Tuesday 4 April 2017

quotes on laziness ಸೋಮಾರಿತನ

                            53. ಸೋಮಾರಿತನ


1.            ಯುವಕನಾಗಿ, ಬಲಿಷ್ಠನಾಗಿಯು ಯಾರು ಶ್ರಮಿಸುವುದಿಲ್ಲವೋ ಸೋಮಾರಿಯಾಗಿರುವನೋ, ಯಾರು ತನ್ನ ಗುರಿಯ ಬಗೆಗಿನ ನಿಧರ್ಾರಗಳನ್ನು ಸಡಿಲಗೊಳಿಸಿರುವನೋ ಅಂತಹ ಸೋಮಾರಿಯು ಎಂದಿಗೂ ಜ್ಞಾನದ ಮಾರ್ಗವನ್ನು
ಅರಿಯಲಾರ.          272

2.            ಯಾರಲ್ಲಿ ಹಗಲಿನ ಹೊತ್ತು ನಿದ್ರಿಸುವ ಚಟವಿದೆಯೋ, ಅತಿ ಚಳಿ, ಅತಿ ಬಿಸಿಲು, ತುಂಬಾ ಹೊತ್ತಾಯಿತು ಎಂದು ಸಮಥರ್ಿಸುತ್ತಾ ತನ್ನ ಕಾರ್ಯಗಳನ್ನು ಮುಂದೂಡುತ್ತಾನೋ, ಕೇವಲ ಅವಕಾಶಗಳಿಗೆ ಕಾಯುತ್ತಾನೋ ಮತ್ತು ಕಳೆದುಕೊಳ್ಳುತ್ತಾನೋ ಅಂತಹವ ಗ್ರಹಸ್ಥ ಜೀವನಕ್ಕೆ
ಅರ್ಹನಲ್ಲ.               273

3.            ಸೋಮಾರಿಯು ವಾತಾವರಣದ ನೆಪ ಮಾಡುತ್ತಾ, ಕಾಲದ ನೆಪ ಮಾಡುತ್ತಾ, ಹಸಿವು ನೀರಡಿಕೆಯ ನೆಪ ಮಾಡುತ್ತಾ, ಯಾವ ಕಾರ್ಯ ಮಾಡದೆ ಇರುತ್ತಾನೋ, ಆತನಲ್ಲಿ ಹೊಸ ಧನ ಸೇರದೆ ಹಳೆಯದೆಲ್ಲಾ ಖಾಲಿಯಾಗಿ ದರಿದ್ರನಾಗುತ್ತಾನೆ.               274

4.            ಸೋಮಾರಿಯಾಗಿರುವ ಗ್ರಹಸ್ಥ ಒಳ್ಳೆಯವನಲ್ಲ. ಸಂಯಮ ವಿಲ್ಲದ ಸಾಧು ಒಳ್ಳೆಯವನಲ್ಲ, ಕೋಪಪಡುವ ಜ್ಞಾನಿಯು ಒಳ್ಳೆಯವನಲ್ಲ. 275
                               

No comments:

Post a Comment