Saturday 13 May 2017

QUOTES ON UPASAKA DHAMMA ಗೃಹಸ್ಥ ಧರ್ಮ

                      90. ಗೃಹಸ್ಥ ಧರ್ಮ


1.            ಲೋಕದಲ್ಲಿ ಸರ್ವ ಜೀವಿಗಳ ಬಗ್ಗೆ ದಂಡಶಾಸ್ತ್ರ ತ್ಯಜಿಸಲಿ... ಸರ್ವರೀತಿಯ ಕಳ್ಳತನ, ತ್ಯಾಗ ಮಾಡಲಿ... ಬ್ರಹ್ಮಚಾರ್ಯದ ಪಾಲನೆಯಿಲ್ಲದಿದ್ದರೂ ಪರಸ್ತ್ರಿಯನ್ನು ಸೇವಿಸದಿರಲಿ... ಸರ್ವ ಪ್ರಕಾರದ ಅಸತ್ಯ ಭಾಷಣ ತ್ಯಾಗ ಮಾಡಲಿ... ಅವನು ಮದ್ಯಪಾನ ಮಾಡದಿರಲಿ.     454

2.            ಪ್ರತ್ಯೇಕ ಪಕ್ಷದ ಚತುರ್ದಶಿ, ಹುಣ್ಣಿಮೆ, ಅಷ್ಟಮಿ ಹಾಗು ಪ್ರತಿಹಾರ್ಯ ಪಕ್ಷದಲ್ಲಿ ಪ್ರಸನ್ನ ಮನದಿಂದ ಅಷ್ಠಾಂಗಶೀಲ ಪಾಲನೆ ಮಾಡಿರಿ. ಭಿಕ್ಷು ಸಂಘಕ್ಕೆ ದಾನ ಮಾಡಿರಿ.      455

3.            ಧರ್ಮದಿಂದ ಮಾತಾಪಿತರ ಸೇವೆ ಮಾಡಲಿ. ಯಾವುದೇ ಧಾಮರ್ಿಕ ವೃತ್ತಿಯಲ್ಲಿ ತೊಡಗಿಸಲಿ. ಆತನು ಸ್ವಯಂಪ್ರಭಾ ಎಂಬ ದೇವಲೋಕದಲ್ಲಿ ಹುಟ್ಟುತ್ತಾನೆ.           456

4.            ಅವೇಳೆಯಲ್ಲಿ ಬೀದಿಗಳಲ್ಲಿ ಅಡ್ಡಾಡುವುದರಿಂದ ತನ್ನ ರಕ್ಷಣೆಗೆ, ಕುಟುಂಬದವರ ರಕ್ಷಣೆಗೆ, ಸಂಪತ್ತಿನ ರಕ್ಷಣೆಗೆ, ಘನತೆಯ ರಕ್ಷಣೆಗೆ, ಅಪಾಯ ಒದಗಿಬರುತ್ತದೆ.      457


5.            ವಿಷದಿಂದ ಲೇಪಿತವಾದ ಬಾಣವನ್ನು ಸ್ಪಶರ್ಿಸಿದ ಇತರ ಬಾಣಗಳಿಗೂ ವಿಷವು ಲೇಪಿಸುವಂತೆ ಪಾಪಿಯನ್ನು ಸೇವಿಸು ವವರೂ, ಅಂಥವರಿಂದ ಸೇವಿಸಲ್ಪಟ್ಟವರು ಕೆಟ್ಟು ಹೋಗುತ್ತಾರೆ. ಪಾಪದ ಪರಿಣಾಮದ ಭಯ ಇರುವ ಜ್ಞಾನಿಯು ಪಾಪಿಯ ಸಂಗವನ್ನು ಮಾಡುವುದು ಬೇಡ.   45

No comments:

Post a Comment