Saturday 15 April 2017

quotes on service ಸೇವೆ

                                     62. ಸೇವೆ


1.            ಸಮಾಜ ಸೇವೆಯ ನಾಲ್ಕು ನಿಯಮಗಳು : 1. ದಾನಿಯಾಗಿರು ವುದು  2. ಸಭ್ಯ ಮಾತು  3. ಸಮದಶರ್ಿತ್ವ  4. ಶೀಲವಂತಿಕೆ ಚಕ್ರಕ್ಕೆ ಕಡ್ಡಿಗಳಿರುವಂತೆ ಇವುಗಳಿಂದ ಸಮಾಜ ಸಾಗು
ತ್ತದೆ.        316

2.            ಯಾರು ಸಮಾಜದ ಸೇವೆ ಮಾಡ ಬಯಸುವರೋ ಅವರು ಸರ್ವರ ಮಿತ್ರರಾಗಿರಬೇಕು. ಯಾರಿಗೆ ಸಹಾಯ ಮಾಡಬೇಕೋ ಅವರ ಅವಶ್ಯಕತೆ ತಿಳಿಯಬೇಕು, ದಾನಿಯಾಗಬೇಕು. ಕ್ಷಮಾವಂತ ಸಹನೆಯುಳ್ಳವರಾಗಬೇಕು. ಅಂತಹವರು ಖ್ಯಾತಿ ಹೊಂದುತ್ತಾರೆ.           317

3.            ನೀವು ಸಹನಾಶೀಲರಾಗಬೇಕು, ಕರುಣಾಭರಿತರಾಗಬೇಕು. ಸದಾ ಸೇವಾ ಮನೋಭಾವದಿಂದ ಕೂಡಿರಬೇಕು.    318

4.            ಬಹುಜನ ಸುಖಕ್ಕಾಗಿ, ಬಹುಜನ ಹಿತಕ್ಕಾಗಿ, ಲೋಕಾನುಕಂಪ ದಿಂದ ಚಲಿಸಿರಿ, ಸೇವೆಮಾಡಿ.                319

5.            ಹೂವಿನ ರಾಶಿಯಿಂದ ಅನೇಕ ಹಾರಗಳನ್ನು ಮಾಡುವ ರೀತಿಯಲ್ಲೇ ಮಾನವನಾದ ಮೇಲೆ ಅನೇಕ ಸತ್ಕಾರಗಳನ್ನು ಮಾಡಬೇಕು.      320

6.            ನಾವು ಪರರನ್ನು ಸಲಹುವುದರಲ್ಲಿ ಸೋತರೆ, ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ?         321


No comments:

Post a Comment