Tuesday 4 April 2017

quotes on achievement ಸಾಧನೆ

                         49. ಸಾಧನೆ


1.            ನಾಲ್ಕು ವಿಧದ ಜನರಿದ್ದಾರೆ : ಒಬ್ಬ ವಿದ್ಯೆಯನ್ನು ಅಲ್ಪವಾಗಿ ಪಡೆಯುತ್ತಾನೆ ಮತ್ತು ಅದರ ಫಲವನ್ನು ಪಡೆಯುವುದಿಲ್ಲ. ಇನ್ನೊಬ್ಬ ವಿದ್ಯೆಯನ್ನು ಅಲ್ಪವಾಗಿ ಪಡೆಯುತ್ತಾನೆ ಆದರೆ ಅದರ ಫಲವನ್ನು ಹೇರಳವಾಗಿ ಪಡೆಯುತ್ತಾನೆ. ಮತ್ತೊಬ್ಬ ಅಪಾರವಾಗಿ ವಿದ್ಯೆ ಪಡೆಯುತ್ತಾನೆ. ಆದರೆ ಅದರ ಫಲ ಮಾತ್ರ ಪಡೆಯುವುದಿಲ್ಲ. ಮಗದೊಬ್ಬ ಅಪಾರ ವಿದ್ಯೆ ಕಲಿತು ಅಪಾರ ಲಾಭವನ್ನು ಗಳಿಸುತ್ತಾನೆ.             253

2.            ರಥಕ್ಕೆ ನಾಲ್ಕು ಚಕ್ರಗಳಿರುವಂತೆ, ದೇವತೆಗಳಿಗೂ, ಮಾನವರಿಗೂ ನಾಲ್ಕು ಆಧಾರಗಳಿವೆ. ಅವುಗಳಿಂದಲೇ ಅವರು ದೀರ್ಘಕಾಲ ಶ್ರೇಷ್ಠತ್ವ ಹಾಗು ಉನ್ನತಿ ಪಡೆಯುತ್ತಾರೆ. ಅವೆಂದರೆ ಯೋಗ್ಯ ಸ್ಥಳದಲ್ಲಿ ವಾಸಿಸುವುದು, ಅರ್ಹರೊಂದಿಗೆ ಬೆರೆಯುವುದು. ಸ್ವ-ವ್ಯಕ್ತಿತ್ವ ವಿಕಾಸಿಸುವುದು ಮತ್ತು ಹಿಂದೆ ಪುಣ್ಯವನ್ನು ಗಳಿಸಿರುವುದು.          254

3.            ನಾಲ್ಕು ವಿಧದ ವ್ಯಕ್ತಿಗಳಿದ್ದಾರೆ : 1. ಒಬ್ಬ ವ್ಯಕ್ತಿ ಬರಿ ಜಂಬ ಕೊಚ್ಚಿಕೊಳ್ಳುತ್ತಾನೆ ಆದರೆ ಸಾಧಿಸುವುದಿಲ್ಲ. 2. ಇಲ್ಲಿ ವ್ಯಕ್ತಿಯು ಜಂಬ ಕೊಚ್ಚಿಕೊಳ್ಳುವುದಿಲ್ಲ ಆದರೆ ಸಾಧಿಸುತ್ತಾನೆ. 3. ಇಲ್ಲಿ ವ್ಯಕ್ತಿ ಜಂಬ ಕೊಚ್ಚಿಕೊಳ್ಳುವುದಿಲ್ಲ ಹಾಗು ಸಾಧಿಸುವುದು ಇಲ್ಲ ಮತ್ತು 4. ಇಲ್ಲಿ ಸಾಧಿಸುವೆ ಎಂದು ಹೇಳಿಕೊಳ್ಳುತ್ತಾನೆ ಹಾಗೆಯೇ ಕಾರ್ಯತಃ ಅದನ್ನು ಸಾಧಿಸಿಯೂ ತೋರಿಸುತ್ತಾನೆ.               255


4.            ಹೇಗೆ ಒಬ್ಬನ ತಲೆಯು ಅಥವಾ ತಲೆ ಮೇಲಿನ ಬಟ್ಟೆಯು ಸುಡುವಾಗ ಅದನ್ನು ಆರಿಸಲು ಹೇಗೆ ಕಾರ್ಯತತ್ಪರರಾಗುತ್ತಾರೋ ಅದೇರೀತಿಯಲ್ಲಿ ಒಬ್ಬನು ಇಚ್ಛಾಶಕ್ತಿಯಿಂದ, ಪ್ರಯತ್ನಶೀಲತೆ ಯಿಂದ, ಜಾಗರೂಕತೆಯಿಂದ, ಇಲ್ಲದಿದ್ದ ಕುಶಲಸ್ಥಿತಿಗಳನ್ನು ಉಂಟುಮಾಡಿ ಅವನ್ನು ವೃದ್ಧಿಗೊಳಿಸುತ್ತಾನೆ ಹಾಗೆಯೇ ಮಾನಸಿಕ ಪ್ರಶಾಂತತೆ ಹಾಗು ಪ್ರಜ್ಞಾವನ್ನು ಪ್ರಾಪ್ತಿ ಮಾಡುತ್ತಾನೆ.

No comments:

Post a Comment