Saturday 15 April 2017

quotes on wise ಜ್ಞಾನಿ

                           60. ಜ್ಞಾನಿ


1.            ಕೊಲ್ಲುವಿಕೆ, ಕಳ್ಳತನ, ಸುಳ್ಳು, ಮದ್ಯಪಾನ ಮತ್ತು ವ್ಯಭಿಚಾರ ಇವು ಜ್ಞಾನಿಗಳಿಂದ ಎಂದಿಗೂ ಪ್ರಶಂಸೆ ಗಳಿಸಲಾರದು.   305

2.            ಜ್ಞಾನಿಯು ತನ್ನ ವರ್ತನೆಯನ್ನು ಪ್ರತಿದಿನ ಪರೀಕ್ಷೆ ಮಾಡುತ್ತಿರುತ್ತಾನೆ.    306

3.            ಒಬ್ಬನು ಪರರು ಏನು ಸಾಧಿಸಿದ್ದಾರೆ ಮತ್ತು ಏನನ್ನು ತ್ಯಜಿಸಿದ್ದಾರೆ ಎಂದು ಪರರ ತಪ್ಪನ್ನು ಹುಡುಕದಿರಲಿ. ಬದಲಾಗಿ ತಾನು
ಏನನ್ನು ಸಾಧಿಸಿದ್ದೇನೆ ಹಾಗು ಏನನ್ನು ತ್ಯಜಿಸಿಲ್ಲ ಎಂದು ಅನ್ವೇಷಿಸಲಿ.    307

4.            ಕಾರ್ಯಗಳೇ ಮಾನವನನ್ನು ಶ್ರೇಷ್ಠ ಮತ್ತು ಶುದ್ಧನನ್ನಾಗಿ ಮಾಡುತ್ತವೆ.   308

5.            ಸಾಧುಗಳು ಪ್ರತಿಯೊಂದರ ಆಸಕ್ತಿಯನ್ನು ತ್ಯಜಿಸುತ್ತಾರೆ. ಸಂತರು ಭೋಗಕ್ಕೆ ಹಾತೊರೆಯುವುದಿಲ್ಲ ಮತ್ತು ಜ್ಞಾನಿಗಳು ಸುಖಕ್ಕೆ ಅಥವಾ ದುಃಖಕ್ಕೆ ಸಿಲುಕಿದಾಗ ಹಿಗ್ಗುವುದೂ ಇಲ್ಲ, ಕುಗ್ಗುವುದು ಇಲ್ಲ.      309


6.            ತನಗೆ ತೋಚಿದ ಹಾಗೆ ತೀಮರ್ಾನ ಹೇಳುವವನು ಧಮರ್ಿಷ್ಟನಲ್ಲ, ವಿವೇಕಿಯು ಒಳಿತು ಹಾಗು ಕೆಡುಕನ್ನು ಅನ್ವೇಷಿಸಿ ತಿಳಿಸುತ್ತಾನೆ.                 310

No comments:

Post a Comment