Tuesday 4 April 2017

quotes on angry ಕೋಪ

                         56. ಕೋಪ


1.            ಕೋಪವುಳ್ಳವ ಎಂತಹ ಕುರೂಪಿ! ಆತನು ಸುಖಿಯಾಗಿ ಮಲಗಲಾರ, ಅಪಾರ ಐಶ್ವರ್ಯವಂತನಾಗಿದ್ದರೂ ಸಹಾ ಆತ ಸದಾ ಬಡವನೇ, ಕೋಪದಿಂದ ತುಂಬಿದವನಾಗಿ ಆತನು ತನ್ನ ಕ್ರಿಯೆ ಮತ್ತು ಮಾತುಗಳಿಂದ ಹಿಂಸಿಸಿಕೊಳ್ಳುತ್ತಿರುತ್ತಾನೆ.  284

2.            ನಿನ್ನ ಕೋಪವನ್ನು ಕೊಲ್ಲು ಮತ್ತು ಸುಖಿಯಾಗಿರು. ನಿನ್ನ ಕೋಪವನ್ನು ಕೊಲ್ಲು ಮತ್ತು ನೀನು ದುಃಖಿಸಲಾರೆ. ಕೋಪವನ್ನು ಎಲ್ಲಾ ರೀತಿಯಲ್ಲಿ ಕೊಂದು ಅದರ ವಿಷಭರಿತ ಬೇರುಗಳನ್ನು ಮತ್ತು ಸಿಹಿ ಮುಳ್ಳುಗಳನ್ನು ಕಿತ್ತು ಎಸೆ, ಕಡಿದುಹಾಕು. ಅಂತಹುದಕ್ಕೆ ಉದಾತ್ತರು ಪ್ರಶಂಸಿಸುತ್ತಾರೆ. ಕೋಪವನ್ನು ಕೊಂದವನು ಮುಂದೆ ಅಳಲಾರ.        285

3.            ಕೋಪಗೊಂಡ ಮನುಷ್ಯನು ಶತೃವಿಗೆ ರೀತಿ ಕೆಡಕನ್ನು ಇಚ್ಛಿಸುತ್ತಾನೆ. ಆತ ಕುರೂಪನಾಗಲಿ, ದುಃಖಿತನಾಗಲಿ, ಉನ್ನತಿ ತಾಳದಿರಲಿ, ಬಡವನಾಗಲಿ, ಕೀತರ್ಿ ಇಲ್ಲದಿರಲಿ, ಮಿತ್ರರು ಇಲ್ಲದಿರಲಿ, ದುರ್ಗತಿಗೆ ಹೋಗಲಿ. ಆದರೆ ರೀತಿಯ ಇಚ್ಛೆಯ ಪರಿಣಾಮದಿಂದ ಆತನೇ ಮುಂದೆ ಕುರೂಪಿಯಾಗುತ್ತಾನೆ, ದುಃಖಿತನಾಗುತ್ತಾನೆ, ಅವನತಿ ತಾಳುತ್ತಾನೆ, ಬಡವನಾಗುತ್ತಾನೆ. ಕೀತರ್ಿರಹಿತನಾಗುತ್ತಾನೆ, ಮಿತ್ರರನ್ನು ಕಳೆದುಕೊಳ್ಳುತ್ತಾನೆ ಮತ್ತು ದುರ್ಗತಿಗೆ ಹೋಗುತ್ತಾನೆ.           286

4.            ಹೀಗೆ ನಿಮಗೆ ನೀವು ಶಿಕ್ಷಣ ನೀಡಿಕೊಳ್ಳಿ. ನಾವು ಆಕಾಶದಂತೆ ಶತ್ರುತ್ವಭಾವವಿಲ್ಲದೆ, ಕೋಪ ದ್ವೇಷವಿಲ್ಲದೆ, ಮೈತ್ರಿಯಿಂದ ಇಡೀ ಜಗತ್ತನ್ನು ವಿಶಾಲಾನಂತವಾಗಿ, ಅಳತೆಗೆ ಮೀರಿ ಹಬ್ಬಿಸು

ತ್ತೇವೆ.     28

No comments:

Post a Comment