Monday 20 March 2017

quotes on friendship ಮಿತ್ರತ್ವ

                                  38. ಮಿತ್ರತ್ವ


1.            ಹೃತ್ಫೂರ್ವಕ ಮಿತ್ರತ್ವವು ಪರಮ ಮಧುರವಾಗಿರುತ್ತದೆ.          201

2.            ಒಬ್ಬನಿಗೆ ಯೋಗ್ಯ ಮಿತ್ರ (ತನಗಿಂತ ಶ್ರೇಷ್ಠ ಅಥವಾ ಸಮಾನ) ದೊರಕದಿದ್ದರೆ ಒಂಟಿಯಾಗಿರುವುದು ಉತ್ತಮ. ಆದರೆ ಮೂರ್ಖರ ಸಂಗಡ ಬೇಡವೇ ಬೇಡ.      202

3.            ನಾಲ್ಕು ಬಗೆಯವರನ್ನು ನಿನು ನಿನ್ನ ಮಿತ್ರರೆಂದು ತಿಳಿ :
                1. ಸಹಾಯ ಮಾಡುವವ  2. ಸುಖ ದುಃಖದಲ್ಲಿ ಸಮಭಾಗಿ ಯಾದವ  3. ಬುದ್ಧಿವಾದ ಹೇಳುವವ  4. ಅನುಕಂಪದಿಂದ ಕೂಡಿರುವವನು. 203

4.            ಹೇಗೆ ಹೊಗಳಿಕೆ ಮಿತ್ರನಿಂದ ದುರುಪಯೋಗವಾಗಿ ಹಾನಿಯಾಗುತ್ತದೋ ಹಾಗೆಯೇ ಶತ್ರುವಿನ ನಿಂದೆ ಕೆಲವೊಮ್ಮೆ ಸರಿಯಾಗಿರುತ್ತದೆ.                204

5.            ಪ್ರೀತಿಯು ಹಿಂದಿನ ಜನ್ಮಗಳ ಸಂಬಂಧದಿಂದ ಉದಯಿಸುತ್ತದೆ ಮತ್ತು ವರ್ತಮಾನದ ಅನುಕಂಪದಿಂದ ಚೇತನಗೊಳ್ಳುತ್ತದೆ. ಹೇಗೆಂದರೆ ಕಮಲವು ನೀರು ಮತ್ತು ಕೆಸರಿನಿಂದ ಅರಳುವ ಹಾಗೆ.             205


6.            ಸ್ನೇಹದ ಕಾರಣದಿಂದ ದುಃಖ ಉದಯಿಸುವುದು. ಆದ್ದರಿಂದ ಸ್ನೇಹದ ದುಷ್ಪರಿಣಾಮಗಳನ್ನು ಅರಿತು ಸ್ಮೇಹರಹಿತನಾಗಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.    206

No comments:

Post a Comment