Saturday 13 May 2017

QUOTES ON POPULARITY ಜನಪ್ರಿಯತೆ

      83. ಜನಪ್ರಿಯತೆ

1.            ಯಾರು ಧಮ್ಮಕ್ಕೆ ಅನುಗುಣವಾಗಿ ನಡೆಯುವರೋ, ಸಮ್ಮ ದೃಷ್ಟಿಯುಳ್ಳವರೋ, ಸತ್ಯವಂತರೋ ಮತ್ತು ಕರ್ತವ್ಯಕ್ಕೆ ಅನುಸಾರವಾಗಿ ಪರಿಶ್ರಮಪಡುವರೋ ಅವರು ಜನರಿಗೆ ಪ್ರಿಯರಾಗುವರು.     414

2.            ಬೋಧಿಸುವವರು, ಸಲಹೆ ನೀಡುವವರು ಮತ್ತು ಪಾಪದಿಂದ ದೂರವಿರಲು ಒತ್ತಾಯಿಸುವವರು ಸತ್ಪುರುಷರಿಗೆ ಪ್ರಿಯ ರಾಗುವರು ಮತ್ತು ಅಸತ್ಪುರುಷರಿಗೆ ಅಪ್ರಿಯರಾಗುವರು. 415

3.            ಕೆಲಸ ನನ್ನಿಂದಾಯಿತು, ಪ್ರತಿಕಾರ್ಯ ಸಣ್ಣದು ಅಥವಾ ಶ್ರೇಷ್ಠದ್ದು ನನ್ನಿಂದಾಯಿತು ಎಂದು ಗೃಹಸ್ಥರು ಮತ್ತು ಪಬ್ಬಜಿತರು ಭಾವಿಸಲಿ. ಇಂತಹ ಅಭಿಲಾಶೆಯು ಮುರ್ಖನದ್ದಾಗಿರುತ್ತದೆ. ಇದರಿಂದ ಆತನು ಬಯಕೆಗಳು ಮತ್ತು ಅಹಂಕಾರ ಹೆಚ್ಚಾಗುತ್ತಿರುತ್ತದೆ.   416

4.            ಯಾರ ಇಂದ್ರಿಯಗಳು ಶಾಂತವಾಗಿವೆಯೋ, ಸಾರಥಿಯಿಂದ ಪಳಗಿಸಲ್ಪಟ್ಟ ಉತ್ತಮಾಶ್ವಗಳಂತೆ ಯಾರ ಅಹಂಕಾರವು ನಾಶವಾಗಿದೆಯೋ, ಅಸವಗಳಿಂದ ಮುಕ್ತರೋ, ಅಂತಹನಿಗೆ ದೇವತೆಗಳೂ ಸಹಾ ಪ್ರಿಯರೆಂದು ಭಾವಿಸುವರು.  417

5.            ಯಾರು ಶೀಲದಲ್ಲಿ, ದರ್ಶನದಲ್ಲಿ ಸಂಪನ್ನರೋ, ಧಮ್ಮದಲ್ಲಿ ಸುಸ್ಥಾಪಿತರೋ, ಸತ್ಯಗಳನ್ನು ಸಾಕ್ಷಾತ್ಕರಿಸಿರುವರೋ ಮತ್ತು ಯಾರು ತಮ್ಮ ಕರ್ತವ್ಯಗಳನ್ನು ಪೂರೈಸಿರುವರೋ ಅಂತಹವರನ್ನು ಜನರು ಪ್ರಿಯರೆಂದು ಭಾವಿಸುವರು.    418


6.            ಯಾರು ಶ್ರದ್ಧಾಶೀಲ ಸಂಪನ್ನರೋ, ಯಶಸ್ಸನ್ನು ಮತ್ತು ಭೋಗ ಸಂಪತ್ತನ್ನು ಯಾರು ಉಳ್ಳವನಾಗಿದ್ದಾನೋ ಆತ ಎಲ್ಲೆಲ್ಲಿಯೇ ಹೋಗಲಿ, ಅಲ್ಲೆಲ್ಲಾ ಗೌರವ ಪಡೆಯುತ್ತಾನೆ, ಪೂಜಿತನಾಗುತ್ತಾನೆ.419

No comments:

Post a Comment