Saturday 13 May 2017

QUOTES ON SEEING EQUALITY ಸಮದಶರ್ಿತ್ವ

          82. ಸಮದಶರ್ಿತ್ವ


1.            ಬಡವ ಅಥವಾ ಶ್ರೀಮಂತರೆನ್ನದೆ, ಶ್ರೇಷ್ಠ ಅಥವಾ ನೀಚರೆನ್ನದೆ ಪ್ರತಿಯೊಬ್ಬರಿಗೂ ಸಮನಾಗಿ ಕಾಣು. 410

2.            ಪ್ರಾಣಿಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಬೇಧವಿದೆ. ಹುಲ್ಲು ಹಾಗು ವೃಕ್ಷಗಳಲ್ಲಿ ಸಹಾ, ಅವು ಒಂದರಿಂದ ಇನ್ನೊಂದು ಬೇಧವಿದೆ. ಮಾನವರ ಶರೀರದಲ್ಲಿ ರೀತಿಯ ಭೇದವು ಸಿಗುವುದಿಲ್ಲ. ಲೋಕದಲ್ಲಿ ಯಾವ ಸಂಜ್ಞೆಗಳು ಇವೆಯೋ ಅವು ಕಲ್ಪಿತಸೂತ್ರ ವಾಗಿದೆ. ಅಲ್ಲಲ್ಲಿ ಕಲ್ಪಿಸಿ ಲೋಕ ವ್ಯವಹಾರವು ನಡೆದುಬಂದಿದೆ.411

3.            ನೀವೂ ಹೇಗೋ ಹಾಗೆಯೇ ಇಡೀ ಜೀವಿಗಳು ಮೈತ್ರಿ ಮತ್ತುಕರುಣೆಗೆ ಅರ್ಹವಾಗಿವೆ.           412


4.            ಭಿಕ್ಷುಗಳೇ, ಜೀವಿಗಳನ್ನು ಹುಡುಕುವುದು ಅಷ್ಟು ಸುಲಭವಲ್ಲ. ಹಿಂದಿನ ಜನ್ಮದಲ್ಲಿ ಅವರು ನಿಮ್ಮ ತಾಯಿಯಾಗಿರಬಹುದು, ತಂದೆಯಾಗಿರಬಹುದು, ಸೋದರನಾಗಿರಬಹುದು, ಸೋದರಿ ಯಾಗಿರಬಹುದು, ಮಗನಾಗಿರಬಹುದು ಅಥವಾ ಮಗಳಾಗಿರ ಬಹುದು. ಇಲ್ಲಿ ಅಸ್ತಿತ್ವಗಳು ನಿರಂತರ ಬಂದು ಹೋಗುತ್ತಲೆ ಇರುತ್ತವೆ.                413

No comments:

Post a Comment