Saturday 13 May 2017

QUOTES ON DOUBT ಸಂಶಯ

          85. ಸಂಶಯ

1.            ಸಂಶಯದಷ್ಟು ಭಯಾನಕ ಚಟ ಇನ್ನೊಂದಿಲ್ಲ. ಸಂಶಯವು ಜನರನ್ನು ಬೇರ್ಪಡಿಸುತ್ತದೆ. ಸಂಶಯವು ಮುಳ್ಳಿನಂತೆ ಘಾತಿಸುತ್ತಲೇ ಇರುತ್ತದೆ. ಸಂಶಯವು ಖಡ್ಗದಂತೆ ಸಾಯಿಸುತ್ತದೆ. ಸಂಶಯವು ವಿಷದಂತೆ ಮಿತ್ರತ್ವವನ್ನು ಹಾಳು ಮಾಡಿ ಸಂಬಂಧಗಳನ್ನು ಹರಿದು ಹಾಕುತ್ತದೆ. 427
2.            ಯಾರು ಬುದ್ಧರಲ್ಲಿ, ಧಮ್ಮದಲ್ಲಿ, ಸಂಘದಲ್ಲಿ ವಿನಯದಲ್ಲಿ ಸಂಶಯಪಡುತ್ತಾನೋ ಆತನು ಶ್ರದ್ಧೆಯಿಡುವುದಿಲ್ಲ. ಆತನು ಸಿಟ್ಟಿಗೇಳುತ್ತಾನೆ. ಅಸಂತುಷ್ಟನಾಗಿರುತ್ತಾನೆ. ದ್ವೇಷಿಸುವ ಮನಸ್ಸನ್ನು ಉಳ್ಳವನಾಗಿರುತ್ತಾನೆ, ಮೊಂಡನಾಗಿರುತ್ತಾನೆ. ಅಂತಹವರು ರಾಗದಿಂದ ಕೂಡಿರುತ್ತಾರೆ. ಅವರು ಧಮ್ಮದಲ್ಲಿ ಏಳಿಗೆ ಹೊಂದುವುದಿಲ್ಲ.         428
3.            ಯಾರಿಗೆ ಬಂಧನವು ಇಲ್ಲವೋ, ಯಾರು ಪೂರ್ಣ ಪ್ರಜ್ಞೆಯಿಂದಾಗಿ ಎಲ್ಲಾ ಸಂಶಯಗಳನ್ನು ಇಲ್ಲವಾಗಿಸಿ ಕೊಂಡಿರುವರೋ ಮತ್ತು ಅಮರತ್ವವನ್ನು ಸಿದ್ಧಿಸಲು ಸಿದ್ಧನೋ ಆತನನ್ನು ನಾನು ಬ್ರಾಹ್ಮಣ (ಶ್ರೇಷ್ಠ) ಎನ್ನುತ್ತೇನೆ.  429

4.            ಇಲ್ಲಿಯದನ್ನು ಕುರಿತ, ಮುಂದಿನದನ್ನು ಕುರಿತ ಯಾವ ಸಂಶಯಗಳಿವೆಯೋ ತಾನೇ ಅರಿತಿರುವುದಾಗಲಿ ಅಥವಾ ಪರರಿಗೆ ತಿಳಿದವುಗಳಾಗಲಿ, ಅವೆಲ್ಲವನ್ನು ಧ್ಯಾನಿಗಳಾದವರು ಪರಿಹರಿಸಿ ತೊರೆಯುತ್ತಾರೆ. ಶ್ರದ್ಧೆಯಿಂದ ಬ್ರಹ್ಮಚರ್ಯ ಜೀವನ ಪಾಲಿಸುತ್ತಾರೆ.             430

No comments:

Post a Comment