Wednesday 24 May 2017

quotes on evil friend ಕೆಟ್ಟ ಮಿತ್ರ

                                  91. ಕೆಟ್ಟ ಮಿತ್ರ



1.            ನಿರ್ಲಜ್ಯ ವ್ಯವಹಾರ ಮಾಡುವವನು, ಅಂತರಂಗದಲ್ಲಿ ಅಸಹ್ಯಿಸುವವನು, ಸಾಮಥ್ರ್ಯದ ಮಾತು ಬಂದಾಗ ಇಲ್ಲವೆಂದು ಹೇಳುವವನು ಮಿತ್ರನಲ್ಲ ಎಂದು ತಿಳಿಯಬೇಕು.        459

2.            ಯಾರು ಸದಾ ಮಿತ್ರನೆಂದೇ ತೋರಿಸಿಕೊಳ್ಳುತ್ತಿರುವನೋ, ಜೊತೆಯಲ್ಲೇ ವೈಮನಸ್ವಭಾವದಿಂದಿರುವನೋ ಹಾಗು ದೋಷಗಳನ್ನು ಹುಡುಕುತ್ತಾ ಇರುವನೋ ಅವನು ಮಿತ್ರನಲ್ಲ.460

3.            ಅಲ್ಪವನ್ನು ನೀಡಿ ಮಹತ್ತನ್ನು ಪಡೆಯುವ, ಸಹಾಯದ ವೇಳೆ ಭಯದಿಂದ ಮಾಡುವವ, ಏನಾದರೂ ಪಡೆಯಲೆಂದೇ ಭೇಟಿ ಮಾಡುವವ ಸ್ವಾರ್ಥ ಮಿತ್ರನಾಗಿರುತ್ತಾನೆ, ಆತನು ಮಿತ್ರನಲ್ಲ.461

4.            ಕಷ್ಟಕಾಲದಲ್ಲಿ ನೆಪಹೇಳಿ ಜಾರುವ, ಸಿಹಿಮಾತುಗಳನ್ನು ಹೇಳುವವ, ಬರೀ ಮಾತಿನಲ್ಲಿ ಸ್ನೇಹ ತೋರುವ ಮಿತ್ರ ರೀತಿ ಇರುತ್ತಾನೆ.                462

5.            ಪಾಪಕ್ಕೆ ಪ್ರೋತ್ಸಾಹಿಸುವ, ಪುಣ್ಯಕಾರ್ಯಕ್ಕೆ ನಿರಾಕರಿಸುವ, ಮುಂದೆ ಹೊಗಳುವವ, ಹಿಂದೆ ತೆಗಳುವವ ಮಿತ್ರನಲ್ಲ.           463

6.            ಕುಡಿತಕ್ಕೆ, ಜೂಜಿಗೆ, ನೃತ್ಯ ಸ್ಥಳಗಳಿಗೆ, ಬೀದಿ ಸುತ್ತಾಡಿಸುವವ, ಇಂತಹುದೆಲ್ಲಕ್ಕೆ ಪ್ರೋತ್ಸಾಹಿಸುವವನು ಐಶ್ವರ್ಯ ನಾಶ ಮಾಡಲು ಬಂದ ಶತ್ರು ಎಂದೇ ತಿಳಿಯಿರಿ.   464


No comments:

Post a Comment