Monday 13 March 2017

quotes on effort ಪ್ರಯತ್ನಶೀಲತೆ (ವೀರ್ಯ)

                                   29. ಪ್ರಯತ್ನಶೀಲತೆ (ವೀರ್ಯ)



1.            ಯಾರು ಪರಿಶ್ರಮಿಯೋ, ಜಾಗೃತನೊ, ಶೀಲವಂತನೊ, ವಿವೇಚಿಯೋ, ಸಂಯಮಿಯೋ, ಯೋಗ್ಯ ಜೀವನ ನಡೆಸುವವನೋ ಅಂತಹ ಶ್ರಮಶಾಲಿಯ ಯಶಸ್ಸು ಅಭಿವೃದ್ಧಿಯಾಗುತ್ತದೆ.     151

2.            ಭಿಕ್ಷುಗಳೇ ಅಕುಶಲಗಳ ನಾಶಕ್ಕೆ ಮತ್ತು ಕುಶಲಸ್ಥಿತಿಗಳ ಉದಯಕ್ಕೆ ಸಹಾಯಕವಾಗುವಂತಹ ಏಕೈಕ ಅಂಶವೆಂದರೆ ಪ್ರಯತ್ನಶೀಲತೆ ಆಗಿದೆ.                 152

3.            ನಿಬ್ಬಾಣ ಬಯಸುವಂತಹ ವ್ಯಕ್ತಿ ನಿದ್ರೆ, ಜಡತೆ ಹಾಗು ಆಲಸ್ಯವನ್ನು ಜಯಿಸಲಿ. ಅಜಾಗರೂಕನಾಗದಿರಲಿ, ಅಭಿಮಾನದಲ್ಲಿ ಬೀಳದಿರಲಿ.                153

4.            ನೂರು ವರ್ಷದ ಸೋಮಾರಿತನದ ಮತ್ತು ಜಡತೆಯ ಜೀವನಕ್ಕಿಂತ ಒಂದುದಿನದ ಅಪಾರ ಪರಿಶ್ರಮದ ಉಪಯುಕ್ತ ದಿನ ಉತ್ತಮವಾದುದು.                154


5.            ಕೇವಲ ನಾಲ್ಕು ವಾಕ್ಯಗಳ ಗಾಥೆಯೇ ಇರಲಿ, ಸಾಧಕನು ಅದರಂತೆಯೇ ಜೀವಿಸಿದರೆ (ಧಮ್ಮದಂತೆ) ಆತನಿಗೆ ಆಳವಾಗಿ ವಿದ್ವತ್ ಪಡೆದವನು ಮತ್ತು ಧಮ್ಮವನ್ನು ಯಥಾವತ್ತಾಗಿ ಅರಿತವನು ಎನ್ನುತ್ತೇನೆ.   155

No comments:

Post a Comment