Wednesday 24 May 2017

QUOTES ON NO-SELF

              99. ಅನಾತ್ಮ


1.            ದೇಹವು ನಾನಲ್ಲ. ದೇಹವೇ ನಾನಾಗಿದ್ದರೆ ಶರೀರಕ್ಕೆ ರೋಗವೇ ಬರುತ್ತಿರಲಿಲ್ಲ.         495

2.            ಯಾರು ಇದು ನನ್ನದು ಎಂದು ಎಂದಿಗೂ ಯೋಚಿಸುವು ದಿಲ್ಲವೋ ಆತನಿಗೆ ಯಾವುದೋ ಕೊರತೆ ಇದೆ ಎಂದು ಅನಿಸುವುದಿಲ್ಲ. ಹೀಗಾಗಿ ಆತ ಎಂದಿಗೂ ನಷ್ಟದ ಬಗ್ಗೆ ಚಿಂತೆಗೀಡಾಗುವುದಿಲ್ಲ.       496

3.            ಯಾರಿಗೆ ಯಾವುದೇ ವಸ್ತು ವಿಷಯದಲ್ಲಿ ಇದು ನನ್ನದು ಅಥವಾ ಇದು ಪರರದು ಹೀಗೆ ಅನಿಸುವುದಿಲ್ಲವೋ ಅಂತಹದು ಮಮತ್ವದಲ್ಲಿ ಬೀಳದಿರುವವನು ನನ್ನದಲ್ಲ ಎಂದು ಅರಿತು ಶೋಕಿಸುವುದಿಲ್ಲ.                497

4.            ದೇಹವು ಹೀಗಿರಲಿ ಅಥವಾ ಹಾಗಿರಲಿ ಎಂದರೆ ಹಾಗೆ ಆಗುವುದಿಲ್ಲ. ವೇದನೆಗಳು ಹೀಗಿರಲಿ, ಅಥವಾ ಹಾಗಿರಲಿ. ಎಂದರೆ ಹಾಗೆ ಆಗುವುದಿಲ್ಲ. ಗ್ರಹಿಕೆಗಳು ಹೀಗಿರಲಿ, ಅಥವಾ ಹಾಗಿರಲಿ. ಎಂದರೆ ಹಾಗೆ ಆಗುವುದಿಲ್ಲ. ಸಂಖಾರಗಳು ಹೀಗಿರಲಿ, ಅಥವಾ ಹಾಗಿರಲಿ. ಎಂದರೆ ಹಾಗೆ ಆಗುವುದಿಲ್ಲ. ಮನಸ್ಸು ಹೀಗಿರಲಿ, ಅಥವಾ ಹಾಗಿರಲಿ. ಎಂದರೆ ಹಾಗೆ ಆಗುವುದಿಲ್ಲ. ಇವೆಲ್ಲಾ ಅನಿತ್ಯವಾಗಿದೆ. ಯಾವುದು ಅನಿತ್ಯವೋ ಅದು ದುಃಖವಾಗಿದೆ. ಅಂತಹದನ್ನು ಇದು ನಾನು, ಇದು ನನ್ನದು ಅಥವಾ ಇದು ನನ್ನ ಆತ್ಮ ಎಂದು ಪರಿಗಣನೆ ಮಾಡಲಾಗುವುದಿಲ್ಲ.      498

5.            ಅಜ್ಞಾನಿಯು ದೇಹಕ್ಕೆ ಅಥವಾ ವೇದನೆಗೆ ಅಥವಾ ಗ್ರಹಿಕೆಗೆ ಅಥವಾ ಯೋಚನೆಗೆ ಅಥವಾ ಅರಿವಿಗೆ ನಾನು ಎಂದು ಭಾವಿಸುತ್ತಾನೆ. ಅಥವಾ ನಾನು ಎಂಬುದು ಗುಂಪಿಗೆ ನಾಯಕ ಎಂದು ಭಾವಿಸುತ್ತಾನೆ.       499


No comments:

Post a Comment