿಲ್ಲ. ದ್ವೇಷ (ಮೈತ್ರಿ)ದಿಂದ ಮಾತ್ರ ಶಾಂತವಾಗುತ್ತದೆ. ಇದೇ ಸನಾತನ ಧಮ್ಮ (ನಿಯಮ)ವಾಗಿದೆ. 122
6.            ಪ್ರತಿ ಜೀವಿಯ ಬಗ್ಗೆ ಯಾವುದೇ ಪಕ್ಷಪಾತವಿಲ್ಲದೆ ಮೈತ್ರಿಯನ್ನು ಪ್ರಸರಿಸಿರಿ. ಎಲ್ಲಿಯವರೆಗೆ ನಿಸ್ವಾರ್ಥತೆಯ ಪ್ರೀತಿಯು ಸ್ಥಾಪಿತವಾಗುವುದಿಲ್ಲವೋ ಮಾನವ ಶಾಂತಿಯನ್ನು

ಕಾಣಲಾರ.              123

No comments:

Post a Comment