Tuesday 4 April 2017

quotes on foolishness ಮೂರ್ಖ

                               54. ಮೂರ್ಖ


1.            ಮೂರ್ಖನಿಗೆ ಜ್ಞಾನ ಮತ್ತು ಕೀತರ್ಿ ಸಿಗುವುದು. ಆತನ ನಾಶಕ್ಕಾಗಿಯೇ, ಅದು ಅವನ ಯಶಸ್ಸನ್ನು ನಾಶಪಡಿಸಿ ಆತನ ತಲೆ ತಿರುಗಿಸುತ್ತದೆ.                276

2.            ಅಲ್ಪಜ್ಞ ಮಾನವರಿಗೆ ಪಶುಗಳಂತೆ ಮಾಂಸ ಬೆಳೆದಿರುತ್ತದೆಯೇ ಹೊರತು ಜ್ಞಾನ ಬೆಳೆದಿರುವುದಿಲ್ಲ.        277

3.            ಯಾರು ದೋಷರಹಿತರಾದ ಶುದ್ಧ, ನಿರ್ಮಲ, ಪುರುಷರಿಗೆ ದ್ವೇಷಿಸುತ್ತಾರೋ ಅವರ ಪಾಪ ಎದುರು ದಿಕ್ಕಿನಲ್ಲಿ ಬರುತ್ತಿರುವ ಗಾಳಿಗೆ ದೂಳನ್ನು ಎಸೆದಂತೆ ಅದೇ ಮೂರ್ಖರ ಮೇಲೆ ಬೀಳುತ್ತದೆ.    278

4.            ಯಾರಲ್ಲಿ ಕೊರತೆಯಿರುವುದೋ ಆತನು ಕೀತರ್ಿಗಾಗಿ ಪ್ರಚಾರ (ಶಬ್ದ) ಮಾಡುತ್ತಾನೆ. ಆದರೆ ಪೂರ್ಣವಾಗಿರುವವರು ಶಾಂತರಾಗಿರುತ್ತಾರೆ. ಮೂರ್ಖ ಅರ್ಧ ತುಂಬಿದ ಗಡಿಗೆಯಂತೆ, ಆದರೆ ಪಂಡಿತರು ತುಂಬಿದ ಜಲಾಶಯದಂತೆ
ಇರುತ್ತಾರೆ.              279
                        

No comments:

Post a Comment