Monday 6 March 2017

quotes on morality ಶೀಲ

20. ಶೀಲ

1.            ಕ್ರೋಧವನ್ನು ಮೈತ್ರಿಯಿಂದ ಜಯಿಸು, ಕೆಟ್ಟದ್ದನ್ನು ಒಳ್ಳೆಯತನದಿಂದ ಜಯಿಸು, ಲೋಭಿಯನ್ನು ದಾನದಿಂದ ಜಯಿಸು ಮತ್ತು ಸುಳ್ಳನ್ನು ಸತ್ಯದಿಂದ ಜಯಿಸು.               103
2.            ಆತನು ತನ್ನ ಮಾರ್ಗಗಳಲ್ಲಿ ಸಹೃದಯವಂತನಾಗಲಿ ಮತ್ತು ಶೀಲದಲ್ಲಿ ಅತ್ಯಂತ ಶುದ್ಧನಾಗಲಿ, ಅನಂತರದಲ್ಲಿ ಸಿಗುವ ಆನಂದ ದಿಂದ ಆತನು ದುಃಖವನ್ನು ಅಂತ್ಯಗೊಳಿಸುತ್ತಾನೆ.         104
3.            ಸಹನೆ, ಕ್ಷಮೆ ಮತ್ತು ಪ್ರಜ್ಞಾ ಇವು ಮಾನವ ಅಭಿವೃದ್ಧಿ ಗೊಳಿಸಬೇಕಾದ ಶ್ರೇಷ್ಠ ಶೀಲಗಳಾಗಿವೆ.              105
4.            ಶೀಲದಲ್ಲಿ ಪರಿಪೂರ್ಣತೆಯನ್ನು ಸಾಧಿಸುವವನು ಎಂದೂ ಕೆಳಗೆ ಬೀಳುವುದಿಲ್ಲ. ಶ್ರೇಷ್ಠವಾದ ಪ್ರಜ್ಞಾವನ್ನು ಹೊಂದಿ ಹುಟ್ಟುಗಳ ನಾಶವನ್ನು ಕಂಡಿರುತ್ತಾನೆ ಮುನಿಯು ಅಂತಿಮ ದೇಹಧಾರಿಯು ಮಾರನನ್ನು ಗೆದ್ದ ಆತನು ಜರೆಯನ್ನು ಗೆದ್ದಿರುತ್ತಾನೆ.       106


No comments:

Post a Comment