Monday 20 March 2017

quotes on ignorance ಅಜ್ಞಾನ

                                     34. ಅಜ್ಞಾನ


1.            ದುಃಖದ ಸ್ವರೂಪವನ್ನು ಅರಿಯದಿರುವಿಕೆ, ದುಃಖದ ಉದಯ ಅರಿಯದಿರುವಿಕೆ, ದುಃಖದ ನಿರೋಧ ಅರಿಯದಿರುವಿಕೆ ಮತ್ತು ದುಃಖದ ನಿರೋಧ ಮಾರ್ಗವನ್ನು ಅರಿಯದಿರುವಿಕೆ. ಇದನ್ನೇ ಅಜ್ಞಾನ ಎನ್ನುತ್ತೇವೆ.              178

2.            ನಾಲ್ಕು ಆರ್ಯ ಸತ್ಯಗಳನ್ನು ನೀವು ಮತ್ತು ನಾನು ಅರಿಯದಿರುವುದರಿಂದಲೇ ನಾವೆಲ್ಲಾ ಸಂಸಾರದಲ್ಲಿ ಅನಂತ ಕಾಲದಿಂದ ಸುತ್ತಾಡಬೇಕಾಯಿತು.            179

3.            ಯಾರು ಬರುವ ಹಾಗು ಹೋಗುವ ಮಾರ್ಗವನ್ನು ಅರಿಯಲಾರನೋ, ಹಾಗು ಎರಡು ಅಂತಗಳನ್ನು ಅರಿಯಲಾಗದೆ ವ್ಯರ್ಥದಿಂದ ವಿಲಾಪ ಮಾಡುತ್ತಿರುವನು.   180

4.            ಅವರು ಚಿತ್ತ ಮತ್ತು ಪ್ರಜ್ಞೆಯ ವಿಮುಕ್ತಿಯಿಂದಲು ಸದಾ ರಹಿತರಾಗಿದ್ದಾರೆ. ಅವರು ದುಃಖದ ಅಂತ್ಯ ಮಾಡಲು ಅಯೋಗ್ಯರಾಗಿದ್ದಾರೆ. ಅವರೇ ಜನ್ಮ ಜರಾದಲ್ಲಿ ಬೀಳುವವರೂ ಆಗಿದ್ದಾರೆ.             181

5.            ಎಲ್ಲಾ ಕಶ್ಮಲಗಳಿಂದ ಅವಿದ್ಯೆಯು ಪರಮ ಕಶ್ಮಲವಾಗಿದೆ.
ಒಂದು ಕಶ್ಮಲವನ್ನು ನಾಶಮಾಡಿ ನಿರ್ಮಲರಾಗಿ

ಭಿಕ್ಷುಗಳೇ.              182

No comments:

Post a Comment