Saturday 15 April 2017

quotes on courage ಧೈರ್ಯ

                                       58. ಧೈರ್ಯ


1.            ದುಃಖದ ಸ್ಪರ್ಶ ಆದಾಗಲು ಸಹಾ ಭಿಕ್ಷು ವಿಲಾಪಿಸದಿರಲಿ, ಭವದ ತೃಷ್ಣೆ ಮಾಡದಿರಲಿ ಮತ್ತು ಭಯಾನಕತೆಯಿಂದ ಕಂಪಿತನಾಗದಿರಲಿ.  294

2.            ಯಾರು ಸಮಾಧಿಯ ಉನ್ನತ ಸ್ಥಿತಿ ಪ್ರಾಪ್ತಿಮಾಡಿರುವನೋ ಆತನು ಧೈರ್ಯವಾಗಿ ನಡೆದಾಡುತ್ತಾನೆ. ಧೈರ್ಯವಾಗಿ ನಿಲ್ಲುತ್ತಾನೆ. ಇದಕ್ಕೆ ಕಾರಣವೇನು? ಏಕೆಂದರೆ ಆತನು ಪಾಪದ ಯೋಚನೆ ಗಳಿಗೆ ಅತೀತನಾಗಿದ್ದಾನೆ. 295

3.            ಭಯ ಮತ್ತು ಮರಣ ಎದುರಾದಾಗ ನನ್ನ ಮನಸ್ಸು ಆಹ್ಲಾದಕರವಾಯಿತು. ಉತ್ಸಾಹಿತ ಸ್ಥಿತಿಯಲ್ಲಿ ಶತ್ರುಗಳನ್ನು ಗೆದ್ದುಬಿಟ್ಟೆ. ನಾನು ಮೊದಲೇ ಜೀವನ ಪರಿತ್ಯಾಗ ಮಾಡಿಬಿಟ್ಟಿದ್ದೆ. ಬದುಕಲು ಆಶಿಸುವ ಧೀರ ಎಂದಿಗೂ ಪರಾಕ್ರಮದ ಸಾಹಸ ಮಾಡುವುದಿಲ್ಲ.    296

4.            ಅರ್ಥ-ವಿನಿಮಯವನ್ನು ತಿಳಿದ ಜ್ಞಾನಿ ಆಪತ್ತು ಎದುರಾದಾಗ ಎಂದಿಗೂ ಭೀತಿ ಪಡುವುದಿಲ್ಲ. ಅದನ್ನು ಕಂಡ ಆತನ ಶತ್ರುಗಳು ಆತನ ಅವಿಕಾರ ಮುಖವನ್ನು ಕಂಡು ದುಃಖಿತರಾಗು
ತ್ತಾರೆ.      297

5.            ಅಪಾಯದ ವಿಷಯದಲ್ಲಿ ವಿಪತ್ತನ್ನು ಒಪ್ಪಬೇಕು. ಭವಿಷ್ಯದ ಭಯದಿಂದ ರಕ್ಷಿಸಿಕೊಳ್ಳಬೇಕು. ಧೀರ ಪುರುಷ ಬರಲಿರುವ ಅಪಾಯಗಳಿಂದ ತಪ್ಪಿಸಿಕೊಳ್ಳುತ್ತಾ ಉಭಯ ಲೋಕಗಳ ರಕ್ಷಣೆ ಮಾಡುತ್ತಾನೆ. 298


6.            ಗ್ರಾಮದಲ್ಲೂ ಭಯರಹಿತರಾಗಿದ್ದೇನೆ, ಅರಣ್ಯದಲ್ಲೂ ನನಗೆ ಭಯವಿಲ್ಲ. ಋಜು ಮಾರ್ಗದಲ್ಲಿ ಕೂಡಿರುವವನಾಗಿ ಮೈತ್ರಿ ಮತ್ತು ಕರುಣೆಯಿಂದ ಕೂಡಿದ್ದೇನೆ.            299

No comments:

Post a Comment