Sunday 23 April 2017

THE QUOTES ON NOBLE FRIENDSHIP ಸತ್ಪುರುಷರ ಸಂಗ

                                     68. ಸತ್ಪುರುಷರ ಸಂಗ


1.            ಜ್ಞಾನಿಯಾದವನೊಂದಿಗೆ, ಪ್ರಜ್ಞಾವಂತನೊಡನೆ, ಬಹುಶ್ರುತ ನೊಂದಿಗೆ, ಪ್ರಯತ್ನಶಾಲಿಯೊಂದಿಗೆ, ಶ್ರದ್ಧಾವಂತ, ಶೀಲವಂತ ಆರ್ಯನೊಂದಿಗೆ ಒಬ್ಬನು ಮಿತ್ರತ್ವ ಮಾಡಲಿ.         346

2.            ಸಾಧನೆಯ ಮಾರ್ಗದಲ್ಲಿ ಹೋಗುತ್ತಿರುವವನಿಗೆ ಮಂಗಳಕರ ವಾದ ಮಾರ್ಗವನ್ನು ತೋರಿಸಬಲ್ಲ ಉತ್ತಮವಾದ ಅಥವಾ ಅವನಿಗೆ ಸಮನಾದ ಮಿತ್ರನು ದೊರಕದಿದ್ದರೆ ಅವನೊಬ್ಬನೆ ಕಷ್ಟಪಟ್ಟು ಮಾರ್ಗದಲ್ಲಿ ಹೋಗಲಿ, ಆದರೆ ಮೂರ್ಖರ ಸಹವಾಸ ಬೇಡ. 347

3.            ಅಡಗಿರುವ ನಿಧಿಯನ್ನು ತೋರಿಸುವಂತೆ, ಯಾರಾದರೂ ಒಬ್ಬ ವಿವೇಕಿಯು ತಪ್ಪುಗಳನ್ನು ತೋರಿಸಿದರೆ ಅಂಥ ಜಾಣನ ಸಂಗವನ್ನು ಮಾಡಬೇಕು. ಅಂಥವ ಸಹವಾಸವು ಶ್ರೇಯಸ್ಸನ್ನುಂಟು ಮಾಡುತ್ತದೆ. ಅದು ಕೆಟ್ಟದ್ದನ್ನು ಮಾಡುವು
ದಿಲ್ಲ.        348

4.            ತರಗ ಪುಷ್ಪವನ್ನು ಎಲೆಯಲ್ಲಿ ಕಟ್ಟಿದಾಗ ಎಲೆಯೂ ಸುವಾಸನೆಯನ್ನು ಪಡೆಯುತ್ತದೆ. ಅದರಂತೆ ಜ್ಞಾನಿಗಳನ್ನು ಸೇವಿಸುವ ಮನುಷ್ಯನು ಜ್ಞಾನಿಯಾಗುತ್ತಾನೆ.                349

5.            ಆದುದರಿಂದ ನಕ್ಷತ್ರಗಳ ಜೊತೆಗಿರುವ ಚಂದ್ರನಂತೆ ಶ್ರದ್ಧಾವಂತರ, ಪ್ರಜ್ಞಾವಂತರ, ತುಂಬ ತಿಳಿದವರ, ಶೀಲವಂತರ, ಕರ್ತವ್ಯಶೀಲರ, ಶ್ರೇಷ್ಠರ, ಸತ್ಪುರುಷರ, ಜ್ಞಾನಿಗಳ ಜೊತೆಗೆ
ಇರು.       350


No comments:

Post a Comment