Sunday 23 April 2017

The Quotes on kamma ಕರ್ಮ

                             65. ಕರ್ಮ


1.            ನಾನು ಕ್ರಿಯೆಯನ್ನು ಬೋಧಿಸುತ್ತೇವೆ... ಹಾಗೆಯೇ ಅಕ್ರಿಯೆಯನ್ನು ಬೋಧಿಸುತ್ತೇನೆ. ನಾನು ಕುಶಲ ನುಡಿ, ಕುಶಲ ಕಾರ್ಯ ಮತ್ತು ಕುಶಲ ಮನಸ್ಸಿನ ಭಾವನೆಯನ್ನು ಬೋಧಿಸುತ್ತೇನೆ. ಹಾಗೆಯೇ ಅಕುಶಲ ನುಡಿ, ಅಕುಶಲ ಕಾರ್ಯ ಮತ್ತು ಅಕುಶಲ ಚಿತ್ತದ ನಾಶದ ಅಕ್ರಿಯೆ ಬೋಧಿಸುತ್ತೇನೆ.                331

2.            ಮೂರ್ಖರು ಮಾತ್ರ ಅದೃಷ್ಟದ ದಿನ (ಕಾಲ)ಕ್ಕಾಗಿ ಕಾಯುತ್ತಾರೆ, ಆದರೆ ಪ್ರಯತ್ನಶಾಲಿಗೆ ಪ್ರತಿದಿನವೂ ಅದೃಷ್ಟವೇ ಆಗಿರು
ತ್ತದೆ.        332

3.            ಯಾವರೀತಿಯ ಬೀಜ ಬಿತ್ತುವಿರೋ ಅದೇರೀತಿಯ ಫಲವನ್ನು ಪಡೆಯುವಿರಿ. ಹಾಗೆಯೇ ಒಳ್ಳೆಯದನ್ನು ಮಾಡುವವ ಒಳಿತನ್ನು ಪಡೆಯುತ್ತಾನೆ ಮತ್ತು ಕೆಟ್ಟದ್ದನ್ನು ಮಾಡುವವ ಕೆಡುಕನ್ನು ಪಡೆಯುತ್ತಾನೆ.               333

4.            ಲೋಕವು ಕರ್ಮದಿಂದಲೇ ನಡೆದುಬಂದಿದೆ. ಪ್ರಜೆಗಳು ಕರ್ಮದಿಂದಲೇ ಚಲಿಸುತ್ತಿರುವರು. ಚಲಿಸುತ್ತಿರುವ ರಥದ ಚಕ್ರದ ರೀತಿ ಜೀವಿಗಳೆಲ್ಲಾ ಕರ್ಮದಿಂದ ಬಂಧಿತರಾಗಿರುವರು.         334

5.            ಆಕಾಶದಲ್ಲಿಯಾಗಲಿ ಅಥವಾ ಸಾಗರ ಮಧ್ಯದಲ್ಲಾಗಲಿ ಅಥವಾ ಪರ್ವತದ ಗುಹೆಯಲ್ಲಾಗಲಿ, ಪಾಪಿಯು ಅವರ ಫಲದಿಂದ ತಪ್ಪಿಸಿಕೊಳ್ಳಬಹುದಾದ ಸ್ಥಳವು ಜಗತ್ತಿನಲ್ಲಿ ಎಲ್ಲಿಯೂ

ಇಲ್ಲ.        335

No comments:

Post a Comment