Tuesday 4 April 2017

quotes on drinking ಕುಡಿತ

                                 51. ಕುಡಿತ


1.            ಕುಡಿತದಿಂದಾಗುವ ಅಪಾಯಗಳೆಂದರೆ : ಐಶ್ವರ್ಯಹಾನಿ, ಜಗಳಗಳ ಹೆಚ್ಚಾಗುವಿಕೆ, ಭೀಕರ ರೋಗಕ್ಕೆ ತುತ್ತಾಗುವಿಕೆ, ಚಾರಿತ್ರ್ಯ ನಾಶ, ನಾಚಿಕೆರಹಿತ ವಸ್ತ್ರಧಾರಣೆ, ಬುದ್ಧಿನಾಶ ಮತ್ತು ಕುಖ್ಯಾತಿ ಪಡೆಯುತ್ತಾನೆ.               262

2.            ಪ್ರಪಂಚವು ಸದಾ ಹತ್ತಿ ಉರಿಯುತ್ತಿರುವಾಗ ನಗು ಏತಕ್ಕೆ? ಆನಂದ ಏತರದು? ಅಂಧಕಾರದಲ್ಲಿ ಕಳೆದು ಹೋಗಿರುವ ನೀನು ಬೆಳಕನ್ನು ಹುಡುಕುವುದಿಲ್ಲವೆ?  263

3.            ಯಾರು ಸದಾ ಕುಡಿತದ ಅಂಗಡಿಗಳಲ್ಲಿ ಸೇರುವರೋ ಮತ್ತು ಅದರಲ್ಲಿ ಆನಂದಿಸುವನೋ, ಅವನು ನೀರಿನಲ್ಲಿ ಬಿದ್ದ ಕಲ್ಲು ಮುಳುಗುವಂತೆ, ಸಾಲಗಾರನಾಗಿ, ತನ್ನ ಕುಟುಂಬಕ್ಕೆ ಕುಖ್ಯಾತಿ ತಂದು ಅವನತಿಯಾಗುವನು.         264

4.            ಆತನಿಗೆ ಸಭೆಗಳಲ್ಲಿ ಗೌರವವಿರುವುದಿಲ್ಲ. ಆತನ ಮಾತಿಗೆ ಮೌಲ್ಯ ಇರುವುದಿಲ್ಲ. ಅನಾವಶ್ಯಕ ಮಾತುಗಳಿಂದ ಆತನ ಸರ್ವ ರಹಸ್ಯ ಬಹಿರಂಗವಾಗುತ್ತದೆ.              265

5.            ಮಾನವನಿಗೆ 5 ಐಶ್ವರ್ಯಗಳಿರುತ್ತದೆ. ಅವೆಂದರೆ : ಆರೋಗ್ಯ, ಧನ, ಮಿತ್ರತ್ವ, ಶೀಲ ಮತ್ತು ಸಮ್ಯಕ್ ದೃಷ್ಟಿ. ಅವೆಲ್ಲವೂ ಕುಡಿತದಿಂದ ಭ್ರಷ್ಟವಾಗಿ, ನಷ್ಟವಾಗಿ ಹೋಗುತ್ತದೆ.       266

6.            ಕುಡಿತದಿಂದ ವ್ಯಕ್ತಿಯಲ್ಲಿ ಶೀಲ ಮರೆಯಾಗುತ್ತದೆ. ಆತನ ಬೇರೆ ಶೀಲಗಳು ಸಡಿಲವಾಗುತ್ತದೆ. ಆತನ ಮನವು ಪಾಪಕೃತ್ಯಗಳಿಗೆ ಸುಲಭವಾಗಿ ಜಾರುತ್ತದೆ.              267
                             

No comments:

Post a Comment