Wednesday 24 May 2017

QUOTES ON SELF CONTROL 93. ಸ್ವ-ನಿಯಂತ್ರಣ

                      93. ಸ್ವ-ನಿಯಂತ್ರಣ


1.            ಚಕ್ಷುವಿನ ಮೇಲಿನ ಸಂಯಮ ಸಾಧುವಾದುದು.
                ಕಿವಿಯ ಮೇಲಿನ ಸಂಯಮ ಸಾಧುವಾದುದು.
                ಘ್ರಾಣದ ಮೇಲಿನ ಸಂಯಮ ಸಾಧುವಾದುದು.
                ಜಿಹ್ವಾದ ಮೇಲಿನ ಸಂಯಮ ಸಾಧುವಾದುದು.      470

2.            ಕಾಯದ ಮೇಲಿನ ಸಂಯಮ ಸಾಧುವಾದುದು.
                ಮಾತಿನ ಮೇಲಿನ ಸಂಯಮ ಸಾಧುವಾದುದು.
                ಮನಸ್ಸಿನ ಮೇಲಿನ ಸಂಯಮ ಸಾಧುವಾದುದು.
                ಸರ್ವ ವಿಷಯದ ಮೇಲಿನ ಸಂಯಮ ಸಾಧುವಾದುದು.
                ಸರ್ವ ವಿಷಯದಲ್ಲಿ ಸಂಯಮವಿರುವ ಭಿಕ್ಖು ಸರ್ವ ದುಃಖದಿಂದ ವಿಮುಕ್ತನಾಗುತ್ತಾನೆ.          471

3.            ಹಸ್ತಗಳ ಬಗ್ಗೆ ನಿಯಂತ್ರಣ, ಪಾದಗಳ ಬಗ್ಗೆ ನಿಯಂತ್ರಣ, ಮಾತಿನಲ್ಲಿ ನಿಯಂತ್ರಣ ಮತ್ತು ಉತ್ತಮವಾದುದರಲ್ಲಿ (ಮನಸ್ಸಿನಲ್ಲಿ) ನಿಯಂತ್ರಣ ಪಡೆದವನು, ತನ್ನಲ್ಲೇ ಆನಂದಿತ ನಾಗುತ್ತಾನೆ. ಸಮಾಹಿತನಾಗುತ್ತಾನೆ. ಏಕಾಂಗಿಯಾಗಿ, ತೃಪ್ತ ನಾಗುತ್ತಾನೆ. ಅಂತಹವರನ್ನು ಭಿಕ್ಖು ಎನ್ನುತ್ತಾರೆ.            472

4.            ಜ್ಞಾನಿಗಳು ಕ್ರಿಯೆಯಲ್ಲಿ ನಿಯಂತ್ರಿತರಾಗಿರುತ್ತಾರೆ. ಮಾತಿನಲ್ಲಿ ನಿಯಂತ್ರಿತರಾಗಿರುತ್ತಾರೆ. ಯೋಚನೆಯಲ್ಲಿ ನಿಯಂತ್ರಿತರಾಗಿರು ತ್ತಾರೆ. ನಿಜಕ್ಕೂ ಅವರು ಪೂರ್ಣ ನಿಯಂತ್ರಿತರಾಗಿರುತ್ತಾರೆ. 473

                             

No comments:

Post a Comment