Saturday 13 May 2017

QUOTES ON BEHAVIOR ವರ್ತನೆ

           81. ವರ್ತನೆ


1.            ಹಳೆಯದನ್ನು ಅಭಿನಂದನೆ ಮಾಡದಿರಲಿ, ಹೊಸದನ್ನು ಬಯಸದಿರಲಿ. ಕಳೆದು ಹೋದುದನ್ನು ಚಿಂತೆ ಮಾಡದಿರಿ ಮತ್ತು ತೃಷ್ಣೆಯಲ್ಲಿ ಲಿಪ್ತನಾಗದಿರಲಿ.                406

2.            ಶರೀರದಿಂದ ಯಾವ ಕರ್ಮ ಮಾಡಲು ಹೋಗುತ್ತಿರುವಿರೋ, ಆದ್ದರಿಂದ ನಮಗೆ ಅಥವಾ ಪರರಿಗೆ ದುಃಖವಾಗುವುದೇ ಎಂದು ಪರಿಶೀಲಿಸಬೇಕು. ಹಾಗು ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ಸುಖಕಾರಿಯೇ ಎಂದು ಪರಿಶೀಲಿಸಬೇಕು, ನಂತರ ಕಾರ್ಯ ಮಾಡಬೇಕು.      407

3.            ಕೆಲವರು ವಂದಿಸುವರು ಅಥವಾ ಕೆಲವರು ನಿಂದಿಸುವರು. ಅದರ ಪ್ರತಿಯಾಗಿ ಸಮಾನಭಾವದಿಂದಿರು, ಮನವನ್ನು ದೂಷಿತ ವನ್ನಾಗಿಸಬೇಡ. ಶಾಂತತೆ ಮತ್ತು ವಿನೀತನಾಗಿ ಸಂಚರಿಸು.408


4.            ಅಲಸ್ಯರಹಿತ ಚಿತ್ತದವನಾಗು, ಅವಿಶ್ರಾಂತಿಯುತ ಚಿಂತನೆ ಮಾಡದಿರು, ಕ್ಲೇಷರಹಿತ ಮತ್ತು ಅನಾಸಕ್ತನಾಗಿ ಬ್ರಹ್ಮಚರ್ಯ ಪಾಲನೆ ಮಾಡು.      409

No comments:

Post a Comment