Saturday 15 April 2017

quotes on meritorious deeds ಪುಣ್ಯ

                             63. ಪುಣ್ಯ


1.            ಸತ್ಕಾರ್ಯ ಮಾಡುವುದರಲ್ಲೇ ತ್ವರಿತನಾಗು, ಕೆಟ್ಟದ್ದರಿಂದ ನಿನ್ನ ಮನಸ್ಸನ್ನು ನಿಯಂತ್ರಿಸು, ಯಾರ ಮನಸ್ಸು ಕುಶಲ ಕಾರ್ಯಗಳನ್ನು ಮಾಡಲು ಹಿಂದುಮುಂದು ನೋಡುತ್ತದೋ ಅಥವಾ ನಿಧಾನಿಸುತ್ತದೋ ಆತನ ಮನಸ್ಸು ಪಾಪದಲ್ಲಿ ರಮಿಸು
ತ್ತದೆ.        322

2.            ನನಗೆ ಪುಣ್ಯವು ತಟ್ಟುವುದಿಲ್ಲ ಎಂದು ಪುಣ್ಯವನ್ನು ಅಲ್ಪವೆಂದು ಅಲಕ್ಷಿಸಬೇಡ, ಒಂದೊಂದೇ ಹನಿಯಿಂದ ನೀರಿನ ಪಾತ್ರೆ ತುಂಬುವಂತೆ ಪುಣ್ಯವನ್ನು ಜಾಣನು ತುಂಬುತ್ತಾನೆ.        323

3.            ಅಸಹಿಷ್ಣುಗಳಲ್ಲಿ ಕ್ಷಾಂತಿಶೀಲನೂ, ಕ್ರೂರಿಗಳಲ್ಲಿ ಸಾಧುವು ಮತ್ತು ಲೋಭಿಗಳಲ್ಲಿ ವಿರಾಗಿಯಾಗಲಿ.          324

4.            ಕುಶಲ ಕಾರ್ಯಗಳು ಮಾನವನಿಗೆ ಅತ್ಯುತ್ತಮ ಜನ್ಮ ಪ್ರಾಪ್ತಿ ಮಾಡಿಸುತ್ತವೆ ಮತ್ತು ವಿಮುಕ್ತಿಗೆ ಸಮೀಪ ಮಾಡುತ್ತವೆ. 325


5.            ಪುಣ್ಯವನ್ನು ಗಳಿಸುವ 3 ವಿಧಗಳಿವೆ. ದಾನಪಾಲನೆ, ಶೀಲಪಾಲನೆ ಮತ್ತು ಸಮಾಧಿ ಪ್ರಾಪ್ತಿ.     326

No comments:

Post a Comment