Saturday 15 April 2017

quotes on fear ಭಯ

                                    57. ಭಯ

1.            ಯಾವೆಲ್ಲ ರೀತಿಯ ಭಯವು ಉದಯಿಸುವುದೋ ಅವೆಲ್ಲಾ ಮೂರ್ಖನ ಮನಸ್ಸಿನಲ್ಲಿ ಉಂಟಾಗುತ್ತದೆ, ಜ್ಞಾನಿಯಲ್ಲಿ
ಅಲ್ಲ.        288
2.            ಏಕಾಂತ ಫಲರಸವನ್ನು ಕುಡಿದು, ಶಾಂತಿರಸದ ಸವಿಯನ್ನು ಉಂಡವನು, ಪಾಪವಿಲ್ಲದವನಾಗುತ್ತಾನೆ, ಧಮ್ಮರಸವನ್ನು ಸವಿದವನು ಭಯರಹಿತನಾಗುತ್ತಾನೆ.         289
3.            ನಾಲ್ಕು ರೀತಿಯ ಭಯಗಳಿವೆ. ಅವೆಂದರೆ : ಜನ್ಮ ಭಯ, ರೋಗ ಭಯ, ವೃದ್ಧಾಪ್ಯ ಭಯ ಮತ್ತು ಮರಣದ ಭಯ. 290
4.            ಮತ್ತೇ ನಾಲ್ಕು ರೀತಿಯ ಭಯಗಳಿವೆ ಅವೆಂದರೆ : ಬೆಂಕಿಯ ಭಯ, ನೀರಿನ ಭಯ, ರಾಜರ ಭಯ ಮತ್ತು ಕಳ್ಳರ
ಭಯ.      291
5.            ಮತ್ತೆ ನಾಲ್ಕು ರೀತಿ ಭಯಗಳಿವೆ ಅವೆಂದರೆ : ಸ್ವನಿಂದನ ಭಯ, ಪರನಿಂದನಾ ಭಯ, ಶಿಕ್ಷೆಯ ಭಯ ಮತ್ತು ದುರ್ಗತಿಯ
ಭಯ.      292
6.            ಪ್ರಿಯವಾದುದರಿಂದ ಶೋಕವು ಹುಟ್ಟುತ್ತದೆ. ಪ್ರಿಯವಾದುದರಿಂದ ಭಯವು ಹುಟ್ಟುತ್ತದೆ. ಯಾರು ಪೂರ್ಣವಾಗಿ ಪ್ರಿಯಭಾವನೆಯಿಂದ ಮುಕ್ತರೋ ಅವರಿಗೆ ಶೋಕವಿಲ್ಲ, ಭಯ ಇನ್ನೆಲ್ಲಿ?    293


No comments:

Post a Comment