Sunday 23 April 2017

THE QUOTES ON TEACHER ಗುರು

                                   69. ಗುರು


1.            ಗುರುವು ಶಿಷ್ಯನಿಗೆ ಕಲಿಸುವ ಮೊದಲು ಆತನ ಮನಸ್ಸಿನ ಬಗ್ಗೆ ಅರಿಯಬೇಕು. ಬೋಧನೆಯ ಪ್ರಸಂಗಕ್ಕೆ ಅನುಗುಣವಾಗಿಯು ಮತ್ತು ಕೇಳುಗನಿಗೆ ಅನುಗುಣವಾಗಿರಬೇಕು.     351

2.            ಉತ್ತಮ ಗುರುವು ವ್ಯರ್ಥ ವಿಷಯಗಳನ್ನು, ಅಸಂಬದ್ಧ ವಿಷಯಗಳನ್ನು ತಡೆಯಬೇಕು ಹಾಗು ಕರುಣಾಭರಿತ ಮಾತುಗಳನ್ನು ಬಳಸಬೇಕು.                352

3.            ಒಬ್ಬನು ಪರರಿಗೆ ಬೋಧಿಸುವುದನ್ನು ತಾನೇ ಮೊದಲು ಪಾಲಿಸಿರಬೇಕು, ತಾನು ಸರಿಯಾಗಿ ನಿಯಂತ್ರಿತನಾಗಿ, ಪರರಿಗೆ ನಿಯಂತ್ರಿಸಬಹುದು. ನಿಜಕ್ಕೂ ತನ್ನನ್ನು ಹತೋಟಿಯಲ್ಲಿಟ್ಟು ಕೊಳ್ಳುವುದು ಕಷ್ಟಕರ.  353


4.            ಗುರುವು ಶಿಷ್ಯನು ಕಲಿಯಬೇಕಾಗಿರುವುದನ್ನು ಚೆನ್ನಾಗಿ ಕಲಿಸುತ್ತಾನೆ. ಶೀಲ ಬೋಧಿಸುತ್ತಾನೆ. ಪ್ರತಿ ಕಲೆಯಲ್ಲಿ ಕುಶಲಿ ಯಾಗುವಂತೆ ತರಬೇತಿ ನೀಡುತ್ತಾನೆ. ತಾನು ಕಲಿತುದೆಲ್ಲವನ್ನು ಕಲಿಸುತ್ತಾನೆ. ಆತನ ಮಿತ್ರರ ಮುಂದೆ ಹೊಗಳುತ್ತಾನೆ. ಪ್ರತಿಯೊಂದು ಕಡೆಯಿಂದಲೂ ರಕ್ಷಣೆ ಒದಗಿಸುತ್ತಾನೆ ಮತ್ತು ಪಾಪವನ್ನು ತಡೆಯುತ್ತಾನೆ.          354

No comments:

Post a Comment