Monday 13 March 2017

quotes on renunciation ತ್ಯಾಗ

                              28. ತ್ಯಾಗ

1.            ಸುಖಗಳಲ್ಲಿ ಇಂದ್ರಿಯಗಳ ಸುಖ ಮತ್ತು ತ್ಯಾಗದ ಸುಖ ಎಂದು ಎರಡು ಬಗೆಯಿದೆ. ಇದರಲ್ಲಿ ತ್ಯಾಗದ ಸುಖವು ಇಂದ್ರಿಯ ಸುಖಕ್ಕಿಂತ ಮಿಗಿಲಾದುದು.        146

2.            ಲೋಕದ ಕಾಮಭೋಗಗಳ ದುಷ್ಪರಿಣಾಮಗಳನ್ನು ಹಾಗು ತ್ಯಾಗದ ಕಲ್ಯಾಣವನ್ನು (ಮಹತ್ತತೆ) ನೋಡಿ ನಾನು ತಪ ಮಾಡಲು ಹೊರಟಿದ್ದೇನೆ. ಇದರಲ್ಲೇ ನನ್ನ ಮನ
ಲೀನವಾಗಿದೆ.          147

3.            ಆತನಿಗೆ ಪುತ್ರರು, ಪಶುಗಳು, ಹೊಲಗಳು, ಅಥವಾ ಧನದ ಆಸಕ್ತಿ ಇಲ್ಲವಾಗಿದೆ ಮತ್ತು ಆತನಿಗೆ ತನ್ನ ಅಥವಾ ಪರರು ಎಂಬ ಬೇದಭಾವವು ಇಲ್ಲವಾಗಿದೆ.            148

4.            ಕಾಮಭೋಗಗಳ ಅಪೇಕ್ಷೆ ಪಡದ ವ್ಯಕ್ತಿಗೆ ಉಪಶಾಂತ ಎಂದು ಹೇಳುತ್ತೇನೆ. ಆತನಿಗೆ ಯಾವ ಸಂಸಾರಿಕ ಬಂಧನವೂ ಇಲ್ಲ. ಆತನು ತೃಷ್ಣೆಯನ್ನು ದಾಟಿ ಹೋಗಿದ್ದಾನೆ.           149


5.            ರಾಗ ಹಾಗು ಜಿಪುಣತನದಿಂದ ರಹಿತನಾದ ಮುನಿಯು ತನ್ನನ್ನು ಶ್ರೇಷ್ಠ, ಸಮಾನ ಅಥವಾ ನಿಮ್ನ ಜನಗಳಿಗೆ ಹೋಲಿಸಿಕೊಳ್ಳುವುದಿಲ್ಲ. ಆತನು ಪುನರ್ಜನ್ಮದಲ್ಲಿ ಬೀಳುವುದಿಲ್ಲ. ಏಕೆಂದರೆ ಆತನು ಜನ್ಮದಿಂದ ಮೀರಿ ಹೋಗಿದ್ದಾನೆ. 150

No comments:

Post a Comment