Tuesday 4 April 2017

quotes on hindrance ತಡೆಗಳು

                                     50. ತಡೆಗಳು


1.            ಪರಿಶುದ್ಧವಾದ ಸಮಾಧಿಗೆ ಹಾಗು ಉನ್ನತವಾದ ಜ್ಞಾನಕ್ಕೆ ಐದು ತಡೆಗಳಾಗಿವೆ. ಅವೆಂದರೆ ಬೋಗಾಭಿಲಾಶೆ, ದ್ವೇಷ, ಜಡತೆ ಮತ್ತು ಸೋಮಾರಿತನ ಅವಿಶ್ರಾಂತಿ ಮತ್ತು ಚಿಂತೆ ಹಾಗು ಸಂದೇಹ. 257

2.            ಚಿತ್ತದ 5 ತಡೆಗಳನ್ನು ತ್ಯಜಿಸಿ ಚಿತ್ತದ ಸರ್ವ ಸ್ಥಿತಿಗಳಿಂದ ದೂರವಾಗಿ, ಅನಾಸಕ್ತನಾಗಿ, ಸ್ನೇಹವನ್ನು (ಅಂಟುವಿಕೆ) ಬಿಟ್ಟು ಖಡ್ಗಮೃಗದ ರೀತಿ ಏಕಾಂಗಿಯಾರಿ ಸಂಚರಿಸು.    258

3.            ಯಾರು 50 ಜನರನ್ನು ಪ್ರೇಮಿಸುತ್ತಾನೋ ಅತನಿಗೆ 50 ಶೋಕ ಸನ್ನಿವೇಶವಿದೆ. ಯಾರು ಯಾರಿಗೂ ಪ್ರೇಮಿಸುವುದಿಲ್ಲವೋ ಆತನಿಗೆ ಶೋಕವಿಲ್ಲ.            259

4.            ಯಾರ ಮನಸ್ಸು ತಡೆಗಳಿಂದ ಕೂಡಿದೆಯೋ, ಆತನು ಮಾಡಬೇಕಾದುದನ್ನು ಮಾಡಲಾರ, ಮಾಡಬಾರದನ್ನು ಮಾಡುವನು. 260


5.            ಯಾರ ಮನಸ್ಸು ತಡೆಗಳಿಂದ ಮುಕ್ತವಾಗಿದೆಯೋ ಅಂತಹ ಮನಸ್ಸು, ಮಣಿಯುವಂತಹುದು, ಕಾರ್ಯಶೀಲವು, ಪ್ರಕಾಶ ಮಾನವು, ದೃಢವಾದುದು ಮತ್ತು ಆಳ ಏಕಾಗ್ರಶೀಲವಾದುದು ಆಗಿರುತ್ತದೆ.              261

No comments:

Post a Comment