Monday 6 March 2017

quotes on compassion ಕರುಣೆ

22. ಕರುಣೆ

1.            ಸರ್ವಜೀವಿಗಳು ಹಿಂಸೆಗೆ (ಶಿಕ್ಷೆಗೆ) ಕಂಪಿಸುತ್ತದೆ. ಎಲ್ಲಾ ಜೀವಿಗಳೂ ಮರಣಕ್ಕೆ ಹೆದರುತ್ತದೆ. ಸರ್ವರಿಗೂ ಜೀವವು ಪ್ರಿಯವಾಗಿರುತ್ತದೆ. ಆದ್ದರಿಂದ ತನ್ನಂತೆ ಪರರು ಎಂದು ಭಾವಿಸಿ ಒಬ್ಬನು ಕೊಲ್ಲದಿರಲಿ ಹಾಗು ಕೊಲ್ಲಿಸದಿರಲಿ.        113
2.            ಯಾರು ಯಾರಿಗೂ ವಂಚಿಸದಿರಲಿ, ಪರರಿಗೆ ಕೀಳಾಗಿ ಕಾಣದಿರಲಿಕೋಪದಿಂದಾಗಲಿ, ದ್ವೇಷದಿಂದಾಗಲಿ, ಪರರಿಗೆ ಅಹಿತವನ್ನು (ದುಃಖ) ಬಯಸದಿರಲಿ.         114
3.            ಹೇಗೆ ತಾಯಿಯು ತನ್ನ ಏಕಮಾತ್ರ ಮಗುವನ್ನು ತನ್ನ ಜೀವವನ್ನೇ ಲೆಕ್ಕಿಸದೆ ರಕ್ಷಿಸುವಳೋ ಅದೇ ರೀತಿಯಾದ ಅಸೀಮಾ ಹೃದಯದ ಕರುಣೆಯನ್ನು ಎಲ್ಲಾ ಜೀವಿಗಳ ಬಗೆಗೆ ಹೊಂದಲಿ.   115
4.            ಕ್ಷಮೆಯಿಂದ, ಸಹನೆಯಿಂದ, ಅಹಿಂಸೆಯಿಂದ, ಮೈತ್ರಿಯಿಂದ ಮತ್ತು ಕರುಣೆಯಿಂದ ಒಬ್ಬನು ತನ್ನನ್ನು ರಕ್ಷಿಸುತ್ತಾ ಪರರನ್ನು ರಕ್ಷಿಸುತ್ತಾನೆ.                116
5.            ಬೆಂಕಿಯಾಗಲಿ, ನೀರಾಗಲಿ, ಗಾಳಿಯಾಗಲಿ, ಪುಣ್ಯಕಾರ್ಯಗಳ ಹಾರೈಕೆಯನ್ನು ನಾಶ ಮಾಡಲಾರದು ಮತ್ತು ಹಾರೈಕೆಯು

ಇಡೀ ಜಗತ್ತನ್ನು ಜ್ಞಾನೋದಯ ಮಾಡಲು ಸಹಾಯ ಮಾಡುತ್ತದೆ.          117

No comments:

Post a Comment